ಬಿಗ್ ಬಾಸ್ ಮನೆಯಲ್ಲಿ ಮೊದಲವಾರವೇ ಚಿಗುರೊಡೆದ ಪ್ರೀತಿ ಪ್ರೇಮದ ವಿಷಯ ! ನಿಜವಾಗಲಿದೆಯಾ ಭವಿಷ್ಯ ?

By Infoflick Correspondent

Updated:Monday, August 8, 2022, 21:29[IST]

ಬಿಗ್ ಬಾಸ್ ಮನೆಯಲ್ಲಿ ಮೊದಲವಾರವೇ ಚಿಗುರೊಡೆದ ಪ್ರೀತಿ ಪ್ರೇಮದ ವಿಷಯ ! ನಿಜವಾಗಲಿದೆಯಾ ಭವಿಷ್ಯ ?

ಬಿಗ್ ಬಾಸ್​' ಮನೆಯಲ್ಲಿ ಸಾಕಷ್ಟು ಪ್ರೀತಿ-ಪ್ರೇಮಗಳು ಹುಟ್ಟಿಕೊಂಡಿವೆ. ಇದೀಗ ಮೊದಲ ವಾರವರೇ ಪ್ರೀತಿ-ಪ್ರೇಮದ ವಿಚಾರ ಪ್ರಸ್ತಾಪ ಆಗಿದೆ. ಈ ಮೂಲಕ ಹಲವು ರೀತಿಯ ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ.

ರಾಕೇಶ್ ಅವರ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. 'ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ' ಎಂದು ಮಾತು ಆರಂಭಿಸಿದರು. ನಂತರ ರಾಕೇಶ್​ ಅವರು ಸ್ಫೂರ್ತಿ ಅವರ ಕೈ ಹಿಡಿದುಕೊಂಡು ಭವಿಷ್ಯ ನುಡಿಯುವುದಾಗಿ ಹೇಳಿದರು. 'ನಿಮಗೆ ಬಿಗ್ ಬಾಸ್ ಮನೆಯ ಮೇಲೆ ಲವ್​ ಆಗುತ್ತದೆ. ಅವರು ನಿಮ್ಮ ಕೈ ನೋಡುತ್ತಿರುತ್ತಾರೆ' ಎಂದರು ರಾಕೇಶ್​. ಅವರು ಫ್ಲರ್ಟ್​  ಮಾಡಿದ್ದನ್ನು ನೋಡಿ ಸ್ಫೂರ್ತಿ ನಕ್ಕರು. ಇಬ್ಬರ ನಡುವೆ ಏನೋ ಶುರುವಾಗುವ ಸೂಚನೆ ಸಿಗುತ್ತಿದೆ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.   

ನನ್ನ ಜೀವನ ಒಂದು ಓಪನ್ ಬುಕ್‌ ರೀತಿ ಎಲ್ಲಾನೂ ಓಪನ್‌ ಆಗಿಟ್ಟಿರುವೆ. ಹೌದು ಈ ಹಿಂದೆ ನಾನೊಂದು ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಮ್ಯೂಚುಯಲ್‌ ಆಗಿ ನಾವು ಬ್ರೇಕಪ್ ಮಾಡಿಕೊಂಡೆವು. ಕೊನೆಯಲ್ಲಿ ನಾನು ಒಂದು ವಿಚಾರ ಅರ್ಥ ಮಾಡಿಕೊಂಡೆ. ನಾನೇ ಸರಿ ಇಲ್ಲ ಒಂದು ಸಂಬಂಧವನ್ನು ಸರಿಯಾಗಿ ನಡೆಸಲು ನನಗೆ ಸಾಮರ್ಥ್ಯವಿಲ್ಲ ಸರಿಯಾಗಿ ಹ್ಯಾಂಡಲ್ ಮಾಡುವುದಕ್ಕೆ ಬರೋಲ್ಲ. ನನ್ನ ಲೈಫ್‌ಸ್ಟೈಲ್‌ ಬೇರೆ ನನ್ನ ಪ್ರಯಾರಿಟಿಗಳು ತುಂಬಾನೇ ಬೇರೆ ಹೀಗಿರುವಾಗ ಬೇರೆ ಅವರ ವಿರುದ್ಧ ದೂರು ಮಾಡುವುದಕ್ಕೆ ಇಷ್ಟವಿಲ್ಲ. ಒಂದು ಸಲ ಜೀವನ ಹಿಂತಿರುಗಿ ನೋಡಿದರೆ ನಾನೇ ಇದಕ್ಕೆಲ್ಲಾ ರೆಡಿ ಇಲ್ಲ ಅನಿಸುತ್ತದೆ' ಎಂದು ರಿಲೇಷನ್‌ಶಿಪ್‌ ಬಗ್ಗೆ ರಾಕೇಶ್ ಕ್ಲಾರಿಟಿ ಕೊಟ್ಟಿದ್ದಾರೆ. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಪ್ರೀತಿಯಲ್ಲಿ ಬೀಳುತ್ತಾರಾ ಕಾದು ನೋಡಬೇಕು.


ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಸ್ಫೂರ್ತಿ ಗೌಡ ಅವರು ತಾಯಿಯನ್ನು ಇತ್ತೀಚೆಗೆ ಕಳೆದುಕೊಂಡಿದ್ದು, ನಾನು ಯಾರನ್ನೂ ನಂಬೋದಿಲ್ಲ ಎಂದು ಹೆಳಿಕೊಂಡಿದ್ದಾರೆ. ಇವರಿಗೆ ತಂದೆ ಎಂದರೆ ಬಹಳ ಇಷ್ಟ, ತಂದೆಯನ್ನು ಬಿಟ್ಟು ಬೇರೆ ಯಾರ ಮೇಲೂ ನಂಬಿಕೆ ಇಲ್ಲ ಎನ್ನುತ್ತಾರೆ. ಈಗಾಗಲೇ ನಾನು ಹಲವಾರು ರೀತಿಯಲ್ಲಿ ನಂಬಿಕೆ ದ್ರೋಹ ಅನುಭವಿಸಿದ್ದೀನಿ,  ಸಣ್ಣ ವಿಚಾರಗಳಾಗಿರಬಹುದು ಆದರೂ,  ಸ್ನೇಹಿತರು ಮೋಸ ಮಾಡಿರುವ ಕಾರಣ ನಂಬಿಕೆ ಹೊರಟು ಹೋಗಿದೆ ಎನ್ನುತ್ತಿರುವ ನಟಿಗೆ ರಾಕೇಶ್ ಹೇಳಿದ ಭವಿಷ್ಯ ನಿಜವಾಗಲಿದೆಯಾ ?