ಸಂಚಾರಿ ವಿಜಯ್ ಈ ಒಂದು ಕೆಲಸ ಮಾಡಿದ್ದರೆ ಬದುಕುತ್ತಿದ್ದರು ಎಂದ ಚಕ್ರವರ್ತಿ ಚಂದ್ರಚೂಡ
Updated:Tuesday, April 26, 2022, 12:11[IST]

ಈಗ ಸಂಚಾರಿ ವಿಜಯ್ ಅಭಿನಯದ ಸಿನಿಮಾ 'ಮೇಲೊಬ್ಬ ಮಾಯಾವಿ' ಬಿಡುಗಡೆಗೆ ಸಜ್ಜಾಗಿದೆ. ಇದೇ ಏಪ್ರಿಲ್ 29ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್, ಚಕ್ರವರ್ತಿ ಚಂದ್ರಚೂಡ್ ಜೊತೆಗೆ ಅನನ್ಯಾ ಶೆಟ್ಟಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿತ್ತು, ಸುದೀರ್ಘ ಚಿಕಿತ್ಸೆ ನೀಡಿದರೂ ಪ್ರತಿಕ್ರಿಯಿಸದ ಕಾರಣ ಅಂಗಾಂಗಗಳನ್ನು ದಾನ ಮಾಡಿ ನಿಧನರಾದರು. ಸಂಚಾರಿ ವಿಜಯ್ ಆತ್ಮೀಯರಾಗಿದ್ದ ಚಕ್ರವರ್ತಿ ಚಂದ್ರಚೂಡ ಗೆಳೆಯನ ಸಾವಿನ ರಹಸ್ಯವನ್ನು ಹೊರಹಾಕಿದ್ದಾರೆ.
ಅಂದು ಕೊವಿಡ್ ಕಾರಣದಿಂದ ಅರ್ಧಕ್ಕೆ ನಿಂತಿದಕನ್ನಡ ಬಿಗ್ ಬಾಸ್ ಸೀಸನ್ 8. ಹಾಗಾಗಿ ಚಕ್ರವರ್ತಿ ಚಂದ್ರಚೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು. ಸಂಚಾರಿ ವಿಜಯ್ ಅವರಿಗೆ ಅಪಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಿಸಿದಾಗ ಸೇರಿದಂತೆ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡುವ ಕೊನೆಯ ಕ್ಷಣದವರೆಗೂ ಚಕ್ರವರ್ತಿ ಚಂದ್ರಚೂಡ್ ಜೊತೆಯಲ್ಲೇ ಇದ್ದರು. ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲಿ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಗಿಳಿಯನ್ನು ದತ್ತು ತೆಗೆದುಕೊಂಡಿದ್ದಾರೆ ಚಕ್ರವರ್ತಿ ಚಂದ್ರಚೂಡ್.
ಸಂಚಾರಿ ವಿಜಯ್ ಸಾಯುವುದಕ್ಕೂ ಮುನ್ನ ಬಿಗ್ಬಾಸ್ಗೆ ಆಫರ್ ಬಂದಿತ್ತು. ಬಿಗ್ ಬಾಸ್ ಎಂಟನೇ ಸೀಸನ್ಗೆ ವಿಜಯ್ ಬರಬೇಕಿತ್ತು. ನನಗೆ ಬಿಗ್ ಬಾಸ್ಗೆ ಕರೆಯುತ್ತಿದ್ದಾರೆ ಏನ್ ಮಾಡಲಿ ಎಂದು ಕೇಳಿದ್ದರು. ಹೋಗ್ರಿ ಚೆನ್ನಾಗಿರುತ್ತೆ ಎಂದು ಹೇಳಿದ್ದೆ.
ಅವರು ತುಂಬಾನೇ ಭಯಪಡುವ ವ್ಯಕ್ತಿ. ಏನಾಗುತ್ತೋ ಏನೋ ನಾನು ಹೋಗಲ್ಲ. ನೀವು ಹೋಗಿ ಬಂದ್ಬಿಡಿ. ಒಂದ್ಸಲ ನೀವು ಬಂದು ಹೇಳಿ ಏನಿರುತ್ತೆ ಅಂತ. ನನಗೆ ಅನಿಸಿದರೆ ನಾನು ಹೋಗುತ್ತೇನೆ. ಎಂದಿದ್ದರು.
ಒಂದು ವೇಳೆ ಸಂಚಾರಿ ವಿಜಯ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರೆ, ಇಂದು ಬದುಕಿರುತ್ತಿದ್ದರು. ಅವರು ಬಿಗ್ ಬಾಸ್ಗೆ ಬಂದುಬಿಟ್ಟಿದ್ದರೆ, ಬದುಕುಳಿಯುತ್ತಿದ್ದರು. ಇಲ್ಲಾ ನಾನು ಬಿಗ್ ಬಾಸ್ ಒಳಗೆ ಹೋಗದೆ ಇದ್ದಿದ್ದರೆ, ಅವರು ಬದುಕುಳಿಯುತ್ತಿದ್ದರು. ಯಾಕಂದ್ರೆ, ಎಲ್ಲಾ ಸಂದರ್ಭದಲ್ಲೂ ಅವರು ನನ್ನ ಜೊತೆಯಲ್ಲಿ ಇರೋರು. ವಿಜಯ ಯಾವುದೇ ಸಂದರ್ಭದಲ್ಲೂ ನಾನು ಜೊತೆಗಿರುತ್ತಿದ್ದೆ. ' ಎನ್ನುತ್ತಾರೆ ಚಕ್ರವರ್ತಿ ಚಂದ್ರಚೂಡ.
ಅಪಘಾತವಾದ ತಕ್ಷಣವೇ ಬನ್ನೇರುಘಟ್ಟದ ರಸ್ತೆಯಲ್ಲಿ ಅಫೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ಬೆಡ್ ಇರಲಿಲ್ಲ ಹಾಗೂ, ಆಪರೇಷನ್ ನಡೆಯುತ್ತಿದ್ದ ಕಾರಣ ವಿಜಯ್ರನ್ನು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಹೀಗಿರುಉವಾಗ ನಟ ಸುದೀಪ್ ಸಹಾಯದಿಂದ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು. ಅವರಿರೆ ಧನ್ಯವಾದ. ಎಂದಿದ್ದಾರೆ