Big Boss Kannada 9 : ಬಿಗ್ಬಾಸ್ 9 ರ ಸಂಭಾವ್ಯ ಪಟ್ಟಿ ಫೈನಲ್ ಲಿಸ್ಟ್ ಬಿಡುಗಡೆ..! ಹೊಸಬರ ಜೊತೆ ಹಳಬರು ಇವರೇ ಫಿಕ್ಸ್

By Infoflick Correspondent

Updated:Thursday, September 22, 2022, 12:57[IST]

Big Boss Kannada 9 : ಬಿಗ್ಬಾಸ್ 9 ರ ಸಂಭಾವ್ಯ ಪಟ್ಟಿ ಫೈನಲ್ ಲಿಸ್ಟ್ ಬಿಡುಗಡೆ..! ಹೊಸಬರ ಜೊತೆ ಹಳಬರು ಇವರೇ ಫಿಕ್ಸ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಬಿಗ್ ಬಾಸ್ ಕಾರ್ಯಕ್ರಮ ಒಟ್ಟು ಎಂಟು ಸೀಸನ್ ಗಳನ್ನು ಮುಕ್ತಾಯ  ಮಾಡಿಕೊಂಡಿದೆ. ಹೌದು ಇನ್ನೇನು ಒಂಬತ್ತನೇ ಸೀಸನ್ ಬಿಗ್ಬಾಸ್ ಇಷ್ಟರಲ್ಲಿ ಆರಂಭ ಆಗುತ್ತಿದ್ದು ಇದಕ್ಕಿಂತ ಮುಂಚೆ ಕನ್ನಡದ ಓ ಟಿ ಟಿ ಸೀಸನ್ ಒಂದರಲ್ಲಿ ನಾಲ್ಕು ಜನರನ್ನು ಬಿಗ್ ಬಾಸ್ 9 ಕ್ಕೆ ಕರೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬಾರಿ ಬಿಗ್ಬಾಸ್ ಸೀಸನ್ 9 ಹೊಸದಾದ ಒಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಹೇಳಿದರೆ ತಪ್ಪಾಗಲಾರದು. 18 ಜನರ ಪೈಕಿ  ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಒಂಬತ್ತು ಜನರು ಸೀನಿಯರ್ ಹಂತದಲ್ಲಿ ಇರುತ್ತಾರೆ. ಇನ್ನು 9 ಜನರು ಹೊಸಬರು ಆಗಿರುತ್ತಾರೆ. ಹೌದು ಸೀನಿಯರ್ 9 ಜನರಲ್ಲಿ ಈಗಾಗಲೇ ನಾಲ್ಕು ಜನರು ಬಿಗ್ ಬಾಸ್ ಓಟಿಟಿ ಸೀಸನ್ 1ರ ಮೂಲಕ ಆಯ್ಕೆಯಾಗಿದ್ದಾರೆ.

ಇನ್ನುಳಿದ ಐದು ಜನರು ಯಾರ್ಯಾರು ಇರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಹಾಗೆ ಇದೆ ಶನಿವಾರ ಪ್ರೀಮಿಯರ್ ಬಿಗ್ ಬಾಸ್ ಸೀಸನ್ 9 ಆರಂಭ ಆಗುತ್ತಿದ್ದು, ಆಗ ಇದಕ್ಕೆಲ್ಲ ತೆರೆ ಬೀಳುವುದು ಖಚಿತ. ಅದಕ್ಕಿಂತ ಮುಂಚೆ ಸಂಭಾವ್ಯ 18 ಜನರ ಪಟ್ಟಿ ಬಿಡುಗಡೆಯಾಗಿದ್ದು, ಯಾವೆಲ್ಲ ಹೆಸರುಗಳು ಬಿಗ್ ಬಾಸ್ 9ಕ್ಕೆ ಕೇಳಿ ಬಂದಿವೆ ಗೊತ್ತಾ.? ನಿಜಕ್ಕೂ ನೀವು ಕೂಡ ಅಚ್ಚರಿ ಪಡುತ್ತೀರಾ. ಹೌದು ಹಳೆಯ ಸ್ಪರ್ಧಿ ಪ್ರಶಾಂತ್ ಸಂಬರ್ಗಿ, ಹಾಗೂ ದೀಪಿಕಾ ದಾಸ್ ಜೊತೆಗೆ ನಿರೂಪಕಿ ಅನುಪಮಾ ಗೌಡ ಅವರು ಬಿಗ್ಬಾಸ್ ಪ್ರೊಮೋದಲ್ಲೇ ಕಾಣಿಸಿಕೊಂಡಿದ್ದು ಇವರು ಕೂಡ ಸೀನಿಯರ್ ಹಂತದಲ್ಲಿ ಈ ಬಾರಿ ಬಿಗ್ಬಾಸ್ ಸೀಸನ್ ೯ ಸೇರಬಹುದು ಎಂದು ಹೇಳಲಾಗುತ್ತಿದೆ.   

