ಸಿಹಿ ಸುದ್ದಿ ಕೊಟ್ಟ ಚಂದನ್ ಕುಮಾರ್: ಕವಿತಾ ಗೌಡ ಗರ್ಭಿಣಿನಾ..?? ಏನದು ಖಷಿ ವಿಚಾರ ನೋಡೋಣ ಬನ್ನಿ..

Updated: Thursday, July 22, 2021, 19:14 [IST]

    

ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಇಬ್ಬರು ಕಿರುತೆರೆಯಿಂದಲೇ ಬಣ್ಣದ ಲೋಕದ ಪಯಣ ಆರಂಭಿಸಿದರು. ಇದೇ ಪರಿಚಯ ಪ್ರೀತಿಯಾಗಿ ಅರಳಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದ್ದಾರೆ. ಧಾರಾವಾಹಿಯಲ್ಲಿ ಪತಿ-ಪತ್ನಿಯಾಗಿ ನಟಿಸಿದ್ದ ಈ ಜೋಡಿ ಇಂದು ನಿಜಜೀವನದಲ್ಲೂ ಸತಿಪತಿಯಾಗಿದ್ದಾರೆ. 

ಲಕ್ಷ್ಮೀ ಬಾರಮ್ಮ ಧಾರಾವಾಹಿ ಆರು ವರ್ಷಗಳಿಗೂ ಅಧಿಕ ಕಾಲ ಪ್ರಸಾರವಾಗಿತ್ತು. ಈ ಧಾರಾವಾಹಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿತ್ತು. ಈ ಸೀರಿಯಲ್‌ನ ಕಲಾವಿದರು ಪ್ರಸ್ತುತ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಧಾರಾವಾಹಿ ನಂತರದಲ್ಲಿ ಕಲಾವಿದರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದ್ದಲ್ಲದೇ, ಕನ್ನಡ ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ರಾಧಾ ಕಲ್ಯಾಣ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟಿದ್ದ ಚಂದನ್ ಕುಮಾರ್ ಈ ಸೀರಿಯಲ್‌ನಲ್ಲಿ ಚಂದು ಪಾತ್ರ ಮಾಡಿದ್ದರು.  

ಕೆಲವು ತಿಂಗಳುಗಳ ಕಾಲ ಅವರು ಚಂದು ಪಾತ್ರಕ್ಕೆ ಜೀವ ತುಂಬಿದ್ದರು. ಆಮೇಲೆ ಈ ಸೀರಿಯಲ್‌ನ್ನು ಅವರು ಕೈಬಿಟ್ಟರು. ಎಷ್ಟೇ ಧಾರಾವಾಹಿ ಮಾಡಿದರೂ ಕೂಡ ಚಂದನ್ ಅವರನ್ನು ಲಕ್ಷ್ಮೀ ಬಾರಮ್ಮ ಚಂದನ್ ಎಂದು ಕರೆಯೋದು ವಿಶೇಷ. ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಚಿನ್ನು ಎಂದು ಗುರುತಿಸಿಕೊಂಡಿದ್ದ ಕವಿತಾ ಗೌಡ, ಲಕ್ಷ್ಮೀ ಪಾತ್ರಕ್ಕೆ ಇನ್ನಷ್ಟು ಮೆರಗು ತುಂಬಿದರು. ಕವಿತಾ ಗೌಡ ವೈಯಕ್ತಿಕ ಕಾರಣಗಳಿಂದ ಈ ಸೀರಿಯಲ್ ತೊರೆದಿದ್ದರು. ಆಮೇಲೆ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡ ನಂತರವೂ ಕೂಡ ಜನರು ಅವರನ್ನು ಇಂದಿಗೂ ಚಿನ್ನು ಅಂತಲೇ ಕರೆಯುತ್ತಾರೆ.

ಮದುವೆಯಾದ ಮೇಲೆ ಚಂದನ್ ಕುಕ್ಕು ವಿತ್ ಕಿರಿಕ್ಕು ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆನಂತರ ಚಂದನ್ ಕೈಯಲ್ಲಿ ಯಾವ ಪ್ರಾಜೆಕ್ಟ್ ಇದೆ ಎನ್ನುವಾಗಲೇ ಇದೀಗ ಖಡಕ್ ಪೊಲೀಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮರಳಿ ಮನಸ್ಸಾಗಿ ಧಾರಾವಾಹಿಯಲ್ಲಿ ಚಂದನ್ ಎಸ್‌ಪಿ ವಿಕ್ರಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹಿಂದಿ ಘುಮ್ ಹೈ ಕಿಸಿಕೆ ಪ್ಯಾರ್ ಮೆಯಿನ್ ಸೀರಿಯಲ್‌ನ ರಿಮೇಕ್ ಎನ್ನಲಾಗಿದೆ. ಪ್ರತಿಯೊಬ್ಬ ಕಲಾವಿದನ ಕನಸಿನ ಪಾತ್ರ ಇದಾಗಿದೆ.