ಬಿಗ್ಬಾಸ್ ಎಂಟರ ಮೊದಲ ವಾರ ಮನೆಯಿಂದ ಹೊರ ಬಂದ ಸ್ಪರ್ಧಿ ಯಾರ್ ಗೊತ್ತಾ..?

Updated: Sunday, March 7, 2021, 19:58 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಆವೃತ್ತಿಯ ಮೊದಲನೇ ವಾರ ಈಗ ಮುಕ್ತಾಯವಾಗಿದ್ದು, ನಿನ್ನೆಯಷ್ಟೇ ವಾರದ ಕಥೆ ಕಿಚ್ಚನ ಜೊತೆ ಪ್ರೋಗ್ರಾಮ್ ನಲ್ಲಿ ಬಿಗ್ ಬಾಸ್ ಮನೆಯ ಮಂದಿ ಮಾತನಾಡಿದರು. ಜೊತೆಗೆ ಎಲಿಮಿನೇಷನ್ ಪ್ರಕ್ರಿಯೆ ಕುರಿತು ಸುದೀಪ್ ಕೊನೆಯಲ್ಲಿ ಮಾತನಾಡಿದರು. ಅದರ ಮುಂಚೆ, ಬಿಗ್ ಮನೆಯ ಮಂದಿಯನ್ನೆಲ್ಲ ಮಾತನಾಡಿಸಿ ಕೊನೆಯಲ್ಲಿ ಇಬ್ಬರನ್ನು ಸೇವ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. 

ಒಟ್ಟು ಐದು ಸ್ಪರ್ಧಿಗಳು ಮೊದಲ ವಾರ ನಾಮಿನೇಟ್ ಆಗಿದ್ದು, ರಘು ಗೌಡ, ನಿರ್ಮಲಾ, ಶುಭಪುಂಜ, ಧನುಶ್ರೀ ಹಾಗೂ ವಿಶ್ವನಾಥ್ ಸಹ ನಾಮಿನೇಟ್ ಆಗಿದ್ರು. ಹೌದು ನಿನ್ನೆ ಎಪಿಸೋಡ್ ನಲ್ಲಿ ಸುದೀಪ್ ಅವರು ಇಬ್ಬರನ್ನು ಸೇವ್ ಮಾಡಿದ್ದು, ಶುಭಪುಂಜ ಹಾಗೂ ವಿಶ್ವನಾಥ್'ರನ್ನ ಮೊದಲು ಸೇಫ್ ಮಾಡಿದರು. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಇಂದಿನ ಸಂಚಿಕೆಯಲ್ಲಿ, ಮೊದಲ ವಾರ ಬಿಗ್ ಬಾಸ್ ಮನೆಯಿಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಹೊರಬಿದ್ದಿದ್ದು, ರಘು ಹಾಗೂ ನಿರ್ಮಲಾ ಅವರು ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೂ ಲೇಖನದ  ಕೊನೇಯಲಿರುವ ವಿಡಿಯೋವನ್ನು ನೋಡಿ. ಜೊತೆಗೆ ಧನುಶ್ರೀ ಬಿಗ್ ಬಾಸ್ ಮನೆಯಿಂದ ಹೊರ ಕಲಿಸಿದ ಬಿಗ್ ಬಾಸ್ ಆಯ್ಕೆ ನಿಮ್ಮ ಪ್ರಕಾರ ಸರಿಯಿದೆಯಾ ತಪ್ ಇದೆಯಾ ಎಂದು ನಿಮ್ಮ ನಿರ್ಧಾರವನ್ನು ಕೂಡ ಹೇಳಿ..