ಬಿಗ್ ಬಾಸ್ ಮನೆಯಲ್ಲಿ ಡಿ ಬಾಸ್ ಹಾಡು ಯಾಕೆ ಹಾಕಲ್ಲ ಎಂದು ಕೇಳಿದ ಅಭಿಮಾನಿಗಳು..?

Updated: Monday, March 8, 2021, 17:38 [IST]

ಬಿಗ್ ಬಾಸ್ ಸೀಸನ್ – 8 ಆರಂಭವಾಗಿ ವಾರ ಕಳೆದಿದೆ. ಆಟಗಾರರೂ ಕೂಡ ಚೆನ್ನಾಗಿ ಆಡುತ್ತಿದ್ದು, ಮುಂಜಾನೆ ಸ್ಫರ್ಧಿಗಳನ್ನು ಎಚ್ಚರಿಸಲು ಹಾಡು ಹಾಕಲಾಗುತ್ತದೆ. ಆದರೆ, ಇದರಲ್ಲಿ ಕಳೆದ ಎರಡು ಸೀಸನ್ ಗಳಿಂದ ಡಿ-ಬಾಸ್ ಹಾಡುಗಳನ್ನು ಯಾಕೆ ಪ್ಲೇ ಮಾಡುವುದಿಲ್ಲ..? ಸುದೀಪ್ ನಿರೂಪಣೆ ಮಾಡುತ್ತಿರುವುದಕ್ಕಾ ಅಂತ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.   

ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಪ್ರೋಮೋ ಮತ್ತು ಪೋಸ್ಟರ್ ಗಳನ್ನು ಶೇರ್ ಮಾಡುಕೊಳ್ಳುತ್ತಿದೆ. ಇದರಲ್ಲಿ ಕಮೆಂಟ್ ಮಾಡಿರುವ ದರ್ಶನ್ ಅಭಿಮಾನಿಯೊಬ್ಬರು, ದರ್ಶನ್ ಹಾಡುಗಳನ್ನು ಹಾಕಿ ಸರ್ ಎಂದು ನೇರವಾಗಿ ಸುದೀಪ್ ಅವರನ್ನು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ಇತರೆ ದರ್ಶನ್ ಅಭಿಮಾನಿಗಳು ಅವರು ಪ್ಲೇ ಮಾಡಲ್ಲ.. ಕಳೆದೆರಡು ಸೀಸನ್ಗಳಲ್ಲೂ ಮಾಡಿಲ್ಲ ಅಂತೆಲ್ಲಾ ಮಾತನಾಡುತ್ತಿದ್ದಾರೆ.   

ಇನ್ನು ಸುದೀಪ್ ಹಾಗೂ ದರ್ಶನ್ ಸ್ನೇಹ ಮುರಿದು ಬಿದ್ದು ನಾಲ್ಕು ವರ್ಷಗಳಾಗಿವೆ. ಇಂದಿಗೂ ಇವರಿಬ್ಬರು ಒಂದಾಗುವ ಮನಸ್ಸು ಮಾಡಿಲ್ಲ. ದರ್ಶನ್ ಗೆ ಬಿಗ್ ಬ್ರೇಕ್ ಕೊಟ್ಟ ಮೆಜೆಸ್ಟಿಕ್ ಸಿನಿಮಾಗೆ ಆತನನ್ನು ಹೀರೋ ಆಗಿ ಸೂಚಿಸಿದ್ದು ನಾನೇ ಎಂದು ಸುದೀಪ್ ಸಂದರ್ಶನ್ ಒಂದರಲ್ಲಿ ಹೇಳಿದ್ದರು.  ಈ ಹೇಳಿಕೆಯಿಂದ ಬೇಸರಗೊಂಡ ದರ್ಶನ್, ನನಗೂ ಸುದೀಪ್ ಗೂ ಇನ್ನು ಮುಂದೆ ಯಾವುದೇ ಸ್ನೇಹವಿಲ್ಲ ಎಂದು ಟ್ವೀಟ್ ಮಾಡಿದ್ದರು.   

ಅಂದಿನಿಂದ ಸುದೀಪ್ ಹಾಗೂ ದರ್ಶನ್ ನಡುವಿನ ಸ್ನೇಹದಲ್ಲಿ ಮೂಡಿದ ಬಿರುಕು ಇಂದು ಸರಿ ಹೋಗಿಲ್ಲ. ಆದರೆ, ಇವರಿಬ್ಬರ ಅಭಿಮಾನಿಗಳು ಮಾತ್ರ ಮತ್ತೆ ಒಂದಾಗಲಿ ಎಂದು ಬಯಸುತ್ತಲೇ ಇದ್ದಾರೆ. ಆದರೆ, ಇದೀಗ ಬಿಗ್ ಬಾಸ್ ಮನೆಯಲ್ಲಿ ಡಿ ಬಾಸ್ ಹಾಡು ಹಾಕದ ಬಗ್ಗೆ ಸೋಶಿಯಲ್  ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.