ವಿಕ್ರಾಂತ್ ರೋಣ ಹಾಡಿಗೆ ಸೊಂಟ ಬಳುಕಿಸಿದ ಮಲೆನಾಡ ಬೆಡಗಿ

By Infoflick Correspondent

Updated:Sunday, June 12, 2022, 15:16[IST]

ವಿಕ್ರಾಂತ್ ರೋಣ ಹಾಡಿಗೆ ಸೊಂಟ ಬಳುಕಿಸಿದ ಮಲೆನಾಡ ಬೆಡಗಿ

ಬಾದ್ಶಾ ಕಿಚ್ಚ ಸುದೀಪ್ ಸವರ ಅಭಿನಯದ ವಿಕ್ರಾಂತ್ ರೋಣ ಚಿತ್ರ ಈಗ ಎಲ್ಲೆಡೆ ಸುದ್ದಿಯಲ್ಲಿದೆ. ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ಕಾಯುತ್ತಿದೆ. ಇನ್ನು ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಈ ಚಿತ್ರ 3ಡಿಯಲ್ಲಿ ತೆರೆಕಾಣುತ್ತಿದೆ ಎಂಬುದು ಮತ್ತೊಂದು ವಿಶೇಷ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ಗಳಿಂದಲೇ ಸಿನಿಮಾ ಸದ್ದು ಮಾಡುತ್ತಿದೆ. ಇನ್ನು ಈ ಚಿತ್ರದ ಮೊದಲ ಲಿರಿಕಲ್ ಹಾಡು ರಿಲೀಸ್ ಆದಾಗಿನಿಂದಲೂ ಇದರದ್ದೇ ಸದ್ದು. 

ಸೋಶಿಯಲ್ ಮೀಡಿಯಾದಲ್ಲಿ ಸೆಲಬ್ರಿಟಿಗಳಿಂದ ಹಿಡಿದು ಪ್ರತಿಯೊಬ್ಬರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ರಾ, ರಾ ರಕ್ಕಮ್ಮ ಎಂದು ಕುಣಿದಿದ್ದೇ ಕುಣಿದಿದ್ದು. ಅಭಿಮಾನಿಗಳಂತೂ ಈ ಹಾಡಿನ ಜಪ ಮಾಡುತ್ತಿದ್ದು, ಸಿನಿಮಾ ರಿಲೀಸ್ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ವಿಕ್ರಾಂತ್ ರೋಣ ಲಿರಿಕಲ್ ವಿಡಿಯೋ ಈಗಾಗಲೇ ಎಲ್ಲೆಡೆ ಕಿಚ್ಚು ಹಚ್ಚಿಸಿದೆ. ಈ ಹಾಡು ಲಕ್ಷ ಲಕ್ಷ ವೀಕ್ಷಣೆ ಪಡೆದಿದೆ. ಈಗಾಗಲೇ ಈ ಹಾಡು ಎಲ್ಲಾ ಭಾಷೆಗಳಲ್ಲೂ ಹವಾ ಸೃಷ್ಠಿಸಿದೆ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಿದೆ. 

ಇನ್ ಸ್ಟಾಗ್ರಾಂನಲ್ಲಿ ಎಲ್ಲರೂ ರಾ ರಾ ರಕ್ಕಮ್ಮ ಎಂದು ರೀಲ್ಸ್ ಗಳನ್ನು ಮಾಡುತ್ತಿದ್ದಾರೆ. ಹಾಡಿನ ಸ್ಟೆಪ್ಸ್ ಹಾಕಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಬಸವರಾಜ್ ಎಂಬುವರು ಈ ಹಾಡಿಗೆ ಹೆಜ್ಜೆ ಹಾಕಿ ಮ್ಮ ಫಾಲೋವರ್ಸ್ ಗಳ ಸಂಖ್ಯೆಯನ್ನೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಕೆಂಬಣ್ಣದ ಸೀರೆಯುಟ್ಟು ಸೊಂಟ ಬಳುಕಿಸಿರುವ ಈ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ.