ಬಿಗ್ ಬಾಸ್ ಮನೆಯಲ್ಲಿ ಮಂಜು ಆಸೆ ಫಲಿಸಿತು: ಮತ್ತಿಬ್ಬರು ಬೆಡಗಿಯರು ವೈಲ್ಡ್ ಕಾರ್ಡ್ ಎಂಟ್ರಿ..!

Updated: Thursday, April 8, 2021, 15:43 [IST]

ಬಿಗ್ ಬಾಸ್ ಸೀಸನ್ 8 ಈಗಾಗಲೇ 6 ವಾರ ಕಳೆದಿದೆ. ಈಗಾಗಲೇ ಐದು ಜನ ಬಿಗ್ ಬಾಸ್ ಮನೆಯಿಂದ ಹೊರ ನಡೆದರು. ಇದರ ಬೆನ್ನಲ್ಲೇ, ಕಳೆದ ವಾರ ಬಿಗ್ ಬಾಸ್' ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟರು. 

ಈ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಿಗಳ ಅಭಿಪ್ರಾಯ ಕೇಳಿದರು. ಈ ವೇಳೆ ಮಾತನಾಡಿದ್ದ ಮಂಜು ಪಾವಗಡ, ಯಾರಾದ್ರೂ ಹುಡುಗಿ ಬರಬಹುದಾಗಿತ್ತಾ.? ಎಂದು ಹೇಳಿದ್ದರು. ಅದಕ್ಕೆ ತಕ್ಕಂತೆ ಇಂದು ಮತ್ತೆ ಇಬ್ಬರು ಬೆಡಗಿಯರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.  

ಪ್ರೋಮೋದಲ್ಲಿ ತೋರಿಸಿರುವಂತೆ ಬಿಗ್ ಬಾಸ್ ಮನೆಗೆ ಇಬ್ಬರು ಹುಡುಗಿಯರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ಒಬ್ಬರು ಬಿಗ್ ಬಾಸ್ ಮನೆಯ ಮುಖ್ಯ ದ್ವಾರದಿಂದ ಎಂಟ್ರಿಕೊಟ್ಟರೆ, ಇನ್ನೊಬ್ಬರು ಕನ್ಫೆಶನ್ ರೂಮ್‌ನಿಂದ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಒಟ್ನಲ್ಲಿ ಬಿಗ್ ಬಾಸ್ ಮಂಜು ಪಾವಗಡ ಆಸೆಯನ್ನು ನೆರವೇರಿಸಿದೆ. ಕಣ್ತುಂಬಿಕೊಳ್ಳಲು ಇಬ್ಬರು ಹುಡುಗಿಯರು ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಇನ್ನು ಏನೇನು ಆಗುತ್ತೆ ಅನ್ನೋದನ್ನ ನೋಡಬೇಕು.