ಬಾಲಿವುಡ್ ಮೂವಿನ ಹಿಂದೆ ಹಾಕಿದ ಕೆಜಿಎಫ್-2 ಚಿತ್ರ..! ಇದು ಕನ್ನಡದ ಗತ್ತು ಅಂದ್ರೆ..!!

By Infoflick Correspondent

Updated:Monday, April 11, 2022, 14:42[IST]

ಬಾಲಿವುಡ್ ಮೂವಿನ ಹಿಂದೆ ಹಾಕಿದ ಕೆಜಿಎಫ್-2 ಚಿತ್ರ..! ಇದು ಕನ್ನಡದ ಗತ್ತು ಅಂದ್ರೆ..!!

ಜೆರ್ಸಿ ಮುಂಬರುವ ಭಾರತೀಯ ಹಿಂದಿ-ಭಾಷೆಯ ಕ್ರೀಡಾ ಕಥೆಯ ಚಲನಚಿತ್ರವಾಗಿದ್ದು, ಗೌತಮ್ ತಿನ್ನನೂರಿ ಬರೆದು ನಿರ್ದೇಶಿಸಿದ್ದಾರೆ, ಇದು ಅವರ ಹಿಂದಿ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ, ಮತ್ತು ಅದೇ ಶೀರ್ಷಿಕೆಯ ಅವರ 2019 ರ ತೆಲುಗು ಚಲನಚಿತ್ರದ ರಿಮೇಕ್ ಆಗಿದೆ ಎಂದು ತಿಳಿದುಬಂದಿದೆ. ಮೃಣಾಲ್ ಠಾಕೂರ್ ಮತ್ತು ಪಂಕಜ್ ಕಪೂರ್ ಜೊತೆಗೆ ತನ್ನ ಮಗನ ಜೆರ್ಸಿಯ ಆಸೆಗಾಗಿ ಆಟಕ್ಕೆ ಮರಳುವ ಮಾಜಿ ಕ್ರಿಕೆಟಿಗನಾಗಿ ಶಾಹಿದ್ ಕಪೂರ್ ನಟಿಸಿದ್ದಾರೆ. ಚಿತ್ರವನ್ನು ಗೀತಾ ಆರ್ಟ್ಸ್, ದಿಲ್ ರಾಜು ಪ್ರೊಡಕ್ಷನ್, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಬ್ರಾಟ್ ಫಿಲಂಸ್ ನಿರ್ಮಿಸಿದೆ..   

ಹೌದು ಇದೀಗ ನಟ ಶಾಹಿದ್ ಕಪೂರ್ ಅಭಿನಯದ ಜರ್ಸಿ ಚಿತ್ರದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ನಿರ್ದೇಶಕ ಗೌತಮ್ ಅವರು ಮತ್ತೊಂದು ಹೊಸ ಅಪ್ಡೇಟ್ ನೀಡಿದ್ದಾರೆ. ಇದೆ ಏಪ್ರಿಲ್ 14ಕ್ಕೆ ಸಿನಿಮಾ ಬಿಡುಗಡೆ ಡೇಟ್ ಫಿಕ್ಸ್ ಮಾಡಿದ್ದ ಚಿತ್ರತಂಡ ಈಗ ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. 2022 ಏಪ್ರಿಲ್ 14ಕ್ಕೆ ಜರ್ಸಿ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಈ ಮುಂಚೆಯೇ ಹೇಳಿದ್ದರು. ಆದರೆ ಟ್ವಿಟರ್ ಮೂಲಕ ಗೌತಮ್ ಈಗ ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಏಪ್ರಿಲ್ 22 ಕ್ಕೆ ಜೆರ್ಸಿ ಸಿನಿಮಾ ತೆರೆಮೇಲೆ ಬರುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೆ ಕಾರಣ ಹುಡುಕಿ ಹೊರಟ ಸಿನಿಮಾ ವೀಕ್ಷಕರು ಅತ್ತ ಕನ್ನಡದ ಕೆಜಿಎಫ್ 2 ಫ್ಯಾನ್ ಇಂಡಿಯಾ ಚಿತ್ರ ಇದೆ ಏಪ್ರಿಲ್ 14ಕ್ಕೆ ಇಡೀ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಹಾಗಾಗಿ ಆ ಜೆರ್ಸಿ ಚಿತ್ರತಂಡ ಈ ರೀತಿ ನಿರ್ಧಾರ ಕೈಗೊಂಡಿದೆ ಎಂದು ಹೇಳುತ್ತಿದ್ದಾರೆ. ಹಾಗೆ ಕೆಜಿಎಫ್ ಚಿತ್ರಕ್ಕಾಗಿ ಹೆದರಿ ತಮ್ಮ ಚಿತ್ರವನ್ನು ಮುಂದೂಡಿದ್ದಾರೆ, ಇದು ಬಾಲಿವುಡ್ ಸಿನಿಮಾ ಆಗಿದ್ದು,  ಕನ್ನಡದ ಸಿನಿಮಾಗೆ ಹೆದರಿ ತಮ್ಮ ಚಿತ್ರವನ್ನು ಮುಂದೂಡಿದ್ದಾರೆ ಎಂದು ನೆಟ್ಟಿಗರು ಹಾಗೂ ಕನ್ನಡಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಕನ್ನಡಿಗರ ಗತ್ತು ಎಂದು ಹೆಮ್ಮೆಯಿಂದ ಕನ್ನಡಿಗರು ಹೇಳಿಕೊಳ್ಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿ ಶೇರ್ ಮಾಡಿ....