ಪೂರ್ತಿ ಬದಲಾವಣೆ ಮೂಲಕ ಇಷ್ಟರಲ್ಲೇ ಎಂಟ್ರಿ ಕೊಡಲಿದೆ ಕನ್ನಡ ಬಿಗ್ಬಾಸ್..! ಏನೆಲ್ಲಾ ಇರಲಿದೆ ನೋಡಿ

By Infoflick Correspondent

Updated:Thursday, March 10, 2022, 21:00[IST]

ಪೂರ್ತಿ ಬದಲಾವಣೆ ಮೂಲಕ ಇಷ್ಟರಲ್ಲೇ ಎಂಟ್ರಿ ಕೊಡಲಿದೆ ಕನ್ನಡ ಬಿಗ್ಬಾಸ್..! ಏನೆಲ್ಲಾ ಇರಲಿದೆ ನೋಡಿ

ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಮತ್ತೆ ಈ ವರ್ಷ ಇಷ್ಟರಲ್ಲೇ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ ಇಂಗ್ಲಿಷ್ ಚಾನೆಲ್ಗಳಲ್ಲಿ ಮಾತ್ರ ಈ ಬಿಗ್ ಬಾಸ್ ಶೋ ಪ್ರಸಾರವಾಗುತ್ತಿತ್ತು. ತದನಂತರದ ದಿನಗಳಲ್ಲಿ ಇದನ್ನು ಭಾರತೀಯ ಸಿನಿಪ್ರೇಕ್ಷಕರು ಇಷ್ಟಪಡುವವರು ಎಂದು ಅರಿತು ಮಹದಾಸೆ ಇಟ್ಟುಕೊಂಡು ಮೊಟ್ಟಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಆರಂಭ ಮಾಡಲಾಗಿತ್ತು. ಹೌದು 15 ಸೀಸನ್ ಗಳನ್ನು ಮುಗಿಸಿರುವ ಬಿಗ್ಬಾಸ್ ಹಿಂದಿ ಇದೀಗ ಹದಿನಾರನೇ ಸುತ್ತಿಗೆ ಇಷ್ಟರಲ್ಲೇ ದಾಪುಗಾಲಿಡುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಜೊತೆಗೆ ಕನ್ನಡದ ಬಿಗ್ ಬಾಸ್ ಕೂಡ ಅಷ್ಟೇ ಜನಪ್ರಿಯತೆ ಪಡೆದಿದ್ದು, ಕಿಚ್ಚ ಸುದೀಪ್  (Sudeep) ಅವರು ಇಲ್ಲಿಯವರೆಗೂ ಎಲ್ಲಾ ಬಿಗ್ ಬಾಸ್ ಸೀಸನ್ ಗಳನ್ನು ನಡೆಸಿಕೊಟ್ಟಿದ್ದಾರೆ. 98 ದಿನಗಳ ಕಾಲದ ಬಿಗ್ಬಾಸ್ ಜರ್ನಿಗೆ ಕಿಚ್ಚ ಸುದೀಪ್ ಅವರು 20ಕೋಟಿ ಸಂಭಾವನೆ ಪಡೆಯುತ್ತಾರಂತ. ಈ ಬಾರಿಯ ಬಿಗ್ ಬಾಸ್ ಸೀಸನ್ 9  (Big Boss Season 9) ಕೂಡ ಆರಂಭವಾಗಲಿದ್ದು ಆದರೆ ಕನ್ನಡದ ಬಿಗ್ ಬಾಸ್ ನಲ್ಲಿ ಈ ಬಾರಿ ಹೆಚ್ಚು ಬದಲಾವಣೆ ಆಗಲಿದೆ. ಹಾಗೆ ಹೊಸ ಹೊಸ ಕಾನ್ಸೆಪ್ಟ್ ಗಳ ಮೂಲಕ ಶೋ ಆರಂಭವಾಗಲಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಈ ಬಾರಿಯ ಬಿಗ್ ಬಾಸ್ ಷೋ ಆರಂಭದಲ್ಲಿಯೇ ಎರಡು ಮನೆಗಳನ್ನು ನಿರ್ಮಾಣ ಮಾಡಿದ್ದು, ಸ್ವರ್ಗ ನರಕ ಎನ್ನುವ ಕಾನ್ಸೆಪ್ಟ್ ಮೂಲಕ ಬಿಗ್ ಬಾಸ್ ಎಂಟ್ರಿ ಕೊಡಲಿದೆಯಂತೆ. 

ಸ್ಪರ್ಧಿಗಳಲ್ಲಿ ಚಟುವಟಿಕೆ ನಡೆಸಿ ಸೋತ ಸ್ಪರ್ಧಿಗಳನ್ನು ಆ ವಾರ ನರಕದ ಮನೆಯಲ್ಲಿ ನರಕದ ಬಟ್ಟೆಗಳಲ್ಲಿಯೇ ಇಡಲಾಗುತ್ತದೆ. ಗೆದ್ದ ಸ್ಪರ್ಧಿಗಳನ್ನು ಸ್ವರ್ಗದಲ್ಲಿರುವಂತೆ ಏರ್ಪಾಡು ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೌದು ನಿಜಜೀವನದಲ್ಲಿ ತೆರೆಯ ಮುಂದೆ ಸ್ಟಾರ್ ನಟರಗಳು ಹೇಗಿರುತ್ತಾರೆ ಎಂದು ನೋಡಿರುತ್ತಿರ. ಆದರೆ ತೆರೆಯ ಹಿಂದೆ ಅವರ ನೈಜತೆಯ ಅನಾವರಣ ಮಾಡುವ ಶೋ ಇದಾಗಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ಬಾಸ್ ಈ ವರ್ಷದ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ನಟಿ ಪ್ರೇಮಾ, ಬಿಟಿವಿ ನಿರುಪಕಿ ದಿವ್ಯ ವಸಂತ, ಹರಿಪ್ರಿಯ, ಸುಧಾರಾಣಿ, ಅಭಿಜಿತ್, ಖ್ಯಾತ ಹಿನ್ನೆಲೆ ಗಾಯಕಿ ನಂದಿತಾ, ಖ್ಯಾತ ಹಿನ್ನೆಲೆ ಗಾಯಕ ಹೇಮಂತ್, ನಟ ಪ್ರೇಮ್, ಹೀಗೆ  ಇನ್ನೂ ಹಲವಾರು ಹೆಸರುಗಳು ಈ ಸೀಸನ್ ನಲ್ಲಿ ಕೇಳಿ ಬರುತ್ತಿವೆ...