Big boss ott 1 : ಈ ಬಾರಿಯ ಬಿಗ್ಬಾಸ್ ಓಟಿಟಿಗೆ ಯಾರೆಲ್ಲ ಬರುತ್ತಿದ್ದಾರೆ ಗೊತ್ತಾ..? ಇವರೇ ಆ ಸ್ಪರ್ದಿಗಳು ನೋಡಿ

By Infoflick Correspondent

Updated:Friday, August 5, 2022, 21:14[IST]

Big boss ott 1 : ಈ ಬಾರಿಯ ಬಿಗ್ಬಾಸ್ ಓಟಿಟಿಗೆ ಯಾರೆಲ್ಲ ಬರುತ್ತಿದ್ದಾರೆ ಗೊತ್ತಾ..? ಇವರೇ ಆ ಸ್ಪರ್ದಿಗಳು ನೋಡಿ

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಪ್ರಿಯರಿಗೆ ಇದೀಗ ಸಂತಸದ ಸುದ್ದಿ ಹೊರಬಿದ್ದಿದೆ. ಇನ್ನೊಂದು ದಿನದಲ್ಲಿ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಆರಂಭವಾಗಲಿದೆ. ಈ ಬಾರಿ ಯಾವುದೇ ಚಾನಲ್ನಲ್ಲಿ ಈ ಬಿಗ್ಬಾಸ್ ಒಟಿಟಿ ಕಾರ್ಯಕ್ರಮ ಮೂಡಿಬರುವುದಿಲ್ಲ, ಬದಲಿಗೆ ವೂಟ್ ನಲ್ಲಿ 24 ಗಂಟೆಗಳ ಕಾಲ ಮೊಬೈಲ್ ನಲ್ಲಿಯೇ ವೀಕ್ಷಣೆ ಮಾಡುವ ಅವಕಾಶ ಕೊಟ್ಟಿದೆ. ಈ ಬಾರಿಯ ಬಿಗ್ಬಾಸ್ ಓಟಿಟಿ ಸೀಸನ್ 1ಕ್ಕೂ ಸಹ ನಟ ಕಿಚ್ಚ ಸುದೀಪ್ ಅವರೇ ನಿರೂಪಕ ಆಗಲಿದ್ದಾರೆ. ಹಾಗೆ ಈ ಬಾರಿಯ ಬಿಗ್ ಬಾಸ್ ವಿಶೇಷತೆ ಏನೆಂದರೆ ಬಿಗ್ ಬಾಸ್ ಓಟಿಟಿ ವೇದಿಕೆಗೆ ಒಟ್ಟು 18 ಜನರು ಬರುತ್ತಿದ್ದು, ಆರು ವಾರಗಳ ಕಾಲ ಈ ಬಿಗ್ ಬಾಸ್ ನಡೆಯಲಿದೆಯಂತೆ..

ಒಟ್ಟು 45 ದಿನಗಳ ಕಾಲ ಬಿಗ್ಬಾಸ್ ಓಟಿಟಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ವೇದಿಕೆಗೆ 18 ಜನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ. ಹಾಗೆ ಇದರಲ್ಲಿ ಗೆಲ್ಲುವ ಐದು ಟಾಪ್ ಫೈನಲಿಸ್ಟ್ ಸ್ಪರ್ಧಿಗಳನ್ನು ಸೀದಾ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಸೀಸನ್ ೯ಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ಹೌದು ಈಗಾಗಲೇ ಎಲ್ಲಾ ಸಿದ್ಧತೆ ನಡೆಸಿಕೊಂಡಿರುವ ಬಿಗ್ ಬಾಸ್ ಆಯೋಜಕರು ಓ ಟಿ ಟಿ ವೇದಿಕೆ ಮೂಲಕ ಕೆಲವರನ್ನು ಪರಿಚಯ ಮಾಡಿಕೊಳ್ಳಲಿದ್ದಾರೆ, ಮಾಹಿತಿ ತಿಳಿದು ಬಂದಿರುವ ಪ್ರಕಾರ ಸಿನಿಮಾರಂಗದ ಕೆಲವರನ್ನು, ಮತ್ತು ಕಿರುತೆರೆಯ ಖ್ಯಾತ ಕಲಾವಿದರನ್ನು, ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಹೊಂದಿರುವವ ಕೆಲವರನ್ನು ಈ ಬಾರಿ ಸ್ಪರ್ದಿಗಳನ್ನಾಗಿ ಬಿಗ್ ಬಾಸ್ ಓಟಿಟಿ ಮನೆಗೆ ಕಳಿಸಲಿದೆ.

ಹೌದು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ಬದಲು ಇದು ಮೊದಲು ನಡೆಯುತ್ತದೆ. ನಂತರ ಓಟಿಟಿಯಲ್ಲಿ ಯಾರು ಅತಿ ಹೆಚ್ಚು ಜನರ ಮನಸ್ಸನ್ನು ಗೆಲ್ಲುತ್ತಾರೋ ಅವರನ್ನು ಸೀಸನ್ 9ಕ್ಕೆ ಅಕ್ಟೋಬರ್ ತಿಂಗಳಲ್ಲಿ ದೊಡ್ಡ ಮನೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.   

ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಒಟ್ಟು 18 ಜನರು ಬಿಗ್ಬಾಸ್ ಓಟಿಟಿಗೆ ಹೋಗುತ್ತಿದ್ದು, ಈಗಾಗಲೇ ಅವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ ಏನ್ನಲಾಗಿದೆ. ಕೆಲ ಸ್ಪರ್ಧಿಗಳ ಹೆಸರು ಕೂಡ ಬಹಿರಂಗವಾಗಿದೆ. ಇಲ್ಲಿದೆ ನೋಡಿ ಆ ಸ್ಪರ್ಧಿಗಳ ಲಿಸ್ಟ್. ಭೂಮಿಕ ಬಸವರಾಜ್,ಮಿಮಿಕ್ರಿ ಗೋಪಿ, ನವೀನ್ ಕೃಷ್ಣ, ರೇಖಾ ವೇದವ್ಯಾಸ, ನಮೃತಾ ಗೌಡ, ತರುಣ ಚಂದ್ರ, ಚಂದನ್ ಶರ್ಮಾ,ರವಿ ಶ್ರೀವತ್ಸ, ದಿಲೀಪ್ ರಾಜ್ ಎನ್ನಲಾಗಿದೆ.

ನೀವು ಕೂಡ ಬಿಗ್ ಬಾಸ್ ಒಟಿಟಿ ಸೀಜನ್ ಒಂದಕ್ಕೆ ಹೆಚ್ಚು ಕಾತುರರಾಗಿದ್ದರೆ ವೂಟ್ ನಲ್ಲಿ 24 ಗಂಟೆ ಕಾಲ ಈ ಬಾರಿಯ ಬಿಗ್ ಬಾಸ್ ವೀಕ್ಷಣೆ ಮಾಡಬಹುದು. ನಂತರದ ದಿನದಲ್ಲಿ ಕಲರ್ಸ್ ಕನ್ನಡದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸೀಸನ್ 9 ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...