ಕನಸನ್ನು ನನಸು ಮಾಡಿಕೋಂಡ ಗಾಯಕ ನವೀನ್‌ ಸಜ್ಜು!!

By Infoflick Correspondent

Updated:Monday, July 4, 2022, 11:09[IST]

ಕನಸನ್ನು ನನಸು ಮಾಡಿಕೋಂಡ ಗಾಯಕ ನವೀನ್‌ ಸಜ್ಜು!!

ದಿ. ಗಾಯಕ ಸಿ. ಅಶ್ವಥ್ ಅವರ ಧ್ವನಿಯನ್ನು ಎಲ್ಲಿ ಕೇಳಿದರೂ ಹೇಳಬಹುದು. ಅಷ್ಟು ಚಿರಪರಿಚಿತ ಧ್ವನಿ. ಇವರ ಧ್ವನಿಯನ್ನೇ ಹೋಲುವ ಮತ್ತೊಬ್ಬ ಗಾಯಕ ಎಂದರೆ ಅದು ನವೀನ್‌ ಸಜ್ಜು. ಹಲವು ಸಿನಿಮಾಗಳಿಗೆ ಹಿನ್ನೆಲೆ ಗಾಯಕರಾಗಿರುವ ನವೀನ್‌ ಸಜ್ಜು ಅವರು ಹಂತ ಹಂತವಾಗಿ ಬೆಳೆಯುತ್ತಿದ್ದಾರೆ. ಮೈಸೂರು ಮೂಲದ ನವೀನ್‌ ಸಜ್ಜು ಅವರು ಬಿಗ್‌ ಬಾಸ್‌ ಸೀಸನ್‌ ೬ರಲ್ಲಿ ಭಾಗವಹಿಸಿದ್ದರು. ಮೊದಲ ರನ್ನರ್‌ ಅಪ್‌ ಆಗಿ ಹೊರ ಬಂದಿದ್ದರು.


ಬಿಗ್‌ ಬಾಸ್‌ ಮನೆಯಲ್ಲಿ ಇದ್ದಷ್ಟೂ ದಿನವೂ ಹಾಡುಗಳನ್ನು ಹಾಡುತ್ತಿದ್ದರು. ಹೆಚ್ಚಾಗಿ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ನವೀನ್‌ ಅವರು ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸುತ್ತಿದ್ದರು. ಇದೀಗ ನವೀನ್‌ ಸಜ್ಜು ಅವರು ಹೊಸ ಮನೆಯನ್ನು ಖರೀದಿಸಿದ್ದಾರೆ. ತಮ್ಮ ಹುಟ್ಟೂರಾದ ಮೈಸೂರಿನಲ್ಲಿ ಹೊಸ ಮನೆಯನ್ನು ಖರೀದಿಸಿದ್ದು, ಇತ್ತೀಚೆಗಷ್ಟೇ ಗೃಹಪ್ರವೇಶವನ್ನು ನೆರವೇರಿಸಿದ್ದರು. ಈ ಮನೆಗೆ ಮಾನಸು ಎಂದು ಹೆಸರಿಟ್ಟಿದ್ದು, ಕನಸನ್ನು ನನಸು ಮಾಡಿಕೊಂಡ ಸಂತಸದಲ್ಲಿದ್ದಾರೆ.


ಇನ್ನು ಈ ಮನೆಗೆ ಮಾನಸು ಎಂದು ಹೆಸರಿಡಲು ಕಾರಣವಿದೆ. ಅದೇನೆಂದರೆ, ಮಾ ಎಂದರೆ ಮಾದೇಗೌಡ, ನ ಎಂದರೆ ನವೀನ್‌ ಹಾಗೂ ಸು ಎಂದರೆ ಸುಮಿತ್ರ ಎಂದರ್ಥ. ಇನ್ನೂ ನವೀನ್‌ ಸಜ್ಜು ಅವರ ಮನೆಯ ಗೃಹಪ್ರವೇಶಕ್ಕೆ ಸೆಲೆಬ್ರಿಟಿಗಳು ಸಹ ಆಗಮಿಸಿದ್ದರು. ಬಿಗ್‌ ಬಾಸ್‌ ಸ್ನೇಹಿತರು ಕೂಡ ಆಗಮಿಸಿ ಶುಭ ಹಾರೈಸಿದ್ದರು. ಇದರ ಫೋಟೋಗಳನ್ನು ನವೀನ್‌ ಸಜ್ಜು ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.