ಬ್ರೇಕಿಂಗ್ ನ್ಯೂಸ್; ಇತ್ತೀಚಿಗಷ್ಟೇ ಮದುವೆಯಾಗಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿ ಆತ್ಮಹತ್ಯೆಗೆ ಯತ್ನ..!

Updated: Thursday, April 8, 2021, 13:58 [IST]

ಹೌದು ಸ್ನೇಹಿತರೆ ಈಗ ಮಾಧ್ಯಮಗಳ ಮೂಲಕವೇ ಕೇಳಿಬಂದಿರುವ ಪ್ರಕಾರ ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮತ್ತು ಇತ್ತೀಚೆಗೆ ವಿವಾಹವಾಗಿದ್ದ ಚೈತ್ರಾ ಕೋಟೂರ್ ಅವರು ಈಗಾಗಲೇ ಎಲ್ಲರಿಗೂ ಗೊತ್ತಿದ್ದಾರೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳ ಮೂಲಕ ಆಗಾಗ ಸಕ್ಕತ್ ಸುದ್ದಿ ಮಾಡುತ್ತಾ ದೊಡ್ಡ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಹೌದು ಚೈತ್ರಾ ಕೊಟ್ಟೂರು ಬಿಗ್ ಬಾಸ್ ಏಳರಲ್ಲಿ ಭಾಗವಹಿಸಿದ್ದು, ಬಳಿಕ ಸಿನಿಮಾರಂಗದಲ್ಲಿ ಸಣ್ಣಪುಟ್ಟ ಅಭಿನಯ ಮಾಡಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 

ಇತ್ತೀಚಿಗಷ್ಟೇ ತುಮಕೂರಿನಲ್ಲಿ ಮದುವೆ ಸಹ ಆಗಿದ್ದರು ಬಳಿಕ ಚೈತ್ರಾ ಕೋಟೂರ್ ಅವರನ್ನು ವರಿಸಿದ ವರ, ಈ ಮದುವೆ ತನಗೆ ಇಷ್ಟವಿರಲಿಲ್ಲ, ಇದೊಂದು ಬಲವಂತದ ಮದುವೆ ಎಂದು ಹೇಳಿಕೆ ನೀಡಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನಿಜ. ನಂತರ ಪೊಲೀಸ್ ಸ್ಟೇಷನ್ ನಲ್ಲಿ ಇವರಿಬ್ಬರ ತಂದೆ ತಾಯಿಗಳನ್ನು ಕರೆಸಿ, ಈ ಬಗ್ಗೆ ತನಿಖೆ ಮಾಡಿ ಒಂದಷ್ಟು ದಿನ ಬಿಟ್ಟು ಬನ್ನಿ ಎಂದು ಹೇಳಿದ್ದು ನಿಜ.

ಆದ್ರೆ ಮತ್ತೆ ಈ ಮದುವೆ ಸುದ್ದಿ ಎಲ್ಲಿಯೂ ಮತ್ತೆ ಕೇಳಿ ಬರಲಿಲ್ಲ, ಆದರೀಗ ಚೈತ್ರಾ ಕೋಟೂರ್ ಅವರು ಇಂದು ಬೆಳಿಗ್ಗೆ ಐದು ಗಂಟೆಗೆ ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿ ಕೇಳಿಬರುತ್ತಿದೆ. ಈ ರೀತಿ ಯಾಕೆ ಚೈತ್ರಾ ಕೋಟೂರ್ ಅವರು ಮಡಿಕೊಳ್ಳಲು ಹೋದರು, ಇದಕ್ಕೆ ಕಾರಣ ಏನು ಎಂಬುದು ಯಾವ ಮಾಹಿತಿ ತಿಳಿದುಬಂದಿಲ್ಲ...