ಕವಿತಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಒಟ್ಟು ಆಸ್ತಿ ಎಷ್ಟು ಕೋಟಿ ಇದೆ ಗೊತ್ತಾ..?

Updated: Tuesday, April 6, 2021, 14:39 [IST]

ಕನ್ನಡ ಕಿರುತೆರೆಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ಸಾಕಷ್ಟು ಜನಪ್ರಿಯತೆ ಹೊಂದಿತ್ತು. ಈ ಸೀರಿಯಲ್ನಲ್ಲಿ ಅಭಿನಯಿಸಿದ್ದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಆಲಿಯಾಸ್ ಚಿನ್ನು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಹಾಗೆ ನಂತರ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ ಚಂದನ್  ಅವರಿಗೆ ಅಷ್ಟಾಗಿ ಅದೃಷ್ಟ ಕೈಹಿಡಿಯಲಿಲ್ಲ ಎಣಿಸುತ್ತೇ, ನಂತರ ಬೇರೆ ಇಂಡಸ್ಟ್ರಿಯ ಒಂದು ಧಾರಾವಾಹಿಯಲ್ಲಿ ಅಭಿನಯಿಸಿ ಅಲ್ಲಿಯೂ ಕೂಡ ಸೈ ಎನಿಸಿಕೊಂಡರು.ಹೌದು ಎಲ್ಲರಿಗೂ ಗೊತ್ತಿರುವ ಹಾಗೆ ಈ ಮುಂಚೆಯೇ ಕವಿತಾ ಗೌಡ ಹಾಗೂ ನಟ ಚಂದನ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. 

ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಂದ ಆಗಾಗ ಕೇಳಿ ಬರುತ್ತಿತ್ತು. ಅದರ ಪ್ರಕಾರವೇ ಈ ಕ್ಯೂಟ್ ಜೋಡಿ ಏಪ್ರಿಲ್ ಒಂದಕ್ಕೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ತಾವು ಮದುವೆ ಆಗುತ್ತಿರುವ ದಿನ ಬಹಿರಂಗವಾಗಿ  ಹೇಳಿದರು. ಇದರ ನಡುವೆ ಇದೀಗ ಚಂದನ್ ಕುಮಾರ್ ಅವರ ಆಸ್ತಿಯ ಮೌಲ್ಯ ಎಷ್ಟಿದೆ ಎಂಬುದಾಗಿ ಒಂದು ವೆಬ್ಸೈಟ್ ಮೂಲಕ ದೊರಕಿದೆ. 

ನಟ ಚಂದನ್ ಅವರ ಒಟ್ಟು ಆಸ್ತಿಯು 20 ಕೋಟಿಗೂ ಅಧಿಕ ಇದೆ ಎನ್ನಲಾಗಿದೆ, ಹೌದು ಈ ಜೋಡಿಗೆ ನೀವು ಕೂಡ ಶುಭಕೋರಿ ಮತ್ತು ಇವರ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಕಾಮೆಂಟ್ ಮಾಡಿ ತಿಳಿಸಿ, ಈ ಮಾಹಿತಿಯನ್ನು ತಪ್ಪದೇ ಎಲ್ಲರೂ ಶೇರ್ ಸಹ ಮಾಡಿ, ಧನ್ಯವಾದಗಳು....