ಹೆಂಡತಿಯ ತಂಗಿಯನ್ನೇ ಮದುವೆಯಾದ ಈ ಖ್ಯಾತ ಧಾರಾವಾಹಿ ನಟ !
Updated:Saturday, March 12, 2022, 21:34[IST]

ಪ್ರೇಮ ಕುರುಡು.ಪ್ರೇಮಕ್ಕೆ ಸಂಬಂಧದ ಬೇಲಿ ಇಲ್ಲ. ಯಾವಾಗ ಯಾರ ಮೇಲೆ ಪ್ರೀತಿಯಾಗುತ್ತದೆ ಹೇಳುವುದು ಕಷ್ಟ. ಹೆಂಡತಿಯ ತಂಗಿಯನ್ನೇ ಮದವೆಯಾಗಿದ್ದಾರೆ ಈ ಖ್ಯಾತ ನಟ. ಹೆಂಡತಿಯ ತಂಗಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಇವರು !.
ರಾಜ, ಮಹಾರಾಜರು ಹಿಂದೆ ಹೀಗೆ ಹೆಂಡತಿಯನ್ನು, ಹೆಂಡತಿಯ ತಂಗಿಯನ್ನು ಮದುವೆಯಾಗುತ್ತಿದ್ದರು. ಆಗ ಇದು ಸರ್ವೇಸಾಮಾನ್ಯ. ಆದರೆ ಈಗ ಇದು ಸ್ವಲ್ಪ ಆಶ್ಚರ್ಯಕರ. ಪ್ರೀತಿಸಿ ಮದುವೆಯಾಗುವುದು ಈಗ ಹೊಸತೇನಲ್ಲ. ಆದರೆ ಹೆಂಡತಿಯ ತಂಗಿಯನ್ನು ಪ್ರೀತಿಸಿ ಮದುವೆಯಾಗುವುದು ವಿಚಿತ್ರ. ನಿಮ್ಮ ತಲೆಯಲ್ಲಿ ಈಗ ಇದು ಹೇಗೆ ಏನು ಎಂದು ಸಾವಿರಾರು ವಿಷಯಗಳು ಓಡಿರಬಹುದು. ನಿಜ ವಿಷಯ ಇಲ್ಲಿದೆ ನೋಡಿ .
ಬಿಗ್ ಬಾಸ್ ಖ್ಯಾತಿಯ,ಕಿರುತೆರೆ ವೀಕ್ಷಕರ ಹೃದಯ ಗೆದ್ದ ಚೆಲುವ ನಟ ಜಗನ್. ವಿವಾಹವಾಗಿರುವುದು ತನ್ನ ಹೆಂಡತಿಯ ತಂಗಿಯನ್ನು ! ಧಾರಾವಾಹಿಯಲ್ಲಿ ಹೆಂಡತಿಯ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿಯನ್ನೇ ಜಗನ್ ಮದುವೆಯಾಗಿದ್ದಾರೆ. ಗಾಂಧಾರಿ ಧಾರಾವಾಹಿಯಲ್ಲಿ ಕಾವ್ಯ ಅವರ ತಂಗಿಯ ಪಾತ್ರದಲ್ಲಿ ಅಭಿನಯಿಸಿದ್ದ ರಕ್ಷಿತಾ ಅವರನ್ನು ನಟ ಜಗನ್ ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಚಾರವನ್ನು ಕಾವ್ಯ ಗೌಡ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗಾಂಧಾರಿ ಧಾರಾವಾಹಿಯಲ್ಲಿ ನಾನು ಜಗನ್ ಅಭಿನಯಿಸಿದ್ದೆವು ಈ ಧಾರಾವಾಹಿಯಲ್ಲಿ ನಾವಿಬ್ಬರೂ ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದು. ನನ್ನ ತಂಗಿ ಪಾತ್ರಧಾರಿಯಾದ ರಕ್ಷಿತಾ ಅವರನ್ನು ಮದುವೆಯಾಗಿದ್ದಾನೆ ಜಗನ್. ಎಂದು ಕಾವ್ಯ ಗೌಡ ಸಂತಸದಿಂದ ಹೇಳಿದ್ದರು.
ವರುಷಗಳ ಕಾಲ ಪರಸ್ಪರ ಪ್ರೀತಿಮಾಡಿ ಜಗನ್ ಹಾಗೂ ರಕ್ಷಿತಾ ವರುಷಗಳ ಹಿಂದೆ ವಿವಾಹವಾಗಿದ್ದು ಇದೀಗ ನೆಮ್ಮದಿಯಾಗಿ, ಸಂತಸದಿಂದ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ.
