Puneeth Rajkumar : ಅಪ್ಪು ನೆನಪಿನಲ್ಲಿ ಜೀವನ ಮೆಲುಕು ಹಾಕುತ್ತಿರುವ ಕಾಲು ಸ್ವಾಧೀನವಿಲ್ಲದ ಅಣ್ಣ ತಂಗಿ..! ಕಣ್ಣು ತುಂಬಿ ಬರುತ್ತೆ

By Infoflick Correspondent

Updated:Friday, July 1, 2022, 15:50[IST]

Puneeth Rajkumar :  ಅಪ್ಪು ನೆನಪಿನಲ್ಲಿ ಜೀವನ ಮೆಲುಕು ಹಾಕುತ್ತಿರುವ ಕಾಲು ಸ್ವಾಧೀನವಿಲ್ಲದ ಅಣ್ಣ ತಂಗಿ..! ಕಣ್ಣು ತುಂಬಿ ಬರುತ್ತೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ 7 ತಿಂಗಳು ಕಳೆದಿದೆ. ಹೌದು ಪುನೀತ್ ಅವರು ಈಗಾಗಲೇ ದೈಹಿಕವಾಗಿ ದೂರವಾಗಿ ತಿಂಗಳುಗಳೇ ಕಳೆಯುತ್ತಿದ್ದರೂ ಕೂಡ ಅಪ್ಪು ಅವರ ನೆನಪಿನಲ್ಲಿ ಅವರ ಅಗಲಿಕೆಯ ನೋವಿನಲ್ಲಿಯೇ ಅಭಿಮಾನಿಗಳು ಜೀವನವ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ದೇವರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಅಪ್ಪು ಅವರನ್ನು ಇಷ್ಟಪಡದೆ ಇರುವವರು ತುಂಬಾ ಕಡಿಮೆ. ಅದೇ ರೀತಿ ಇದೀಗ ಇಲ್ಲೊಂದು ಅಣ್ಣ ತಂಗಿಯ ಅಪರೂಪದ ಜೋಡಿ ವಿಶೇಷಚೇತನ ಹೊಂದಿರುವ ಇವರು ಅಪ್ಪು ಅವರ ಧ್ಯಾನದಲ್ಲಿಯೇ ಜೀವನ ಮಾಡುತ್ತಿದ್ದಾರಂತೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹುಚ್ಚವನಹಳ್ಳಿ ಯಲ್ಲಿ ನಾಗರಾಜ್ ಮತ್ತು ನಾಗರತ್ನ ಎನ್ನುವ ದಂಪತಿಗೆ ಇಬ್ಬರು ಮಕ್ಕಳಿದ್ದು ರಂಜಿತ ಮತ್ತು ರಂಗನಾಥ್ ಎಂದು ಹೆಸರಿಟ್ಟಿದ್ದಾರೆ.  

4 ವರ್ಷದವರೆಗೆ ಚೆನ್ನಾಗಿ ಎಲ್ಲ ಮಕ್ಕಳಂತೆ ಬೆಳೆದಿದ್ದರಂತೆ ಇವರ ಮಕ್ಳಳು ಸಹ. ಹಾಗಾಗಿ ಎರಡೇ ಮಕ್ಕಳು ಸಾಕು ಎಂದು ಈ ಜೋಡಿ ಕೂಡ ಸಂತೃಪ್ತಿ ಪಟ್ಟಿಕೊಂಡಿದ್ದು, ನಾಲ್ಕು ವರ್ಷದ ಬಳಿಕ ಈ ದಂಪತಿಯ ಮಕ್ಕಳಿಬ್ಬರಿಗೂ ಕೂಡ ಮೆದುಳು ಪಾರ್ಶ್ವವಾಯು ಅಟ್ಯಾಕ್ ಆಗಿದೆ. ಲೋಕದ ಜ್ಞಾನವಿಲ್ಲದೆ ಎರಡು ಕಾಲಿನ ಸ್ವಾಧೀನ ಇಲ್ಲದಂತಾಗಿದೆ ಈ ಅಣ್ಣ ತಂಗಿಗೆ. ಅಂದಿನ ದಿನದಿಂದ ಸುಮಾರು 26 ವರ್ಷಗಳ ಕಾಲದಿಂದ ಅವರ ತಂದೆ-ತಾಯಿಯೇ ಅಣ್ಣ ತಂಗಿ ಇಬ್ಬರನ್ನ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಟ ಪುನೀತ್ ಅವರ ಅಗಲಿಕೆಯ ಆದ ಬಳಿಕ ಈ ಅಣ್ಣ ತಂಗಿ ಜೋಡಿ ಎರಡು ದಿನ ಊಟ ಬಿಟ್ಟು ತೀರ್ವ ಪ್ರತಿಭಟನೆ ನಡೆಸಿದ್ದರಂತೆ ಎಂದು ಅವರ ತಂದೆ ತಾಯಿ ಹೇಳಿಕೊಂಡಿದ್ದಾರೆ. ಹಾಗೆ ತಂದೆ ತಾಯಿಯ ಮಾತಿಗೆ ಓಗೊಟ್ಟು ಬಳಿಕ ಸಮಾಧಾನ ಮಾಡಿಕೊಂಡಿದ್ದಾರೆ.

ಜೊತೆಗೆ ಶಿವಣ್ಣ ಅವರನ್ನಾದರೂ ಭೇಟಿ ಮಾಡಬೇಕು ಎಂಬುದೇ ಈ ಅಣ್ಣ ತಂಗಿ ಆಸೆಯಂತೆ. ಮಕ್ಕಳ ಆಗು ಹೋಗುಗಳನ್ನು ಅವರ ಎಲ್ಲವನ್ನು ನೋಡುವ ಈ ತಂದೆ ತಾಯಿ, ಮಕ್ಕಳ ಇಷ್ಟದಂತೆಯೇ ಶಿವಣ್ಣ ಅವರಿಗಾದರೂ ನನ್ನ ಮಕ್ಕಳನ್ನು ಭೇಟಿ ಮಾಡಿಸಬೇಕು ಎಂಬುದಾಗಿ ಹೇಳಿಕೊಂಡಿದ್ದಾರೆ. ನಟ ಶಿವಣ್ಣ ಈ ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡುತ್ತಾರ ಕಾದು ನೋಡಬೇಕು ಧನ್ಯವಾದಗಳು...( source : asiannet suvarna news )