ಕುಟುಂಬಕ್ಕೆ ಹೊಸ ಸದಸ್ಯನ ಆಗಮನಕ್ಕೆ ಸ್ವಾಗತಿಸಲು ರೆಡಿ ಎಂದ ಚಂದು ಗೌಡ

By Infoflick Correspondent

Updated:Sunday, May 1, 2022, 22:02[IST]

ಕುಟುಂಬಕ್ಕೆ ಹೊಸ ಸದಸ್ಯನ ಆಗಮನಕ್ಕೆ ಸ್ವಾಗತಿಸಲು ರೆಡಿ ಎಂದ ಚಂದು ಗೌಡ

ಕನ್ನಡ ಕಿರುತೆರೆಯ ಜನಪ್ರೀಯ ಧಾರಾವಹಿ ಲಕ್ಷ್ಮೀ ಬಾರಮ್ಮ , 'ಗೃಹಲಕ್ಷ್ಮೀ' ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ನಟ ಚಂದು ಬಿ ಗೌಡ ಮನೆಗೆ ಹೊಸ ಅತಿಥಿಯ ಆಗಮನವಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳಲ್ಲಿ ಮಿಂಚುತ್ತಿರುವ ಚಂದು ಗೌಡ ಕೆಲ ದಿನಗಳ್ಲಲಿಯೇ ತಂದೆಯಾಗಲಿದ್ದಾರೆ. 

2020ರಲ್ಲಿ ಅಕ್ಟೋಬರ್ 29ರಂದು ಚಂದು ಬಿ ಗೌಡ ಹಾಗೂ ಶಾಲಿನಿ ನಾರಾಯಣ್ ಸರಳವಾಗಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು, ಮಾಡೆಲಿಂಗ್ ಮಾಡುತ್ತಿದ್ದ ಶಾಲಿನಿ ನಾರಾಯಣ್ ಅವರ ಪರಿಚಯದ ನಂತರ ಸ್ನೇಹವಾಘಿ ನಂತರ ಪ್ರತಿಸಿ ಇವರಿಬ್ಬರೂ ವಿವಾಹವಾದರು. ಸುಮಾರು 4 ವರ್ಷಗಳ ಕಾಲ ಪ್ರತಿಯಲ್ಲಿದ್ದ ಇವರು ಕೊನೆಯ 2020ರಲ್ಲಿ ಮನೆಯವರ ಒಪ್ಪಿಗೆ ಮೇರೆಗೆ ವಿವಾಹವಾದರು.  

ಯಾವುದೇ ಗಾಡ್‌ಫಾದರ್ ನೆರವಿಲ್ಲದೇ ಸಿನೆಮಾ ಫೀಲ್ಡ್‌ಗೆ ಬಂದ ಚಂದು ಗೌಡ ಸದ್ಯ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಚಂದು ಗೌಡ ಅವರ ಅಪ್ಪ ಉದ್ಯಮಿ, ತಾಯಿ ಹೌಸ್‌ವೈಫ್‌. ಚಂದು ಕಾಲೇಜು ದಿನಗಳಲ್ಲಿದ್ದಾಗ ಫ್ರೆಂಡ್ಸ್ ನೀನು ತುಂಬಾ ಹ್ಯಾಂಡ್ಸ‌ಮ್ ಆಗಿದ್ದೀಯಾ. ಆ್ಯಕ್ಟಿಂಗ್ ಸೂಟ್ ಆಗುತ್ತೆ ಎಂದು ಚಂದು ಅವರನ್ನು ಹುರಿದುಂಬಿಸುತ್ತಿದ್ದರು. 

ಸದ್ಯ ಚಿತ್ರರಂಗ ಸೇರಿದಂತೆ ಕಿರುತೆರೆಯ ನಟ, ನಟಿಯರು ತಂದೆ- ತಾಯಿಯಾಗುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ತಂದಿದೆ. ಈಗ ನಟ ಚಂದು ಗೌಡ ಹಾಗು ಪತ್ನಿ ಶಾಲಿನಿ ನಾರಾಯಣ್ ತಂದೆತಾಯಿಯಾಗುತ್ತಿದ್ದು ಸಿನಿತಾರೆಯರು ಹಾಗು ಅಭಿಮಾನಿಗಳು ಶುಭ ಕೊರುತ್ತಿದ್ದಾರೆ. ಪಾಲಕರಾಗುತ್ತಿರುವ ಸಿಹಿ ವಿಷಯ ಚಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ 'ಕುಟುಂಬಕ್ಕೆ ಹೊಸಬರನ್ನು ಸ್ವಾಗತ ಮಾಡಲು ಎಲ್ಲ ರೆಡಿಯಾಗಿದ್ದೆವೆ' ಎಂದು ಚಂದು ಗೌಡ ಸಂಸತದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.