ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಟಿಕೆಟ್ ಬುಕಿಂಗ್ ಶುರು: ಎಲ್ಲಿ ನೋಡಿ ನೀವೂ ಈಗಲೇ ಬುಕ್ ಮಾಡಿ..

By Infoflick Correspondent

Updated:Friday, March 11, 2022, 12:44[IST]

ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಟಿಕೆಟ್ ಬುಕಿಂಗ್ ಶುರು:  ಎಲ್ಲಿ ನೋಡಿ   ನೀವೂ ಈಗಲೇ ಬುಕ್ ಮಾಡಿ..

ಪುನೀತ್ ರಾಜ್ ಕುಮಾರ್  (Puneeth Raj Kumar) ಅವರ ಹುಟ್ಟುಹಬ್ಬದ ದಿನವೇ ಜೇಮ್ಸ್  (James movie) ಚಿತ್ರವನ್ನು ರಿಲೀಸ್ ಆಗುತ್ತಿದೆ. ಅಪ್ಪು ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಮಾರ್ಚ್ 17 ರಂದು ಜೇಮ್ಸ್ ಚಿತ್ರ ರಿಲೀಸ್ ಆಗಲಿದ್ದು, ಈಗಾಗಲೇ ಟಿಕೆಟ್ ಬುಕಿಂಗ್ ಕೂಡ ಶುರುವಾಗಿದೆ. ಸರಿ ಸುಮಾರು ವಿಶ್ವಾದ್ಯಂತ ನಾಲ್ಕು ಸಾವಿರ ಥಿಯೇಟರ್ ಗಳಲ್ಲಿ ಜೇಮ್ಸ್ ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಈ ನಡುವೆ ಜೇಮ್ಸ್ ಜಾತ್ರೆ ನಡೆಸಲು ಅಭಿಮಾನಿಗಳು ತಯಾರಿ ನಡೆಸುತ್ತಿದ್ದು, ಕೆಲ ಥಿಯೇಟರ್ ಗಳ ಎದುರು ಅದಾಗಲೇ ಅಪ್ಪು ಕಟ್ಟೌಟ್ ಗಳು ರಾರಾಜಿಸುತ್ತಿವೆ.

ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಇನ್ನು ಕೇವಲ ಆರು ದಿನ ಬಾಕಿ ಇದೆ. ಅಷ್ಟರಲ್ಲಾಗಲೇ ಜೇಮ್ಸ್ ಚಿತ್ರದ ಟಿಕೆಟ್ ಗಳ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನ ಐದು ಗೋಪಾಲನ್ ಮಾಲ್ ಗಳಲ್ಲಿ ಜೇಮ್ಸ್ ಚಿತ್ರದ ಟಿಕೆಟ್ ಗಳನ್ನು ವಿತರಿಸಲಾಗುತ್ತಿದೆ.  ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಹಾಗೂ ಮಿನಿಫ್ಲೆಕ್ಸ್ ಜೊತೆಗೆ ಸಿರ್ಸಿ ಸರ್ಕಲ್ನಲ್ಲಿರುವ ಗೋಪಾಲನ್ ಮಾಲ್ ಮತ್ತು ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್ ನಲ್ಲಿ ಜೇಮ್ಸ್ ಚಿತ್ರದ ಟಿಕೆಟ್ ಬುಕಿಂಗ್ ಆರಂಭವಾಗಿದೆ.  

ಅಭಿಮಾನಿಗಳು ಜೇಮ್ಸ್ ಚಿತ್ರದ ಟಿಕೆಟ್ (Ticket Booking) ಪಡೆಯಲು ಮುಗಿ ಬೀಳುತ್ತಿದ್ದಾರೆ. ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ವಿತರಿಸಲಾಗುತ್ತಿದೆ. ಜೇಮ್ಸ್ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. ಶಿವಣ್ಣ ಹಾಗೂ ರಾಘಣ್ಣ ಕೂಡ ಜೇಮ್ಸ್ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಈ ಚಿತ್ರದಲ್ಲಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದ ಥಿಯೇಟರ್, ಸ್ಮಾಲ್ ಸ್ಕ್ರೀನ್ ಹಾಗೂ ಪಿವಿಆರ್ ಗಳಲ್ಲಿ ಜೇಮ್ಸ್ ಚಿತ್ರ ರಿಲೀಸ್ ಆಗಲಿದೆ.