ಈತ ಹಿಂಬದಿಯಿಂದ ತಬ್ಬಿ ಕಿಸ್ ಮಾಡುತ್ತಾನೆ ! ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಂದ ಬಂತು ಈ ಆರೋಪ

By Infoflick Correspondent

Updated:Friday, August 19, 2022, 15:06[IST]

ಈತ ಹಿಂಬದಿಯಿಂದ ತಬ್ಬಿ ಕಿಸ್ ಮಾಡುತ್ತಾನೆ ! ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಂದ ಬಂತು ಈ ಆರೋಪ

ಬಿಗ್ ಬಾಸ್ ಒಟಿಟಿ' ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹಲವರ ಮಧ್ಯೆ ಟಾಸ್ಕ್​ ವಿಚಾರಕ್ಕೆ ಕಿರಿಕ್​ಗಳು ನಡೆಯುತ್ತಿವೆ. ಈ ಮಧ್ಯೆ ಮಹಿಳಾ ಸ್ಪರ್ಧಿಗಳಿಂದ ಗಂಭೀರ ಅರೋಪವೊಂದು ಕೇಳಿಬರುತ್ತಿದೆ‌. ಇದುವರೆಗೂ ಕನ್ನಡದ ಯಾವ ಬಿಗ್ ಬಾಸ್ ಸೀಸನ್ ನಲ್ಲೂ ನಡೆಯದ ಘಟನೆಯೊಂದು ನಡೆದಿದೆ‌.  
 
ಅಕ್ಷತಾ ಒಂದು ಫಿಸಿಕಲ್ ಟಾಸ್ಕ್ ಮುಗಿಸಿ ಆಗತಾನೇ ಬಂದಿದ್ದರು. ಈ ವೇಳೆ ಅವರನ್ನು ಉದಯ್ ಸೂರ್ಯ ಹಿಂಬದಿಯಿಂದ ಹಗ್ ಮಾಡಿದರು. ಅಲ್ಲದೆ, ಕಿವಿಯ ಬಳಿ ಕಿಸ್ ಮಾಡಿದರು. ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ' ಎಂದು ತಾಕೀತು ಮಾಡಿದರು. ಇದಕ್ಕೆ ಉದಯ್ ಸೂರ್ಯ ಅಪ್ಸೆಟ್ ಆದರು.

ಸಾನ್ಯಾ ಹಾಗೂ ನಂದು ಮಧ್ಯೆಯೂ ಇದೇ ವಿಚಾರ ಚರ್ಚೆಗೆ ಬಂತು. 'ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಹಾಗೆ ಮಾಡಿದಾಗ ಎಷ್ಟು ಅನ್​ಕಂಪರ್ಟೆಬಲ್ ಫೀಲ್ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ' ಎಂದರು ಸಾನ್ಯಾ.  

ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ' ಎಂದರು ನಂದು ಕೂಡ ದೂರಿದರು. ಉದಯ್ ಸೂರ್ಯ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಮಹಿಳಾ ಸ್ಪರ್ಧಿಗಳ ಮಧ್ಯೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಉದಯ್​ಗೆ ಈ ಬಗ್ಗೆ ಬುದ್ಧಿವಾದ ಹೇಳಬೇಕು ಎಂಬ ಬಗ್ಗೆಯೂ ಚರ್ಚೆ ಆಗುತ್ತಿದೆ.