ನಿಜಕ್ಕೂ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದಿದ್ದೇಕೆ ಗೊತ್ತಾ..? ಚಂದನ್ ಫಸ್ಟ್ ರಿಯಾಕ್ಷನ್ ನೋಡಿ

By Infoflick Correspondent

Updated:Monday, August 1, 2022, 11:15[IST]

ನಿಜಕ್ಕೂ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದಿದ್ದೇಕೆ ಗೊತ್ತಾ..? ಚಂದನ್ ಫಸ್ಟ್ ರಿಯಾಕ್ಷನ್ ನೋಡಿ

ಇದೀಗ ಸಾಕಷ್ಟು ವಿಚಾರಗಳು ಸಿನಿಮಾ ಸೆಲೆಬ್ರೆಟಿಗಳ ವಿಚಾರಗಳು ಹೊರಬರುತ್ತಲೆ ಇವೆ. ಇಂದು ಬೆಳಿಗ್ಗೆ ಎದ್ದ ತಕ್ಷಣ ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ನಟ ಕಲರ್ಸ್ ಕನ್ನಡದಲ್ಲಿ ಸಾಕಷ್ಟು ವರ್ಷಗಳ ಕಾಲ ಧಾರವಾಹಿ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಅವರ ವಿಚಾರವಾಗಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅವರ ಕಪಾಳಕ್ಕೆ ಹೊಡೆದ ವಿಡೀಯೋ ಬಾರಿ ವೈರಲ್ ಆಗುತ್ತಿದೆ. ನಟ ಚಂದನ್ ಕುಮಾರ್ ಅವರು ಸಾಕಷ್ಟು ವರ್ಷಗಳಿಂದ ಕನ್ನಡಿಗರ ಮೆಚ್ಚಿನ ನಟ ಆಗಿದ್ದರು. ಹಾಗೆ ಇದೀಗ ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೂ ಬ್ಯುಸಿ ಇದ್ದರು. ಹಾಗೇನೇ ಕನ್ನಡದ ಬಿಗ್ ಬಾಸ್ ಮನೆಯಲ್ಲೂ ಕೂಡ ಅವರದೇ ಆದ ವಿಶಿಷ್ಟ ಆಟವನ್ನು ಆಡುವ ಮೂಲಕ ನೆಚ್ಚಿನ ಕಲಾವಿದ ಆಗಿ ಹೊರಹೊಮ್ಮಿದವರು. 

ಇತ್ತೀಚೆಗೆ ಲಕ್ಷ್ಮೀ ಬಾರಮ್ಮ ಸಿರಿಯಲ್ ನ ನಟಿ ಕವಿತಾ ಅವರನ್ನು ವಿವಾಹವಾಗಿದ್ದ ಚಂದನ್ ಅವರದೇ ಸ್ವಂತ ಒಂದು ಹೋಟೆಲ್ ಅನ್ನು ಕೂಡ ಹೊಂದಿದ್ದರು. ನಟ ಚಂದನ್ ಅತ್ತ ತೆಲುಗಿನ ಸಾವಿತ್ರಮ್ಮಗಾರಿ ಅಬ್ಬಾಯಿ ಎನ್ನುವ ತೆಲುಗು ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಅದೇ ಸೀರಿಯಲ್  ತಂಡದ ಒಬ್ಬ ಸದಸ್ಯ ಇದೀಗ ಚಂದನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಅದರ ಬಗ್ಗೆ ಫಸ್ಟ್ ರಿಯಾಕ್ಷನ್ ನೀಡಿದ ಚಂದನ್ ನಾನು ನನ್ನ ತಾಯಿಯ ಟೆನ್ಶನ್ ನಲ್ಲಿ ಇದ್ದೆ. ಶೂಟಿಂಗ್ ಗೆ ಬರ ಹೇಳಿದ್ದರು, ನಿದ್ದೆ ಬೇರೆ ಇರಲಿಲ್ಲ. ಐದು ನಿಮಿಷ ನಿದ್ದೆ ಮಾಡುತ್ತೇನೆ 3ಎಂದು ಮಲಗಿದ್ದೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಇದ್ದ ಟೆನ್ಷನ್ ಬೇರೆ ಇತ್ತು. ಆಗ ಅಸಿಸ್ಟೆಂಟ್ ಡೈರೆಕ್ಟರ್ ರಂಜಿತ್ ಎಂಬಾತ ಏಕವಚನದಲ್ಲಿ ಅವನನ್ನು ಎಬ್ಬಿಸಿ, 30 ನಿಮಿಷ ಆದರೂ ಹಾಗೆ ಮಲಗಿದ್ದಾನೆ  ಎಂದು ಏಕವಚನದಲ್ಲಿ ಮಾತನಾಡಿದ.

