Darshan : ಸ್ಟಾರ್ ಡೈರೆಕ್ಟರ್ ದರ್ಶನ ಗೇ ಡೈರೆಕ್ಷನ್ !! ಪಾನ್ ಇಂಡಿಯಾ ಸಿನಿಮಾ ಆಗುತ್ತಾ ?
Updated:Friday, May 20, 2022, 18:00[IST]

ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ದೇಶಕರ ಚಿತ್ರಗಳು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕುತ್ತದೆ. ಹಾಗೆ ಕೆಲವು ಹಲವು ಬಾರಿ ಸಿನಿಮಾಗಳು ನಾಯಕ ನಟರ ಮೇಲೆ ನಿಂತಿರುತ್ತವೆ. ಅಂತಹ ನಿರ್ದೇಶಕರಲ್ಲಿ ದುನಿಯಾ ಸೂರಿ ಕೂಡ ಒಬ್ಬರು. ಅಂತಹ ನಟರಲ್ಲಿ ದರ್ಶನ್. ಸದ್ಯ ನಿರ್ದೇಶಕ ಸೂರಿ ಮತ್ತು ನಟ ದರ್ಶನ್ ಬಗ್ಗೆ ಮಾತನಾಡಲು ಕಾರಣ ಈ ಕಾಂಬಿನೇಷನ್ನಲ್ಲಿ ಸಿನಿಮಾ ಬಂದರೆ ಸೂಪರ್ ಅಂತಿದ್ದಾರೆ ಅಭಿಮಾನಿಗಳು.
ಅಭಿಮಾನಿಗಳ ಕನಸು ನನಸಾಗುವ ಸಾಧ್ಯತೆಗಳು ಕೂಡಿಬಂದಿದೆ. ಒಂದು ಕಡೆ ಮಾಸ್ ಹೀರೊ ದರ್ಶನ್, ಮತ್ತೊಂದು ಕಡೆ ಮಾಸ್ ಡೈರೆಕ್ಟರ್ ಸುಕ್ಕಾ ಸೂರಿ. ಮಾಸ್ ಲೇಬಲ್ ಇರುವ ಈ ಇಬ್ಬರು ಒಂದಾದರೆ ಸಿನಿಮಾ ಸೂಪರ್ ಮಾಸ್ ಆಗಿ ಇರಲಿದೆ . ದುನಿಯಾ , ಜಾಕಿ ಇಂತಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಚಾಲೆಂಜಿಗದ ಸ್ಟಾರ್ ದರ್ಶನ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುರತ್ತಿದೆ. ಅಂತಿಮ ಪ್ರಕಟಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಸುಕ್ಕ ಸೂರಿ ಹಾಗೂ ಡಿಬಾಸ್ ದರ್ಶನ್ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾದ ಟೈಟಲ್ ಇನ್ನೂ ಹೊರ ಬಿದ್ದಿಲ್ಲ. ಸಿನಿಮಾ ಸದ್ಯದಲ್ಲಿಯೇ ಆರಂಭ ಆಗಲಿದ್ದು ಸುಕ್ಕ ಸೂರಿ ಆಕ್ಷನ್ ಕಟ್ ಹೇಳಲಿರುವ ದರ್ಶನ್ ಜೊತೆಗಿನ ಪ್ಯಾನ್ ಇಂಡಿಯಾ ಸಿನಿಮಾ ನೋಡಲು ಜನತೆ ಉತ್ಸುಕರಾಗಿದ್ದಾರೆ.
ನಟ ದರ್ಶನ್ ಸದ್ಯ ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಶೂಟಿಂಗ್ನಲ್ಲಿ ದರ್ಶನ್ ನಿರತರಾಗಿದ್ದಾರೆ. ನಂತರ ಈ ವಿಷಯದ ಕುರಿತಾಗಿ ಅಂತಿಮ ಪ್ರಕಟಣೆಯನ್ನು ಹೊರಡಿಸಲಿದ್ದಾರೆ.