ಬಿಗ್ ಬಾಸ್ ಸ್ಪರ್ಧಿಯ ಮದುವೆ! ಆರತಕ್ಷತೆಗೆ ಯಾರೆಲ್ಲ ಭಾಗಿಯಾಗಿದ್ದಾರೆ ನೋಡಿ ?

By Infoflick Correspondent

Updated:Thursday, August 4, 2022, 14:47[IST]

ಬಿಗ್ ಬಾಸ್ ಸ್ಪರ್ಧಿಯ ಮದುವೆ! ಆರತಕ್ಷತೆಗೆ ಯಾರೆಲ್ಲ  ಭಾಗಿಯಾಗಿದ್ದಾರೆ ನೋಡಿ ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಆಂಡ್ರೂ ಜಯಪಾಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಂಡ್ 98 ದಿನಗಳ ಕಾಲವಿದ್ದರು. ಫಿನಾಲೆ ವೀಕ್‌ನ ಎಂಜಾಯ್ ಮಾಡಿ ನಾಲ್ಕನೇ ಸ್ಥಾನ ಪಡೆದುಕೊಂಡ್ಡರು.

ಬಿಗ್ ಬಾಸ್‌ ಸೀಸನ್ 6ರಲ್ಲಿ ರೆಕಾರ್ಡ್‌ ಬ್ರೇಕ್ ಮಾಡಿದ ಸ್ಪರ್ಧಿ ಆಂಡ್ರೂ ಜಯಪಾಲ್ ಉರ್ಫ್ ಆಂಡಿ ಬೆಂಗಳೂರಿನ ಚರ್ಚ್‌ವೊಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅರೇಂಜ್ಡ್‌ ಮ್ಯಾರೇಜ್‌ ಇದಾಗಿದ್ದು ಚರ್ಚ್‌ನಲ್ಲಿ ಬೆಳಗ್ಗೆ ಮದುವೆ ನಡೆದಿದ್ದು ಸಂಜೆ ಅರತಕ್ಷತೆ ಕಾರ್ಯಕ್ರಮ ನಡೆದಿದೆ.    

ಬಿಗ್ ಬಾಸ್ ಶೋ ನಂತರ ಲೈಮ್‌ ಲೈಟ್‌ನಿಂದ ದೂರ ಉಳಿದುಕೊಂಡಿದ್ದ ಆಂಡಿ ಮದುವೆ ಫೋಟೋವನ್ನು ಅಕ್ಷತಾ ಪಾಂಡವಪುರ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಕ್ಷತಾ ಪಾಂಡವಪುರ ಅವರ ಜೊತೆ ಗಾಯಕ ನವೀನ್ ಸಜ್ಜು, ಒಗ್ಗರಣೆ ಮುರಳಿ ಮದುವೆಯಲ್ಲಿ ಭಾಗಿಯಾಗಿದ್ದರು. ಈ ಮದುವೆಗೆ ಆಂಡಿ ಆತ್ಮೀಯರು, ಎರಡೂ ಕುಟುಂಬಸ್ಥರು ಭಾಗವಹಿಸಿದ್ದಾರೆ.