ಬ್ರಹ್ಮಗಂಟು ಗೀತಾ ಭಾರತೀ ಭಟ್ ಜೀವನದಲ್ಲಿ ಅದೊಂದು ಘಟನೆ ಎಲ್ಲವನ್ನು ಬದಲಾಯಿಸಿತ್ತು..

By Infoflick Correspondent

Updated:Wednesday, June 1, 2022, 10:55[IST]

ಬ್ರಹ್ಮಗಂಟು ಗೀತಾ ಭಾರತೀ ಭಟ್ ಜೀವನದಲ್ಲಿ ಅದೊಂದು ಘಟನೆ ಎಲ್ಲವನ್ನು ಬದಲಾಯಿಸಿತ್ತು..

ಬ್ರಹ್ಮಗಂಟು ಧಾರಾವಾಹಿಯ ನಾಯಕಿ ಗೀತಾ ಭಾರತೀ ಭಟ್ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ಐದನೇ ವಯಸ್ಸಿನಿಂದಲೇ ಸಂಗೀತ ಕಲಿಯಲು ಶುರು ಮಾಡಿದ ಗೀತಾ ಅವರು ಉದಯವಾಣಿಯಲ್ಲಿ ಹಾಡಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಗೀತಾ ಅವರು ದಪ್ಪಗಿದ್ದರೂ, ಆಕ್ಟಿಂಗ್, ಡ್ಯಾನ್ಸ್, ಹಾಗೂ ಹಾಡು ಹಾಡುವುದಕ್ಕೆ ಹಿಂದೇಟು ಹಾಕುವುದಿಲ್ಲ. ಕಿರುತೆರೆಯಷ್ಟೇ ಅಲ್ಲದೇ, ಸಿನಿಮಾಗಲಲ್ಲೂ ನಟಿಸಿದ್ದಾರೆ. ಮಂಕು ಭಾಯ್ ಫಾಕ್ಸಿ ರಾಣಿ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಅಂಬರೀಷ್ ಹಾಗೂ ಸುದೀಪ್ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.    

ಬ್ರಹ್ಮಗಂಟು ಸೀರಿಯಲ್ ನಂತರ ಎಲ್ಲೂ ಕಾಣಿಸಿಕೊಳ್ಳದ ಗೀತಾ, ಬಿಗ್ ಬಾಸ್ ಸೀಸನ್ 8 ರಲ್ಲೂ ಭಾಗವಹಿಸಿದ್ದರು. ನಂತರ ಸೈಲೆಂಟ್ ಆಗಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿದ್ದಾರೆ. ಗೀತಾ ಅವರು ಜಿಮ್ ಗೆ ಕೂಡ ಸೇರಿಕೊಂಡಿದ್ದು, ಡಯಟ್, ವ್ಯಾಯಾಮ, ವಾಕಿಂಗ್ ಎಲ್ಲವನ್ನೂ ಮಾಡುತ್ತಾ ಈಗ ಸಣ್ಣಗಾಗುತ್ತಿದ್ದಾರೆ. ಸದಾ ಇನ್ ಸ್ಟಾಗ್ರಾಂನಲ್ಲಿ ವರ್ಕೌಟ್ ವೀಡಿಯೋ ಅಪ್ ಲೋಡ್ ಮಾಡುತ್ತಿರುವ ಗೀತಾ ಭಟ್ ಅವರು, ಕೆಲ ರೀಲ್ಸ್ ಗಳನ್ನು ಕೂಡ ಮಾಡುತ್ತಿರುತ್ತಾರೆ. ಇನ್ನು ಅಭಿಮಾನಿಗಳು ಗೀತಾ ರನ್ನು ಸ್ಲಿಮ್ ಆಗಿ ನೋಡಲು ಕಾತುರರಾಗಿದ್ದಾರೆ.

ಆದರೆ ಗೀತಾ ಭಟ್ ಅವರು ಸಿನಿರಂಗಕ್ಕೆ ಬರುವ ಮುನ್ನ ಏನ್ ಕೆಲಸ ಮಾಡುತ್ತಿದ್ದರು ಗೊತ್ತಾ..? ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದ ಗೀತಾ ಅವರು ಆಡುವಾಗ ಕಾಲಿಗೆ ಏಟು ಮಾಡಿಕೊಂಡಿದ್ದರು. ಇದರಿಂದ ಬರೋಬ್ಬರಿ ನಾಲ್ಕು ತಿಂಗಳ ಕಾಲ ಬೆಡ್ ರೆಸ್ಟ್ ಮಾಡಿದರು. ಆಗ ಗೀತಾ ಅವರು ಇದ್ದಕ್ಕಿದ್ದಂತೆ ದಪ್ಪಗಾದರು. ಇದರಿಂದ ಸ್ನೇಹಿತರು, ಸಂಬಂಧಿಕರು ಎಲ್ಲರಿಂದಲೂ ಗೇಲಿ ಮಾತುಗಳನ್ನು ಕೇಳಿದರು. ಆದರೂ ತಮ್ಮ ಪಾಡಿಗೆ ತಾವಿದ್ದ ಗೀತಾ ಅವರು, ಬ್ಯಾಂಕ್ ಒಂದರಲ್ಲಿ ಉದ್ಯೋಗ ಪಡೆದರು. ಸರಿ ಸುಮಾರು ಎರಡು ವರ್ಷಗಳ ಕಾಲ ಬ್ಯಾಂಕ್ ನಲ್ಲಿ ಕೆಲಸ ಮಾಡಿದರು. ನಂತರ ಕೆಲಸಕ್ಕೆ ರಿಸೈನ್ ಮಾಡಿ ಬಣ್ಣದ ಲೋಕಕ್ಕೆ ಬಂದರು.