ನನಗೂ ಸಹ ಕೋಪ ಬಂತು, ಬರುತ್ತೇನೆ ಹೋಗೋ ಎಂದು ಸ್ವಲ್ಪ ಹಿಂದಕ್ಕೆ ತಳ್ಳಿದೆ ಅಷ್ಟೇ. ಆ ಸೀರಿಯಲ್ ಡೈರೆಕ್ಟರ್ ಮುಂದೆ ಈತ ಏನೇನೋ ಹೇಳಿಕೊಂಡು ಕಣ್ಣೀರು ಹಾಕಿ ಆ ರೀತಿ ಅವಂತಾರ ಮಾಡಿದ. ನಾವೆಲ್ಲ ಚರ್ಚೆ ಮಾಡುತ್ತಿದ್ದ ವೇಳೆ ಅವನು ನನ್ನ ಮೇಲೆ ಕೈ ಮಾಡಿದ, ಕ್ಷಮೆ ಕೇಳಲು ಹೇಳಿದರು. ನಾನು ಹೋಗಲಿ ಎಂದು ಕೇಳಿದೆ, ಆದ್ರೂ ಹಂಗೆಲ್ಲ ಮಾಡಿದ್ದು ನನಗೆ ಬೇಜಾರಾಯಿತು ಎಂಬುದಾಗಿ ನಟ ಚಂದನ್ ಹೇಳಿಕೊಂಡಿದ್ದಾರೆ. ಅದರ ಬಗ್ಗೆ ನಾ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಅದಕ್ಕಿಂತ ಜೀವನದಲ್ಲಿ ಬೇರೆ ತುಂಬಾ ಇದೆ ಎಂದು ಹೇಳಿ ಪ್ರತಿಕ್ರಿಯೆ ನೀಡಿದ್ದಾರೆ. ಆ ವಿಡಿಯೋ ನೋಡಿದ ಕನ್ನಡಿಗರು ಕನ್ನಡದಲ್ಲಿಯೇ ನಿಮಗೆ ಹೆಚ್ಚು ಬೇಡಿಕೆ ಇತ್ತು. ಇಲ್ಲೇ ಇದ್ದು ಯಾವುದೋ ಒಂದು ಸೀರಿಯಲ್ ನಲ್ಲಿ ನಟನೆ ಮಾಡಿ ಇದ್ದದರಲ್ಲೇ ಜೀವನ ಮಾಡಬೇಕು, ಅದನ್ನು ಬಿಟ್ಟು ದುಡ್ಡಿನ ಹಿಂದೆ ಹೋದರೆ ಬೇರೆ ರಾಜ್ಯದ ಜನತೆ ನಮ್ಮಂತವರೇ ಇರುವುದಿಲ್ಲ, ನಿಮಗೆ ಯಾಕೆ ಬೇಕು ಅಲ್ಲಿ ಹೋಗಿ ನಟಿಸುವ ಆಸೆ ಎಂದು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಶೇರ್ ಮಾಡಿ ಧನ್ಯವಾದಗಳು. ( video credit : news first kannada )