ಬಿಗ್ಬಾಸ್ ಒಟಿಟಿ ಸ್ಪರ್ಧಿಗಳ ಸಂಭಾವನೆ ಎಷ್ಟಿದೆ ಗೊತ್ತಾ ವಾರಕ್ಕೆ..? ಸೋನುದು ನೋಡಿ ಬೆರಗಾಗ್ತಿರ

By Infoflick Correspondent

Updated:Monday, August 22, 2022, 11:21[IST]

ಬಿಗ್ಬಾಸ್ ಒಟಿಟಿ ಸ್ಪರ್ಧಿಗಳ ಸಂಭಾವನೆ ಎಷ್ಟಿದೆ ಗೊತ್ತಾ ವಾರಕ್ಕೆ..? ಸೋನುದು ನೋಡಿ ಬೆರಗಾಗ್ತಿರ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಒಟ್ಟು ಒಂಬತ್ತು ಸೀಸನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಮನೆ ಈ ಬಾರಿ ಬಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಎರಡು ವಾರಗಳನ್ನು ಮುಕ್ತಾಯ ಮಾಡಿರುವ ಬಿಗ್ಬಾಸ್ ಗೆ ತುಂಬಾ ಆರಂಭದಲ್ಲಿ ವಿರೋಧ ವ್ಯಕ್ತವಾದರೂ ಇದೀಗ ಮತ್ತೆ ತನ್ನ ನಾಗಾಲೋಟ ಮುಂದುವರಿಸಿದೆ ಎಂದು ಹೇಳಬಹುದು. ಬಿಗ್ಬಾಸ್ ಮನೆ ಈ ಬಾರಿ ಕೆಲವರ ಆಯ್ಕೆ ವಿಚಾರವಾಗಿ ಹೆಚ್ಚು ವಿರೋಧ ವ್ಯಕ್ತಪಡಿಸಿಕೊಂಡಿತ್ತು. ಈಗಲೂ ಕೂಡ ಅವರಿರುವುದಕ್ಕೆ ನಾವು ಬಿಗ್ ಬಾಸ್ ವೀಕ್ಷಣೆ ಮಾಡುವುದಿಲ್ಲ ಎಂದು ಕೆಲವರು ಶಪಥ ಮಾಡಿದ್ದಾರೆ..ಇನ್ನು ಕೆಲವರು ಸುದೀಪ್ ಇದ್ದಾರೆ. ಅವರು ಇದ್ದರೆ ಸಾಕು ನಮಗೆ ಯಾರು ಬೇಡ ಎಂದು ವೀಕ್ಷಕರು ಬಿಗ್ ಬಾಸ್ ಓಟಿಟಿ ನೋಡುತ್ತಿದ್ದಾರೆ. 

ಇದೆಲ್ಲದರ ನಡುವೆ ಇಷ್ಟು ದಿನ ಬಿಗ್ಬಾಸ್ ವೇದಿಕೆಯಲ್ಲಿರುವ ಸ್ಪರ್ಧಿಗಳ ಸಂಭಾವನೆ ವಿಚಾರ ತಿಳಿದು ಬಂದಿರಲಿಲ್ಲ. ಆದರೆ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ಬಾರಿಯ ಬಿಗ್ ಮನೆಯ ಯಾವ ಸ್ಪರ್ದ್ದಿಗೆ ಎಷ್ಟು ಸಂಭಾವನೆ ವಾರಕ್ಕೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊದಲಿಗೆ ರಾಕೇಶ್ ಹೌದು ರಾಕೇಶ್ ಅಡಿಗ ಅವರು ಜೋಶ್ ಸಿನಿಮಾ ಮೂಲಕ ಗುರುತಿಸಿಕೊಂಡವರು. ಇವರಿಗೆ ಬಿಗ್ಬಾಸ್ ಒಂದು ವಾರಕ್ಕೆ 80,000 ಹಣ ನೀಡಲಾಗುತ್ತಿದೆಯಂತೆ. ಆರು ವಾರ ಇದ್ದರೆ ನಾಲ್ಕು ಲಕ್ಷದ 80000 ಹಣ ಸಂಭಾವನೆ ರೂಪದಲ್ಲಿ ಬರುತ್ತದೆ ಎಂದು ತಿಳಿದುಬಂದಿದೆ..ಹಾಗೆ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಲೋಕೇಶ್ ಸಹ ಹೆಚ್ಚು ಖ್ಯಾತಿ ಹೊಂದಿದ ನಟ. ಈ ಕಾರಣಕ್ಕೆ ವಾರಕ್ಕೆ ಇವರಿಗೂ 80,000 ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ..

ಯಶ್ವಂತ್ ಹಾಗೂ ನಂದಿತಾ ಅವರಿಗೆ 70,000 ವಾರಕ್ಕೆ ನೀಡಲಾಗುತ್ತಿದೆ. ಆರ್ಯವರ್ಧನ್ ಗುರೂಜಿಗೆ 50000, ಸೋಮಣ್ಣಗೂ ಕೂಡ ಎಪ್ಪತ್ತು ಸಾವಿರ, ಚೈತ್ರ ಅವರಿಗೆ 60,000 ಇನ್ನುಳಿದಂತ ಬಹುತೇಕ ಎಲ್ಲರಿಗೂ 60,000 ಕೊಡಲಾಗುತ್ತಿದೆ ವಾರಕ್ಕೆ ಎಂದು ತಿಳಿದುಬಂದಿದೆ. ಆದರೆ ಸೋನು ಶ್ರೀನಿವಾಸ ಗೌಡ ಅವರಿಗೆ ವಾರಕ್ಕೆ 70,000 ಸಂಭಾವನೆ ನೀಡಲಾಗುತ್ತಿದೆಯಂತೆ. ಅಂದರೆ ಆರುವಾರ ಇದ್ದಲ್ಲಿ 4,20,000 ಸಂಭಾವನೆ ಸೋನು ಶ್ರೀನಿವಾಸ ಗೌಡ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಸೋಮಣ್ಣ ಮಾಚಿವಾಡ, ರಾಕೇಶ್ ಅಡಿಗ, ಸೋನು ಶ್ರೀನಿವಾಸ ಗೌಡ ಅವರು ಈಗಾಗಲೇ ಒಪ್ಪಂದ ಮಾಡಿಕೊಂಡು ಬಂದಿದ್ದು ಮುಂಬರುವ ಬಿಗ್ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ರಿವಿಲ್ ಆಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..