ಪೊಗರು ಸಿನಿಮಾದಲ್ಲಿ ಬ್ರಾಹ್ಮಣರ ಅವಹೇಳನ..! ಕ್ಷಮೆ ಕೇಳಿ ಎಂದ ಬ್ರಾಹ್ಮಣ ಸಮುದಾಯ

Updated: Monday, February 22, 2021, 13:21 [IST]

ಹೌದು ಫೆಬ್ರುವರಿ 19ನೇ ತಾರೀಕು ಸ್ಯಾಂಡಲ್ವುಡ್ ಸ್ಟಾರ್ ನಾಯಕ ನಟ ಧ್ರುವ ಸರ್ಜಾ ಅವರ ಪೊಗರು ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿ, ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮತ್ತು ಬ್ರಾಹ್ಮಣ ಸಮುದಾಯ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಈ ಚಿತ್ರದಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಆರೋಪಿಸಿದ್ದಾರೆ.  ಮತ್ತು ಆ ದೃಶ್ಯಗಳನ್ನ ಚಿತ್ರದಿಂದ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಅಷ್ಟಕ್ಕೂ ಬ್ರಾಹ್ಮಣರು ಹೇಳಿದ್ದೇನು ಗೊತ್ತಾ, ಮುಂದೆ ಓದಿ..

ಬ್ರಾಹ್ಮಣ ಸಮುದಾಯ ಮಾಡಿದ ಆರೋಪ ಹೀಗಿದೆ.    


'ಕೂಡಲೇ ಚಿತ್ರತಂಡ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ. ಪೊಗರು ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರು ಕ್ಷಮೆ ಕೇಳಬೇಕು, ಜೊತೆಗೆ ದೃಶ್ಯ ತೆಗೆದುಹಾಕಬೇಕು. ಇಲ್ಲದಿದ್ದರೆ ಮುಂದೆ ಹೋರಾಟ ಮಾಡ್ತಿವಿ. ಫೆಬ್ರವರಿ 23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸುತ್ತೆವೆ. ಬುಧವಾರ ಫೆಬ್ರವರಿ 24 ರಂದು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ' ಎಂದು ಕರ್ನಾಟಕ ರಾಜ್ಯದ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮತ್ತು ಬ್ರಾಹ್ಮಣ ಸಮುದಾಯ ಆರೋಪಿಸಿದ್ದಾರೆ...   

"ಇತ್ತೀಚೆಗಷ್ಟೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ ಕನ್ನಡದ 'ಪೊಗರು' ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ನಿಜಕ್ಕೂ ಖಂಡನೀಯ, ಬ್ರಾಹ್ಮಣರು ತಿರುಗಿ ಬಿಳುವುದಿಲ್ಲ ಅನ್ನುವ ಆಲೋಚನೆ ಇದ್ದಾರೆ ಅದು ತಪ್ಪು ಕಲ್ಪನೆ, ನಾನು ನಿರ್ದೇಶಕರಿಗೆ ಈ ಕೂಡಲೇ ಅವಹೇಳನಕಾರಿ ಪದವನ್ನು ಚಿತ್ರದಿಂದ ತೆಗೆದು ಹಾಕಬೇಕೆಂದು ಆಗ್ರಹಿಸುತ್ತೇನೆ, ಇಲ್ಲದಿದ್ದರೆ ಮಂಗಳವಾರ ದಿನಾಂಕ 23.02.2021ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸುತ್ತೆವೆ ಮತ್ತು ಬುಧವಾರ ದಿನಾಂಕ 24.02.2021 ರಂದು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೆವೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಿ ನಂತರ ಕ್ಷಮೆ ಯಾಚಿಸಿದ್ದಾರೆ, ಉನ್ನತ ಸ್ಥಾನದಲ್ಲಿರುವ ನೀವು ಹೀಗೆ ಮಾತನಾಡುವುದು ನಿಮಗೆ ಶೋಭೆ ತರುವಂತಹುದಲ್ಲ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಒಳ್ಳೆಯದು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಚ್ಚಿದಾನಂದಮೂರ್ತಿ ಪೋಸ್ಟ್ ಸಹ ಹಾಕಿದ್ದಾರೆ..   

ಅಷ್ಟಕ್ಕೂ ಸಿನಿಮಾದಲ್ಲಿ ಏನಿದೆ ಗೊತ್ತಾ, ಮುಂದೆ ಓದಿ.
ಪೊಗರು ಚಿತ್ರದಲಿ ಖಳನಾಯಕ ಬ್ರಾಹ್ಮಣ ಅರ್ಚಕನ ಭುಜದ ಮೇಲೆ ಕಾಲಿಡುತ್ತಾನೆ, ಇನ್ನು ಊಟ-ತಿಂಡಿ ವಿಚಾರದ ಬಗ್ಗೆ ಕೂಡ ಚಿತ್ರದಲ್ಲಿ ಮಾತನಾಡಲಾಗಿದೆ. ನಟಿ ರಶ್ಮಿಕಾ ಕುಟುಂಬ ವೈದಿಕ ಕುಟುಂಬ ಆಗಿರುತ್ತದೆ. ರಶ್ಮಿಕಾಗೆ ಟಾಂಗ್ ಕೊಡುವ ವೇಳೆ, ಹಾಗೂ ಅರ್ಚಕರ ಜೊತೆ ಮಾತನಾಡು ವೇಳೆ ಕೆಲ ಡೈಲಾಗ್‌ಗಳು ಸಹ ಇವರ ಬಗ್ಗೆ ಕೇಳಿ ಬಂದಿವೆ. ಹಾಗಾಗಿ ಈ ಕಾರಣಕ್ಕೆ ಬ್ರಾಹ್ಮಣ ಸಮುದಾಯ ಆರೋಪಿಸಿದೆ ಎಂದು ಕೇಳಿ ಬಂದಿದೆ. ಹಾಗೇನೇ ಈ ಕುರಿತಾಗಿ ಅತ್ತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪರ-ವಿರೋಧದ ಮಾತುಗಳು ಕೂಡ ಕೇಳಿ ಬರುತ್ತಿವೆ....