ನಿನ್ನೆ ಬಿಟಿವಿ ನಿರೂಪಕಿ ದಿವ್ಯ ವಸಂತ ಇಡೀ ದಿನ ಏನ್ ಮಾಡಿದ್ದಾರೆ ನೋಡಿ..

By Infoflick Correspondent

Updated:Sunday, April 17, 2022, 21:14[IST]

ನಿನ್ನೆ ಬಿಟಿವಿ ನಿರೂಪಕಿ ದಿವ್ಯ ವಸಂತ ಇಡೀ ದಿನ ಏನ್ ಮಾಡಿದ್ದಾರೆ ನೋಡಿ..

ನಟಿ ಅಮೂಲ್ಯ ತಾಯಿಯಾಗುತ್ತಿದ್ದಾರೆ ಎಂಬ ಸಂತಸದ ಸುದ್ದಿಯನ್ನು ಡಿಫರೆಂಟ್ ಆಗಿ ರಿವೀಲ್ ಮಾಡಿದ ಬಿಟಿವಿ ನಿರೂಪಕಿ ದಿವ್ಯ ವಸಂತ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಬಿಟವಿ ನಿರೂಪಕಿ ದಿವ್ಯ ವಸಂತ ಅವರು ಬಿಟಿವಿ ಸುದ್ದಿ ವಾಹಿನಿಯಲ್ಲಿ ವಿಶೇಷವಾದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ವರ್ಷ ಅಮೂಲ್ಯ ಪ್ರೆಗ್ನೆಂಟ್ ಎಂಬ ಸುದ್ದಿಯನ್ನು ನ್ಯೂಸ್ ಮಾಧ್ಯಮಗಳು ಹೇಳಿ ಖುಷಿ ಪಟ್ಟು ವೀಕ್ಷಕರ ಬಳಿ ಹಂಚಿಕೊಂಡಿದ್ದವು. ಬಿಟಿವಿಯೂ ಕೂಡ ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಅಮೂಲ್ಯ ಅವರು ಪ್ರಗ್ನೆಂಟ್ ಎಂಬ ಸಾಲುಗಳನ್ನು ಹೇಳಿ ತುಂಬಾನೇ ಟ್ರೋಲ್ ಗೆ ಒಳಗಾದರು. ಈ ಸುದ್ದಿ ಓದಿದ್ದ ಬಿಟಿವಿ ದಿವ್ಯ ವಸಂತ ಅವರ ಮಾತಿನ ಶೈಲಿಯನ್ನು ಟ್ರೋಲರ್ಸ್ ಗಳು ತುಂಬಾ ಟ್ರೋಲ್ ಮಾಡಿದ್ದರು.  

ನಂತರ ದಿವ್ಯ ಅವರು ಕೂಡ ತಮ್ಮನ್ನು ಟ್ರೋಲ್ ಮಾಡಿದವರಿಗೆ ಅವರ ರೀತಿಯಲ್ಲಿ ಚಾಟಿ ಬೀಸಿದ್ದರು. ಇದೆಲ್ಲದರ ನಡುವೆ ತಮ್ಮ ವಿರುದ್ಧ ಮಾತಾಡಿದ ಟ್ರೋಲರ್ಸ್ ಗಳಿಗೆ ಲೈವ್ ನಲ್ಲಿ ಬನ್ನಿ ಎಂದು ಓಪನ್ ಚಾಲೆಂಜ್ ಕೂಡ ಮಾಡಿದ್ದರು. ಅಲ್ಲಿಯೂ ಮನಬಂದಂತೆ ಮಾತನಾಡಿ ಮತ್ತಷ್ಟು ಟ್ರೋಲ್ ಆಗಿದ್ದರು. ಇದಾದ ಬಳಿಕ ದಿವ್ಯ ವಸಂತ ಅವರು ಬಿಟಿವಿಯಲ್ಲಿ ನಿರೋಪಣೆ ಮಾಡಲು ಪಡೆಯುವ ಸಂಭಾವನೆ ಬಗ್ಗೆ ಚರ್ಚೆ ಶುರುವಾಗಿತ್ತು. ಬಿಟಿವಿಗೆ ಸಿನಿಮಾ ವರದಿಗಾರರಾಗಿ ಸೇರಿಕೊಂಡ ದಿವ್ಯ ಈಗ ನಿರೂಪಕಿಯಾಗಿದ್ದು, ಡಿಜಿಟಲ್ ಮೀಡಿಯಾದ ಚೀಫ್ ಕೂಡ ಆಗಿದ್ದಾರಂತೆ.  

ಇನ್ನು ಇದೀಗ ದಿವ್ಯ ವಸಂತ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದಿವ್ಯ ಅವರು ನಿನ್ನೆ ಏನೇನೆಲ್ಲಾ ಮಾಡಿದರು ಎಂಬ ಬಗ್ಗೆ ವೀಡಿಯೋ ಮಾಡಿದ್ದಾರೆ. ಈ ವೀಡಿಯೋದಲ್ಲಿ ಆಚೆ ಚಾಟ್ಸ್ ತಿಂದು, ಫ್ರೆಂಡ್ ಜೊತೆ ಗಂಟೆಗಟ್ಟಲೇ ಯಾವುದೋ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಕೊನೆಗೆ ರಾತ್ರಿ ಮನೆಗೆ ಹೋಗಿ ಅಮ್ಮನ ಕೈಯಲ್ಲಿ ತಲೆಗೆ ಎಣ್ಣೆ ಹಚ್ಚಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ. ಹೆಚ್ಚಾಗಿ ನೆಗೆಟಿವ್ ಆಗೇ ಕಮೆಂಟ್ ಮಾಡಿದ್ದು, ಈ ವೀಡಿಯೋ ಕುಡ ಟ್ರೋಲ್ ಆಗಬಹುದು.