ಯಾರು ಅಂದುಕೊಂಡಿರದ ಈ ಬಿಗ್ಬಾಸ್ ಸ್ಪರ್ಧಿ ಐದನೇ ವಾರ ಹೊರಕ್ಕೆ..! ಯಾರು ಗೊತ್ತಾ..?

Updated: Sunday, April 4, 2021, 11:49 [IST]


ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ 5ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ನಿನ್ನೆ ಬಿಗ್ ಬಾಸ್ ಮನೆಯಿಂದ ಒಬ್ಬ ಪ್ರಬಲ ಸ್ಪರ್ಧಿ ಔಟ್ ಆಗಿದ್ದಾರೆ. ಕನ್ನಡ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಐದನೇ ವಾರ ಹೊರ ಬಂದಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕನ್ನಡದ ಬಿಗ್ಬಾಸ್ ನೋಡುನೋಡುತ್ತಿದ್ದಂತೆಯೇ 5 ವಾರಗಳನ್ನು ಮುಕ್ತಾಯಗೊಂಡಿದೆ.  

ಹೌದು ನಿನ್ನೆ ಶನಿವಾರ, ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿ ಕಾರ್ಯಕ್ರಮ ನಡೆದಿದ್ದು, ಈಗ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬಂದಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಈ ವಾರ ಅರವಿಂದ್ ಕೆಪಿ, ದಿವ್ಯ ಸುರೇಶ್, ನಿಧಿಸುಬ್ಬಯ್ಯ, ಶುಭಪುಂಜ, ಪ್ರಶಾಂತ್ ಸಂಬರ್ಗಿ, ಹಾಗೂ ಶಂಕರ್ ಅಶ್ವತ್ಥ್ ಅವರು ಕೂಡ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಇದರ ಪ್ರಕಾರ 35 ದಿನಗಳ ಬಳಿಕ ಬಿಗ್ಬಾಸ್ ಜರ್ನಿಯನ್ನು ಶಂಕರ್ ಅಶ್ವತ್ಥ್ ಅವರು ಮುಗಿಸಿದ್ದಾರೆ ಎಂದು ಕೇಳಿಬಂದಿದೆ.   

ಹೌದು ಹಿರಿಯ ನಟ ಶಂಕರ್ ಅಶ್ವತ್ಥ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ, ಇನ್ನುಳಿದ ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ತಮ್ಮ ಜರ್ನಿಯನ್ನು ಮುಂದುವರಿಸಿದ್ದಾರೆ....