BBK 9 Contestants list : ಕೊನೆಗೂ ಬಿಗ್ಬಾಸ್ ಸೀಸನ್ 9ಕ್ಕೆ ಸ್ಪರ್ಧಿಗಳ ಲಿಸ್ಟ್ ರೆಡಿ..! ಇವರೇ ಫೈನಲ್ ಅಂತೆ ನೋಡಿ

By Infoflick Correspondent

Updated:Tuesday, September 20, 2022, 12:28[IST]

BBK  9 Contestants list :  ಕೊನೆಗೂ ಬಿಗ್ಬಾಸ್ ಸೀಸನ್ 9ಕ್ಕೆ ಸ್ಪರ್ಧಿಗಳ ಲಿಸ್ಟ್ ರೆಡಿ..! ಇವರೇ ಫೈನಲ್ ಅಂತೆ ನೋಡಿ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಗಮನ ಸೆಳೆದಿರುವ ಕಾರ್ಯಕ್ರಮ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ ಒಟ್ಟು ಎಂಟು ಸೀಸನ್ಗಳನ್ನು ಮುಗಿಸಿದೆ..ಹೌದು ಒಂಬತ್ತನೇ ಸೀಸನ್ಗೆ ಈಗಾಗಲೇ ಎಲ್ಲಾ ತಯಾರಿ ನಡೆಸಿದ್ದು ಇತ್ತೀಚಿಗೆ ಕನ್ನಡದ ಓಟಿಟಿ ಸೆಲೆಕ್ಟ್ ನಲ್ಲಿ ಪ್ರಸಾರವಾಗಿದ್ದ ಸೀಸನ್ 1 ಬಿಗ್ ಬಾಸ್ ಕಾರ್ಯಕ್ರಮ ಕೂಡ ಮುಗಿದಿದೆ. ಹೌದು 8 ಜನರ ಫೈನಲಿಸ್ಟ್ ಪೈಕಿ ನಾಲ್ಕು ಜನರು ಈ ಬಿಗ್ ಬಾಸ್ ಸೀಸನ್ 9ಕ್ಕೆ ಬಡ್ತಿ ಪಡೆದಿದ್ದಾರೆ. ಹೀಗಿರುವಾಗ ಬಿಗ್ ಬಾಸ್ ಸೀಸನ್ ೯ ಯಾವ ರೀತಿ ಇರುತ್ತದೆ ಎಂದು ನಾವು ಈ ಪ್ರಮೋದಲ್ಲಿ ಕಾಣಬಹುದು. ನಟ ಕಿಚ್ಚ ಸುದೀಪ್ ಅವರು ಒಳಗೊಂಡಿರುವ ಎರಡು ಪ್ರಮೋದಲ್ಲಿ ಬಿಗ್ಬಾಸ್ ಸೀಸನ್ ೯ ಭರ್ಜರಿಯಾಗಿಯೇ ಎಂಟ್ರಿ ಪಡೆಯಲಿದೆಯಂತೆ. ಸ್ಪರ್ಧಿಗಳ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಯಾರೆಲ್ಲ ಬಿಗ್ ಬಾಸ್ 9ಕ್ಕೆ ಬಿಗ್ ಮನೆಗೆ ಸೇರಲಿದ್ದಾರೆಂದು ಈಗ ತಿಳಿದುಬಂದಿದೆ.

ಹೌದು ಈ ವಿಚಾರವಾಗಿ ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಒಟಿಪಟಿಯಲ್ಲಿ ನಾಲ್ಕು ಜನರು ಬಿಗ್ ಬಾಸ್ 9 ರ ಮನೆಗೆ ಎಂಟ್ರಿ ಕೊಡಲಿದ್ದು, ಅತ್ತ ನಟಿ ದೀಪಿಕಾ ದಾಸ್ ಅನುಪಮಾ ಗೌಡ, ಹಾಗೂ ಪ್ರಶಾಂತ್ ಸಂಬರ್ಗಿ ಮತ್ತೆ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರು ಕೂಡ ಮತ್ತೆ ಬಿಗ್ ಬಾಸ್ ಮನೆಗೆ ಬರಬಹುದು ಎಂದು ಹೇಳಲಾಗುತ್ತಿದೆ. 18 ಜನರ ಪೈಕಿ ಇನ್ನು ಯಾವ ಯಾವ ಸ್ಪರ್ದಿಗಳ ಹೆಸರು ಕೇಳಿ ಬಂದಿದೆ ಗೊತ್ತಾ.? ಇದೇ ಸಪ್ಟಂಬರ್ 24ನೇ ತಾರೀಖಿನಿಂದ ಬಿಗ್ಬಾಸ್ ಟಿವಿ ಕಾರ್ಯಕ್ರಮ ಆ ಕಲರ್ಸ್ ಕನ್ನಡದಲ್ಲಿ ಒಂಬತ್ತನೇ ಸೀಸನ್ ಅನ್ನ ಆರಂಭ ಮಾಡುತ್ತಿದೆ. ಕಿಚ್ಚ ಸುದೀಪ್ ಅವರೆ ನಿರೂಪಣೆ ಮಾಡುತ್ತಿದ್ದಾರೆ. ಹೌದು, ಯಾವ ಯಾವ ಕ್ಷೇತ್ರದಲ್ಲಿ ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಗೊತ್ತಾ ಮುಂದೆ ಓದಿ 

