ಕೆಜಿಎಫ್ ಟ್ರೈಲರ್ ಅಬ್ಬರಕ್ಕೆ ತಬ್ಬಿಬ್ಬಾದ ಸೆನ್ಸಾರ್ ಮಂಡಳಿ..! ಯಶ್ ಗೆ ಧನ್ಯವಾದ ತಿಳಿಸಿದ್ದೇಕೆ..?

By Infoflick Correspondent

Updated:Wednesday, March 9, 2022, 16:00[IST]

ಕೆಜಿಎಫ್ ಟ್ರೈಲರ್ ಅಬ್ಬರಕ್ಕೆ ತಬ್ಬಿಬ್ಬಾದ ಸೆನ್ಸಾರ್ ಮಂಡಳಿ..! ಯಶ್ ಗೆ ಧನ್ಯವಾದ ತಿಳಿಸಿದ್ದೇಕೆ..?

ಕೆಜಿಎಫ್ ಕೇವಲ ಸೌತ್ ಸಿನಿ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಭಾಗ ಒಂದರಲ್ಲಿ ಅದರ ಗತ್ತು ಏನು ಎಂದು  ತೋರಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಭಾಗ ಒಂದರಲ್ಲಿ ಅದ್ಭುತವಾಗಿ ಸಿನಿಮಾ ನಿರ್ದೇಶನವ ಮಾಡಿ ಯಶಸ್ವಿಯಾಗಿದ್ದರು. ಹೌದು ಕೆಜಿಎಫ್ ಭಾಗ-1 ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೆಜಿಎಫ್ ಭಾಗ-2 ( K G F 2) ಯಾವಾಗ ಬರುತ್ತದೆ ಎಂದು ಅಂದೇ ಎದುರು ನೋಡುತ್ತಿದ್ದರು. ಹಾಗೆ ಇದರ ಸಿಕ್ವೆನ್ಸ್ ತಿಳಿದುಕೊಳ್ಳಲು ಈಗಲೂ ಕೂಡ ಹೆಚ್ಚು ಕುತೂಹಲರಾಗಿದ್ದಾರೆ. ಕೊರೋನ ನಡುವೆ ಇಷ್ಟು ದಿನಗಳ ಕಾಲ ಎಲ್ಲರೂ ಕಾದಿದ್ದು, ಇದೀಗ ಸಿನಿಮಾ ಏಪ್ರಿಲ್ 14ಕ್ಕೆ ಇಡೀ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. 

ಕೆಜಿಎಫ್ ಭಾಗ-2 ಟ್ರೈಲರ್ ರಿಲೀಸ್ ಮಾಡಬೇಕಾ ಬೇಡ ಎಂಬುದಾಗಿ ಚಿತ್ರತಂಡ ಪ್ರೀತಿಯ ಅಭಿಮಾನಿಗಳ ಮುಂದೆ ಈ ಮುಂಚೆ ಪ್ರಶ್ನೆ ಮಾಡಿತ್ತು. ಆಗ ಟ್ರೈಲರ್ ನೋಡಬೇಕು ಎಂಬುದಾಗಿ ಹೇಳಿದ ಅಭಿಮಾನಿಗಳ ಆಸೆಯಂತೆ ಇದೆ ಮಾರ್ಚ್ 27 ನೇ ತಾರೀಕು ಟ್ರೈಲರ್ ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶ್ವದಾದ್ಯಂತ ಕೆಜಿಎಫ್ ಭಾಗ-2 ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಸೆನ್ಸಾರ್ ಮಂಡಳಿಗೂ ಚಿತ್ರ ತಂಡ ಕಾಲಿಟ್ಟು ಅದರ ಪ್ರಶಂಸೆಯ ಗಿಟ್ಟಿಸಿಕೊಂಡಿದೆ. ಟೈಲರ್ ಅನ್ನು ಒಪ್ಪಿಸಿ ಅಭಿಪ್ರಾಯಗಳನ್ನು ಪಡೆದಿದ್ದು ಹಾಗೆ ಯಾವುದೇ ದೃಶ್ಯಗಳನ್ನು ತೆಗೆದು ಹಾಕದ ಹಾಗೆ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದೆ ಎನ್ನಲಾಗುತ್ತಿದೆ.  

ಟ್ರೈಲರ್ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್-2 ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. ನಿಜಕ್ಕೂ ಈ ಟ್ರೈಲರ್ ನಾವು ಅಂದುಕೊಂಡದ್ದಕ್ಕಿಂತ ಅದ್ಭುತವಾಗಿದೆ. ನಟ ಯಶ್ ಗೆ (Yash) ಧನ್ಯವಾದಗಳು, ಮಾತುಗಳೇ ಬರುತ್ತಿಲ್ಲ, ಮಾನ್ಸ್ಟರ್ ಹಿಟ್ ಚಿತ್ರ ಇಷ್ಟರಲ್ಲೇ ಬರಲಿದೆ. ಸದ್ಯದಲ್ಲೇ ಕೆಜಿಎಫ್2 ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿ ಎಂಬುದಾಗಿ ಯಾವ ಸೀನ್ ಕಟ್ ಮಾಡದೆ ಈ ರೀತಿ ಬರೆದು ಕೊಂಡಿದ್ದಾರಂತೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹೌದು ಕೆಜಿಎಫ್ ಭಾಗ-2 ಸಿನಿಮಾಗಾಗಿ ನೀವು ಕೂಡ ಕಾಯುತ್ತಿದ್ದರೆ, ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ, ಮತ್ತು ಇಡೀ ಕೆಜಿಎಫ್ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ....