Puneeth Rajkumar : ಈ ಶಪಥ ಮಾಡಿ ಅಪ್ಪುವಿನ ಮನೆ ಬಿಟ್ಟು ಹೋದ ಬಾಡಿಗಾರ್ಡ್​ ಚಲಪತಿ! ಏಕೆ ಗೊತ್ತೆ ?

By Infoflick Correspondent

Updated:Monday, June 20, 2022, 08:01[IST]

Puneeth Rajkumar : ಈ ಶಪಥ ಮಾಡಿ ಅಪ್ಪುವಿನ ಮನೆ ಬಿಟ್ಟು ಹೋದ ಬಾಡಿಗಾರ್ಡ್​ ಚಲಪತಿ! ಏಕೆ ಗೊತ್ತೆ ?

ಅಪ್ಪುಎಂಬ ಅಭಿಮಾನಿಗಳ  ದೇವರನ್ನು ಹನುಮಂತನ ರೀತಿ ಕಾಯುತ್ತಿದ್ದ ವ್ಯಕ್ತಿ ಈ ಚಲಪತಿ. ಅಪ್ಪುಗೆ ಬಹಳಷ್ಟು ವರ್ಷಗಳ ಕಾಲ ಗನ್ ಮ್ಯಾನ್ (Gun man) ಆಗಿ ಕಾಯಕ ಮಾಡಿದ್ದ ಚಲಪತಿ ಈಗ ರಾಜಕುಮಾರನಿಲ್ಲದ ಅರಮನೆಯನ್ನು ಭಾರದ ಮನಸ್ಸಿನಿಂದಲೇ ಬಿಟ್ಟು ಹೋಗಿದ್ದಾರೆ. 

ಅದೆಷ್ಟೇ ಜನಸಂದಣಿ ಇರಲಿ, ಅಭಿಮಾನಿಗಳು ಮುತ್ತಿಕ್ಕಿಕೊಳ್ಳಲು ಪುನೀತ್ ರಾಜ್ ಕುಮಾರ್ ಅವರನ್ನು ಸೇಫಾಗಿ ಕರೆದುಕೊಂಡು ಹೋಗುತ್ತಿದ್ದವರು ಅವರ ಗನ್ ಮ್ಯಾನ್ ಚಲಪತಿ. ಮಾಜಿ ಸೈನಿಕರು ಆಗಿರುವ ಚಲಪತಿ ಹಲವು ವರ್ಷಗಳಿಂದ ಅಪ್ಪು ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.     

ಅಪ್ಪು (Puneeth Rajkumar) ಅಗಲಿಕೆ ನಂತರ ಸುಮಾರು 6 ತಿಂಗಳು ಬಹಳ ನೋವಿನಿಂದಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಅಂಗರಕ್ಷಕನಾಗಿ ಕೆಲಸ ಮಾಡ್ತಿದ್ದ ಚಲಪತಿ (Chalapthi) ಈಗ ಕೆಲಸ ಬಿಟ್ಟು ಊರು ಸೇರಿದ್ದಾರೆ. ಅಪ್ಪು ಸಾರ್ ನಿಧನದ ನಂತರ ಐದಾರು ತಿಂಗಳು ಅಶ್ವಿನಿ ಮೇಡಂ ಜೊತೆ ಕೆಲಸ ಮಾಡಿದೆ. ಇದೀಗ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಊರಲ್ಲೇ ಇದ್ದೇನೆ. ಅಪ್ಪ ಸರ್ ನೆನಪಿನಲ್ಲೇ ದಿನಗಳನ್ನು ಸಾಗಿಸುತ್ತಿದ್ದೇನೆ. ಅಲ್ಲದೇ, ಅಪ್ಪು ಸರ್ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನೂ ಇರಲಿಲ್ಲ. ಸುಮ್ಮನೆ ಕೂರುವುದು ನನಗೆ ಕಷ್ಟ. ಹಾಗಾಗಿ ವಾಪಸ್ಸು ಊರಿಗೆ ಬಂದಿದ್ದೇನೆ ಯಾವತ್ತೂ ಅಪ್ಪು ಸರ್ ನನ್ನನ್ನು ಗನ್ ಮ್ಯಾನ್ ಆಗಿ ನೋಡಲಿಲ್ಲ. ಸಹೋದರನಂತೆ ಕಂಡರು ಎಂದು ನೆನಪಿಸಿಕೊಳ್ಳುತ್ತಾರೆ. 

ಇನ್ಮುಂದೆ ಚಿತ್ರರಂಗದಲ್ಲಿ ಕಾಯಕ ಮಾಡೋದಿಲ್ಲ ಅಂತ ಶಪಥ ಮಾಡಿದ್ದಾರೆ. ಅಪ್ಪು ಸರ್ ನಿಧನದ ನಂತರ ನನಗೆ ಅಲ್ಲಿ ಕೆಲಸ ಇರ್ಲಿಲ್ಲ. ಪ್ರತಿದಿನ ಕೂತು ಎದ್ದು ಬರಬೇಕಿತ್ತು. ಅದಕ್ಕೆ ನಾನು ಕೆಲಸ ಬಿಟ್ಟೆ. ಆದ್ರೆ ನಾನು ಇನ್ಮೇಲೆ ಯಾವುದೇ ಸಿನಿಮಾ ಹೀರೋಗಳ ಜೊತೆ ಕೆಲಸ ಮಾಡಲ್ಲ. ಅಪ್ಪು ಸರ್ ಅವರ ನೆನಪು ನನಗೆ ಜೀವಂತವಾಗಿ ಉಳಿಯಬೇಕು. ಬೇರೆ ನಟರ ಜೊತೆ ಕೆಲಸ ಮಾಡಿದ್ರೆ ಅಪ್ಪು ಸರ್ ನೆನಪು ಮರೆತು ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕೆ ನಾನು ಇನ್ಮುಂದೆ ಹೀರೋಗಳಿಗೆ ಗನ್ ಮ್ಯಾನ್ ಅಗಿ ಕೆಲಸ ಮಾಡಲ್ಲ ಎಂದಿದ್ದಾರೆ.