Yash : ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟ ರಾಕಿಂಗ್ ಸ್ಟಾರ್ ಯಶ್

By Infoflick Correspondent

Updated:Friday, August 12, 2022, 21:06[IST]

Yash : ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ರಿಲೀಸ್ ಆಗಿ ಸಕ್ಸಸ್ ಅನ್ನು ಕಂಡಾಯ್ತು. ಮುಂದೆ ಯಾವ ಚಿತ್ರವನ್ನು ರಾಕಿ ಭಾಯ್ ಮಾಡುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಶ್ ಅವರ 19ನೇ ಚಿತ್ರದ ಬಗ್ಗೆ ಯಾವಾಗ ಅನೌನ್ಸ್ ಮಾಡಲಾಗುತ್ತೆ ಎಂಬ ಪ್ರಶ್ನೆಗ ಈಗ ಎಲ್ಲರನ್ನೂ ಕಾಡುತ್ತಿದೆ. ಈ ನಡುವೆಯೇ ಯಶ್ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ.

ಕಳೆದ ತಿಂಗಳು ನಟ ಯಶ್ ಅವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅದು ತಮ್ಮ ಮುಂದಿನ ಚಿತ್ರಕ್ಕಾಗಿ ಎಂಬ ವಿಚಾರವನ್ನು ಅವರ ಫಿಟ್ ನೆಸ್ ಟ್ರೈನರ್ ಹೇಳಿದ್ದರು. ಈ ಹೇಳಿಕೆ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಯಾವ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ.? ಅವರ ಮುಂದಿನ ಚಿತ್ರದ ಹೆಸರೇನು.? ನಿರ್ದೇಶಕರು ಯಾರು.? ಯಶ್ ಗೆ ಜೋಡಿಯಾಗುತ್ತಿರುವ ನಟಿಯಾರು.? ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರ ಮನದಲ್ಲೂ ಸುಳಿದಾಡುತ್ತಿವೆ. ಈ ಪ್ರಶ್ನೆಗಳನ್ನು ಯಶ್ ಅವರು  ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.

ನಿನ್ನೆ ಯಶ್ ಅವರು ಮೈಸೂರಿಗೆ ಭೇಟಿ ಕೊಟ್ಟಿದ್ದರು. ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯ ಯುವಜನ ಮಹೋತ್ಸವವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ನಟ ಯಶ್ ಅವರು ಆಗಮಿಸಿದ್ದರು. ನಟ ಯಶ್ ಗೆ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುತ್ತಾ, ರಾಕಿಭಾಯ್ ಎಂದು ಜೈಕಾರ ಕೂಗುತ್ತಿದ್ದರು. ಈ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದರು. ತಮ್ಮೂರು ಮೈಸೂರು, ಕಾಲೇಜಿನ ದಿನಗಳು, ಜೀವನ, ಬದಲಾವಣೆಗಳು ಹೀಗೆ ಜೊತೆಗೆ ಪಾಸಿಟಿವಿಟಿ ಬಗ್ಗೇಯೂ ಮಾತನಾಡಿದ್ದಾರೆ. ಈ ವೇಳೆ ತಮ್ಮ ಹೇರ್ ಸ್ಟೈಲ್ ಬಗ್ಗೆಯೂ ಹೇಳಿದ್ದು, ನನ್ನ ಮುಂದಿನ ಚಿತ್ರ ಯಾವುದು, ಅದರಲ್ಲಿ ಯಾವ ಸ್ಟೈಲ್ ನಲ್ಲಿ ಕಾಣಿಸುತ್ತೇನೆ ಎಂಬುದನ್ನು ಕಾದು ನೋಡಿ ಎಂದು ಹೇಳಿದ್ದಾರೆ.

 
ಕೆಜಿಎಫ್ ಚಿತ್ರದ ಬಳಿಕ ಯಶ್ ಅವರ ಮಾರ್ಕೆಟ್ ವಿಸ್ತಾರಗೊಂಡಿದ್ದು, ಅವರ ಸಿನಿಮಾಗಾಗಿ ಇಡೀ ಭಾರತವೇ ಕಾಯುತ್ತಿದೆ. ಇನ್ನು ನಿರ್ಮಾಪಕ ದಿಲ್ ರಾಜು ಅವರು ಯಶ್ ಅವರ ಮುಂದಿನ ಚಿತ್ರಕ್ಕೆ ಹಣ ಹೂಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ಯಶ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ನಟಿಸಲಿದ್ದಾರೆ. ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಸದ್ಯ ಟ್ವಿಟ್ಟರ್ನಲ್ಲಿ YASH19 ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.