ಜೊತೆಗೆ ಬ್ರಹ್ಮಾಂಡ ಗುರೂಜಿ, ಚಂದ್ರಿಕಾ, ಅರುಣ್ ಸಾಗರ್ ತಿಲಕ್, ನಿವೇದಿತಾ ಗೌಡ, ಅಯ್ಯಪ್ಪ, ಕುರಿ ಪ್ರತಾಪ್, ಚೈತ್ರ ಕೊಟ್ಟುರ್, ರಾಜೀವ್, ಸಮೀರ್ ಆಚಾರ್ಯ ಅವರ ಹೆಸರು ಕೂಡ ಸೀನಿಯರ್ ಹಂತದಲ್ಲಿ ಕೇಳಿ ಬಂದಿದೆ. ಇವರನ್ನು ಮಿಕ್ಕಿದರೆ ಇನ್ನುಳಿದ ಎಲ್ಲಾ ಸ್ಪರ್ಧಿಗಳು ಹೊಸಬರೆ ಎಂದು ಹೇಳಲಾಗುತ್ತಿದೆ. ಹಾಗೇನೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈಗಾಗಲೇ ಕರ್ನಾಟಕದ ತುಂಬೆಲ್ಲ ಹುಟ್ಟು ಹಬ್ಬದ ಶುಭಾಶಯಗಳ ವಿಭಿನ್ನವಾಗಿ ಹೇಳುತ್ತಾ ಸದ್ದು ಮಾಡಿರುವ ಕಾಫಿನಾಡು ಚಂದು, ಹಾಗೆ ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರಬಂದಿರುವ ನಟ ಅನಿರುದ್, ಮುರುಳಿ ಮೀರ ಹಾಗೂ ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ನಟಿ ಸಮೀಕ್ಷಾ,, ಮಜಾ ಭಾರತದಲ್ಲಿ ಅವರದ್ದೇ ಆದ ನಗೆಯ ಕಡಲಲ್ಲಿ ತೇಲಾಡಿಸುವ ನಟ ರಾಘವೇಂದ್ರ, ಪ್ರಿಯಾಂಕ ಕಾಮತ್, ಜೊತೆಗೆ ಕಮಲಿ ಧಾರಾವಾಹಿ ನಟಿ ಅಮೂಲ್ಯ ಕೂಡ ಈ ಬಾರಿ ಬಿಗ್ ಬಾಸ್ 9 ರ ಮೂಲಕ ಬಿಗ್ ಮನೆಗೆ ಕಾಲಿಡಬಹುದು ಎಂದು ಸಂಭಾವ್ಯ ಪಟ್ಟಿಯಲ್ಲಿ ಹೆಚ್ಚು ಇವರ ಹೆಸರೇ ಕೇಳಿಬರುತ್ತಿದೆ.

ಜೊತೆಗೆ ಮಿಮಿಕ್ರಿ ಗೋಪಿ, ನಟ ತರುಣ್ ಚಂದ್ರ, ಹಾಗೆ ನಟಿ ರೇಖಾ ವೇಧಾ ದಾಸ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಹೌದು ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ ೯ಕ್ಕೆ ಪ್ರೀಮಿಯರ್ ಶೋ ಮೂಲಕ ಬಿಗ್ ಬಾಸ್ ಮನೆ ಎಂಟ್ರಿ ಕೊಡುತ್ತಾರೆ ಎಂದು ನಾವು ಶನಿವಾರದವರೆಗೆ ಕಾಯಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟೆಲ್ಲಾ ಸ್ಪರ್ಧಿಗಳ ನಡುವೆ ನಿಮ್ಮ ಪ್ರಕಾರ ಇನ್ನು ಯಾವ ಯಾವ ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಸೀಸನ್ 9ರ ಮನೆಗೆ ಹೋಗಬಹುದು ಅವರಿಗೆ ಅರ್ಹತೆ ಇದೆ ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...