ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ ವಿವಾಹದ ಕುರಿತು ಬಿಚ್ಚಿಟ್ಟ ಮುಖ್ಯ ಸತ್ಯ ಇಲ್ಲಿದೆ

By Infoflick Correspondent

Updated:Thursday, July 28, 2022, 10:10[IST]

ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ ವಿವಾಹದ ಕುರಿತು ಬಿಚ್ಚಿಟ್ಟ ಮುಖ್ಯ ಸತ್ಯ ಇಲ್ಲಿದೆ

ಬಿಗ್ ಬಾಸ್ ಮನೆಯ ಮಾಡರ್ನ್ ರೈತ ಎಂದೇ ಫೇಮಸ್ ಆಗಿರುವ  ಶಶಿಕುಮಾರ್ ಈಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಧಿಕೃತವಾಗಿ ರಿವಿಲ್ ಮಾಡಿದ್ದಾರೆ ಶಶಿಕುಮಾರ್.  ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಶಶಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯ ಬಗ್ಗೆ ಶಶಿಕುಮಾರ್ ಒಂದು ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಆಗಸ್ಟ್ 6 ಹಾಗೂ 7ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ.ಬೆಂಗಳೂರಿನ ಕನ್‌ವೆನ್ಷನ್ ಸೆಂಟರ್‌ವೊಂದರಲ್ಲಿ ಶಶಿ ಕುಮಾರ್ ಹಾಗೂ ಸ್ವಾತಿ ಅವರ ಮದುವೆ ನೆರವೇರಲಿದೆ.ದೊಡ್ಡಬಳ್ಳಾಪುರದ ಸ್ವಾತಿ ಎಂಬುವವರ ಕೈ ಹಿಡಿಯಲಿದ್ದಾರೆ. ಮದುಮಗಳು ಸ್ವಾತಿ ಕೃಷಿ ಕುಟುಂಬದವರಾಗಿದ್ದು  ಸ್ವಾತಿ ಇಂಜಿನಿಯರಿಂಗ್ ಪದವೀಧರೆ.


ಇತ್ತೀಚೆಗಷ್ಟೇ ಶಶಿ ಕುಮಾರ್ ಹಾಗೂ ಸ್ವಾತಿ ಅವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನೆರವೇರಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ಶಶಿ ಕುಮಾರ್ ಮತ್ತು ಸ್ವಾತಿ ಉಂಗುರ ಬದಲಾಯಿಸಿಕೊಂಡರು. ಮಾಧ್ಯಮದ ಜೊತೆ ಮಾತನಾಡಿದ ಶಶಿಕುಮಾರ್ ಮದುವೆಯ ಕುರಿತು ಮುಖ್ಯಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮದು ಲವ್ ಮ್ಯಾರೇಜ್ ಅಲ್ಲ. ಅರೇಂಜ್ಡ್ ಮ್ಯಾರೇಜ್. ನಮ್ಮಿಬ್ಬರ ಕುಟುಂಬಗಳು ಕೂತು ಮಾತುಕತೆ ಮಾಡಿ ಮದುವೆಯನ್ನ ನಿಶ್ಚಯಿಸಿದ್ದಾರೆ. ನಮ್ಮ ಮದುವೆ ಗ್ರ್ಯಾಂಡ್ ಆಗಿ ನಡೆಯಲಿದೆ. ಆಗಸ್ಟ್ 6 ರಂದು ನಡೆಯುವ ರಿಸೆಪ್ಷನ್‌ನಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರು ಪಾಲ್ಗೊಳ್ಳಲಿದ್ದಾರೆ’’ ಎಂದು ಶಶಿ ಕುಮಾರ್ ತಿಳಿಸಿದ್ದಾರೆ.