ಬಿಗ್ಗ್ ಬಾಸ್ ಕಾಂಟೆಸ್ಟಂಟ್ ಸಾನ್ಯಾ ಅಯ್ಯರ್ ಮೊದಲ ಸೀರಿಯಲ್ ವಿಡಿಯೋ ಇಲ್ಲಿ ನೋಡಿ

By Infoflick Correspondent

Updated:Tuesday, August 16, 2022, 22:01[IST]

ಬಿಗ್ಗ್ ಬಾಸ್ ಕಾಂಟೆಸ್ಟಂಟ್ ಸಾನ್ಯಾ ಅಯ್ಯರ್ ಮೊದಲ ಸೀರಿಯಲ್ ವಿಡಿಯೋ ಇಲ್ಲಿ ನೋಡಿ

ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಬಾಲ್ಯದ ಗೌರಿ ಪಾತ್ರದಲ್ಲಿ  ನಟಿ ಸಾನಿಯಾ ಅಯ್ಯರ್ ನಟಿಸಿದ್ದರು.‌ ಒಂದು ವರ್ಷಗಳ ಕಾಲ ಸಾನ್ಯಾ ಬಾಲನಟಿಯಾಗಿ ಪುಟ್ಟಗೌರಿ ಮದುವೆ ಯಲ್ಲಿ ನಟಿಸಿದ್ದಳು. 8ನೇ ತರಗತಿವರೆಗೆ ನಟಿಸಿದ್ದ ಸಾನಿಯಾ ಅಯ್ಯರ್ ಅವರು ಆಮೇಲೆ ನಟನೆಯಿಂದ ದೂರ ಉಳಿದಿದ್ದರು.   ಕೆಲ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಳ್ಳದೆ ಶಿಕ್ಷಣದತ್ತ ಗಮನಹರಿಸಿದ್ದರು.

ಸಾನಿಯಾ ಈಗ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸಾನ್ಯಾ ಅಯ್ಯರ್ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕೂಡ ಸ್ಪರ್ಧಿಯಾಗಿದ್ದರು. ಸಾನಿಯಾ ಬಾಸ್ಕೆಟ್ ಬಾಲ್ ಪ್ಲೇಯರ್‌ ಕೂಡಾ ಹೌದು.

ಸಾಕ್ಷಿ ಧಾರಾವಾಹಿಯ ಮ‌ೂಲಕ ಅಭಿನಯಕ್ಕೆ ಕಾಲಿಟ್ಟ ಸಾನಿಯಾ ಅಯ್ಯರ್ ಮುಂದೆ ಕುಸುಮಾಂಜಲಿ, ಸಿಂಧೂರ ಧಾರಾವಾಹಿಯಲ್ಲಿ ನಟಿಸಿ ಶೃತಿ ನಾಯ್ಡು ನಿರ್ದೇಶನದ ನಮ್ಮಮ್ಮ ಶಾರದೆಯಲ್ಲಿ ಸಿಂಧೂ ಪಾತ್ರದ ಮೂಲಕ ಮನೆ ಮಾತಾದರು. ಮಾತ್ರವಲ್ಲ ಬಾಲ ಕಲಾವಿದೆಯಾಗಿರುವಾಗಲೇ ನೆಗೆಟಿವ್ ಪಾತ್ರದಲ್ಲಿ ನಟಿಸಿ ಹೆಸರು ಗಿಟ್ಟಿಸಿಕೊಂಡರು.

ಸಾನ್ಯ ಅಯ್ಯರ್ ಕಲೆ ಎನ್ನುವುದು ರಕ್ತಗತವಾಗಿ ಬಂದಿದೆ ಎನ್ನಬಹುದು. ಏಕೆಂದರೆ ಈಕೆಯ ತಂದೆ ತಾಯಿ ಚಿಕ್ಕಮ್ಮ ಕೂಡ ಕಲಾವಿದರೇ. ಇವರ ತಾಯಿ ದೀಪಾ ಅಯ್ಯರ್ ಸಹ ಲಕ್ಷಣ ಧಾರಾವಾಹಿಯ ಭಾಗವಾಗಿದ್ದಾರೆ. ಇದರ ಜೊತೆಗೆ ಇವರ ಚಿಕ್ಕಮ್ಮ ಶಿಲ್ಪಾ ಸಹ ನಿರ್ದೇಶಕಿಯಾಗಿ ಹೆಸರು ಮಾಡಿದ್ದಾರೆ.

 


ವಿಶೇಷವೆಂದರೆ ಜೀ ಕನ್ನಡದ ಅರಸಿ ಧಾರಾವಾಹಿಯಲ್ಲೂ ಸಾನ್ಯಾ ನಟಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ಅರಸಿ ಧಾರಾವಾಹಿಯಲ್ಲಿ ರಶ್ಮಿ ಎಂಬ ನೆಗೆಟಿವ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 11 ವರ್ಷದ ಹಳೆಯ ವಿಡಿಯೋ ಇಲ್ಲಿದೆ ನೋಡಿ