ಈ ಬಾರಿ ಬಿಗ್ ಬಾಸ್ 9 ನಲ್ಲಿ ಶಾಕಿಂಗ್ ವಿಶೇಷತೆಯೊಂದಿಗೆ ಡಬಲ್ ಧಮಾಕಾ ! ಯಾವಾಗಿನಿಂದ ಪ್ರಾರಂಭ ?

By Infoflick Correspondent

Updated:Thursday, July 7, 2022, 07:37[IST]

ಈ ಬಾರಿ  ಬಿಗ್ ಬಾಸ್ 9 ನಲ್ಲಿ ಶಾಕಿಂಗ್ ವಿಶೇಷತೆಯೊಂದಿಗೆ ಡಬಲ್ ಧಮಾಕಾ ! ಯಾವಾಗಿನಿಂದ ಪ್ರಾರಂಭ ?

ಬಿಗ್ ಬಾಸ್ ಯಾವಾಗ ಶುರುವಾಗತ್ತೆ? ಈ ಬಾರಿ ಬಿಗ್ ಬಾಸ್ ಶೋನಲ್ಲಿ ಯಾರು ಯಾರು ಇರುತ್ತಾರೆ? ಎಂದು ಪ್ರೇಕ್ಷಕರು ಪ್ರಶ್ನೆ ಕೇಳುತ್ತಲೇ ಇರುತ್ತಾರೆ.  ಕನ್ನಡದಲ್ಲಿ ಬಿಗ್ ಬಾಸ್ ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 

ಒಂದಲ್ಲ ಎರಡು ಬಿಗ್ ಬಾಸ್ ಶೋಗಳು ಪ್ರಸಾರ ಆಗಲಿವೆಯಂತೆ. ಒಂದು ಮಿನಿ ಸೀಸನ್, ಇನ್ನೊಂದು 100 ದಿನಗಳ ಬಿಗ್ ಬಾಸ್ ಸೀಸನ್. ಈ ಎರಡೂ ಶೋಗಳನ್ನು ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಆಗಸ್ಟ್‌ನಲ್ಲಿ ಶುರುವಾದ ಮಿನಿ ಸೀಸನ್ ಅಕ್ಟೋಬರ್‌ನಲ್ಲಿ ಮುಕ್ತಾಯವಾಗುವುದು. ಆದರೆ ಇದು ಕೇವಲ 42 ದಿನಗಳ ಕಾಲ ನಡೆಯುವುದು. ಈ ಶೋ ಮೊದಲು ವೂಟ್‌ನಲ್ಲಿ ಪ್ರಸಾರವಾಗುವುದು. ಅದಾದ ನಂತರದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀಸನ್ ಪ್ರಸಾರವಾಗುವುದು. ದೊಡ್ಡ ಸೀಸನ್ 100 ದಿನಗಳ ಕಾಲ ನಡೆಯುತ್ತದೆ. 

ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ರಂಗದ ಕೆಲ ಸೆಲೆಬ್ರಿಟಿಗಳು ಕೂಡ ಭಾಗವಹಿಸಲಿದ್ದಾರೆ. ಅವರು ಆಮೇಲೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಎರಡೂ ಸೀಸನ್‌ನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ.

ಕಿಚ್ಚ ಸುದೀಪ್ ಅವರ ಅದ್ಭುತ ನಿರೂಪಣೆ ಸೈಲಿಯೊಂದಿಗೆ ಬಿಗ್ ಬಾಸ್ ಪ್ರತಿಬಾರಿ ಯಶಸ್ಸು ಕಾಣುತ್ತಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳೊಂದಿಗೆ ಬರ್ತಿರುವ ಬಿಗ್ ಬಾಸ್ ಶೋನಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಿದ್ದಾರೆ, ಯಾವೆಲ್ಲ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.