Big Boss 9 Kannada : ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೀಸನ್ 9 ಯಾವಾಗ ಶುರುವಾಗುತ್ತೆ ತಿಳಿಯಿರಿ..

By Infoflick Correspondent

Updated:Thursday, May 5, 2022, 11:53[IST]

Big Boss 9 Kannada : ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೀಸನ್ 9 ಯಾವಾಗ ಶುರುವಾಗುತ್ತೆ ತಿಳಿಯಿರಿ..

ಬಿಗ್ ಬಾಸ್ ಸೀಸನ್ 8 ಮುಗಿದಾಗಿನಿಂದ ವೀಕ್ಷಕರು ಸೀಸನ್ 9 ಯಾವಾಗ ಶುರುವಾಗುತ್ತೆ ಅಂತ ಕಾಯುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 8 ರಲ್ಲಿ ಮಂಜು ಪಾವಗಡ ವಿನ್ನರ್ ಆಗಿದ್ದು, ಅರವಿಂದ್ ಕೆಪಿ ರನ್ನರ್ ಹಾಗೂ ದಿವ್ಯಾ ಉರುಡುಗ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ನಿತ್ಯ ರಾತ್ರಿ ಬಿಗ್ ಬಾಸ್ ನೋಡಿಯೇ ಮಲಗುತ್ತಿದ್ದ ವೀಕ್ಷಕರು ಇನ್ಮುಂದೆ ಶೋ ನೋಡಲು ಕನಿಷ್ಠ ಎರಡು-ಮೂರು ತಿಂಗಳಾದರು ಬೇಕು ಎಂಬ ಬೇಸರದಲ್ಲಿದ್ದರು. ಆದರೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಆರಂಭವಾಗಿಲ್ಲ. 

ಆದರೆ, ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್ ಸೀಸನ್ ಅನ್ನು ಆರಂಭಿಸಲಾಯ್ತು. ಬಿಗ್ ಬಾಸ್ ಸೀಸನ್ 8ರ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಶೀಘ್ರದಲ್ಲೇ ಮತ್ತೊಂದು ಶೋ ಆರಂಭವಾಗುತ್ತೆ ಎಂದು ಹೇಳಿದ್ದರು. ಅದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಶನಿವಾರ ಮತ್ತು ಭಾನುವಾರ ಸಂಜೆ ನಾಲ್ಕು ಗಂಟೆಗೆ ಪ್ರಸಾರವಾದ ಈ ಶೋನಲ್ಲಿ ಧಾರಾವಾಹಿಗಳ ನಟ-ನಟಿಯರು ಭಾಗವಹಿಸಿದ್ದರು. ಅದೇ ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್ ಸೀಸನ್. ಕೇವಲ ಆರು ದಿನಗಳ ಕಾಲ ಶೋ ನಡೆಯಿತು.    

ಆದರೆ ಇದೀಗ ಬಿಗ್ ಬಾಸ್ ಸೀಸನ್ 9 ಅನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9 ಅಲ್ಸಿ ಯಾರು ಯಾರು ಸ್ಪರ್ಧಿಗಳಿದ್ದಾರೆ.? ಎಂದು ಕಾದಿದ್ದಾರೆ. ಆದರೆ ಇದರ ಬಗ್ಗೆ ಮಾಹಿತಿ ಕೊಡದ ಕಿಚ್ಚ ಸುದೀಪ್, ಯಾವಾಗ ಶುರುವಾಗಬಹುದು ಎಂದಿದ್ದರು. ಜನವರಿ ತಿಂಗಳಲ್ಲೇ ಬಿಗ್ ಬಾಸ್ ಸೀಸನ್ 9 ಶುರುವಾಗುತ್ತೆ ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಆದರೆ ಇನ್ನೂ ಆರಂಭವಾಗಿಲ್ಲ. ಆದರೆ ಇದೀಗ ಬಿಗ್ ಬಾಸ್ ಬಗ್ಗೆ ಹೊಸ ಸುದ್ದಿ ಬಂದಿದೆ. ಅದೇನೆಂದರೆ, ಅಕ್ಟೋಬರ್ ತಿಂಗಳಿನಲ್ಲಿ ಬಿಗ್ ಬಾಸ್ ಸೀಸನ್ 9 ಆರಂಭವಾಗಲಿದೆ ಎಂದು ತಿಳಿದು ಬಂದಿದೆ.