ಸ್ಯಾಂಡಲ್​ವುಡ್​ ಯಶಸ್ವಿ ನಟಿಯಾಗಿ ಮಿಂಚಿದ ಹಾಗೇನೇ ಕೆಲವು ವರ್ಷಗಳಿಂದ ನಟನೆಯಿಂದ ಹಿಂದೆ ಸರಿದಿದ್ದ ನಟಿ ಪ್ರೇಮ ಅವರು ಈ ಬಾರಿಯ ಬಿಗ್​ ಬಾಸ್​ ಸೀಸನ್ 9ರಲ್ಲಿ ಸ್ಫರ್ಧಿ ಆಗಿ ಬರಲಿದ್ದಾರೆ ಎನ್ನಲಾಗಿದೆ. ಕಾಮಿಡಿ ನಟರಾದ ಟೆನ್ನಿಸ್​ ಕೃಷ್ಣ ಅವ್ರು ಸಹ ಬರಲಿದ್ದಾರಂತೆ. ಇನ್ನುಳಿದಂತೆ ಚೆಲ್ಲಾಟ ಸಿನಿಮಾದ ನಟಿ ರೇಖಾ ವೇದ, ಹಾಗೆ ನವೀನ್ ಕೃಷ್ಣ, ಹಿಟ್ಲರ್​ ಕಲ್ಯಾಣ ಸೀರಿಯಲ್ ಖ್ಯಾತಿಯ ದಿಲೀಪ್​ ರಾಜ್​,  ರವಿ ಶ್ರೀವಾಸ್ತವ, ಹಾಗೆ ಲವ್ ಗುರು ಸಿನಿಮಾ ಖ್ಯಾತಿಯ ನಟ ತರುಣ್ ಚಂದ್ರ ಅವರು ಸಹ ಈ ಬಾರಿ ಬಿಗ್​ ಬಾಸ್​ 9 ರ ಶೋನಲ್ಲಿ ಕಾಣಿಸಲಿದ್ದಾರೆ ಎಂದು ಈ ಪಟ್ಟಿ ಬಿಡುಗಡೆ ಆಗಿದೆ. ಸದ್ಯ ಬಿಗ್ಬಾಸ್ ಮನೆಗೆ ಆಯ್ಕೆಯಾದ ಸ್ಫರ್ಧಿಗಳು ಇವರೇ ಎಂದು ಹೇಳಲಾಗುತ್ತಿದೆ.   

ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕಿರುತೆರೆಯಲ್ಲಿ ಹೆಚ್ಚು ಕಾಣಿಸಿಕೊಂಡ ಕಲಾವಿದರು ಸಹ ಬರಲಿದ್ದಾರಂತೆ, ಅವರ ಪೈಕಿ, ಮಿಮಿಕ್ರಿ ಗೋಪಿ, ಹಾಗೇನೇ ಟಿಕ್​ ಟಾಕ್​ ಮಾಡುತ್ತ ಹೆಚ್ಚು ಫೇಮಸ್ ಆದ ರೀಲ್ಸ್​ ಬೆಡಗಿ ಟಿಕ್ ಟಾಕ್ ಸ್ಟಾರ್​ ಭೂಮಿಕಾ ಬಸವರಾಜ್​ ಅವರು ಸಹ ಬಾರಲಿದ್ದಾರೆಂದು ಹೇಳಲಾಗಿದೆ. ಹಾಗೇ ಪುಟ್ಟ ಗೌರಿ ಮದುವೆ ಧಾರಾವಾಹಿ ಈಗ ನಾಗಿಣಿ ಧಾರಾವಾಹಿಯಲ್ಲಿ ಗಮನ ಸೆಳೆದ ನಮೃತಾ ಗೌಡ ಸಹ ಬರಲಿದ್ದಾರಂತೆ. ಗಾಯಕಿ ಆದ ಈ ಆಶಾ ಭಟ್​, ದಾವಣಗೆರೆ ಎಕ್ಸ್ಪ್ರೆಸ್ ಖ್ಯಾತಿಯ ಕ್ರಿಕೆಟಿಗ ನಮ್ಮ ವಿನಯ್​ ಕುಮಾರ್​, ಹಾಗೆ ನ್ಯೂಸ್ ಲೋಕದಲ್ಲಿ ಗಮನ ಸೆಳೆದ ಹಾಗೆ ಅವರದೇ ಆದ ಖಡಕ್ ನಿರೂಪಣೆ ಮೂಲಕ ನಿರೂಪಕ ಆಗಿರುವ ಚಂದನ್​ ಶರ್ಮಾ ಅವರು ಸಹ ಈ ಬಾರಿ ಬಿಗ್​ ಬಾಸ್​ 9 ರಲ್ಲಿ ಕಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.