ಬಾಕ್ಸಾಫಿಸ್‌ನಲ್ಲಿ ದಾಖಲೆ ಬರೆದ ಗಾಳಿಪಟ-2 ಸಿನಿಮಾ ಗಳಿಸಿದ್ದೆಷ್ಟು?

By Infoflick Correspondent

Updated:Tuesday, August 16, 2022, 11:06[IST]

ಬಾಕ್ಸಾಫಿಸ್‌ನಲ್ಲಿ ದಾಖಲೆ ಬರೆದ ಗಾಳಿಪಟ-2  ಸಿನಿಮಾ ಗಳಿಸಿದ್ದೆಷ್ಟು?

ಗಾಳಿಪಟ 2' ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ ಆಗುತ್ತಿದೆ. ಇದರಿಂದ ಇಡೀ ಚಿತ್ರತಂಡದವರ ಮೊಗದಲ್ಲೂ ನಗು ಮೂಡಿದೆ.ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ  ಗಾಳಿಪಟ-2 ಚಿತ್ರದ ಕಲೆಕ್ಷನ್​ ಸಖತ್ ಆಗಿಯೇ ಸದ್ದು ಮಾಡಿತ್ತು, ಇದೀಗ ಸಾಲು ಸಾಲು ರಜೆ ಹಿನ್ನೆಲೆ ಗಾಳಿಪಟ 2  ಸಿನಿಮಾ ಕಲೆಕ್ಷನ್ ಡಬಲ್ ಆಗಿದೆ. 'ಗಾಳಿಪಟ 2' ಗಣೇಶ್‌ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ.

ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ 'ಗಾಳಿಪಟ'-2 ಪ್ರದರ್ಶನ ಕಂಡಿದೆ. 14 ವರ್ಷಗಳ ಹಿಂದೆ ತೆರೆಕಂಡಿದ್ದ ಗಾಳಿಪಟ ಚಿತ್ರದ ಮುಂದುವರಿದ ಭಾಗವೇ ಗಾಳಿಪಟ 2 ಚಿತ್ರವಾಗಿದ್ದು ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಗಾಳಿಪಾಟ ಎರಡನೇ ದಿನವೂ 10 ಕೋಟಿ ಕಲೆಕ್ಷನ್​ ಮಾಡಿದ್ದು, ಮೂರನೇ ದಿನ 5 ಕೋಟಿ ಕಲೆಕ್ಷನ್​ ಆಗಿದೆ. ಎಂದು ಮೂಲಗಳು ತಿಳಿಸಿದೆ.

ಈ ಲೆಕ್ಕಾಚಾರದ ಮೇಲೆ ಗಾಳಿಪಟ 2 ಸಿನಿಮಾ ಈ ವಾರಕ್ಕೆ 40 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಣೇಶ್‌ ಸಿನಿಮಾ‌ ಕೆರಿಯರ್​ನಲ್ಲಿ ಗಾಳಿಪಟ 2 ಸಿನಿಮಾ‌ ಒಳ್ಳೆ ಗಳಿಕೆ ಎನ್ನಲಾಗುತ್ತಿದೆ. ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರ ಜೊತೆಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಈ ಮೂರು ಜನ‌ ಜೋಡಿಯಾಗಿ ಮಿಂಚಿದ್ದಾರೆ. ಒಟ್ಟಾರೆ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಕಮಾಲ್ ಮಾಡಿದೆ ಅಂತಾ ಹೇಳಬಹುದು.