ಕೊರೊನ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರಕ್ಕೆ ಕ್ಯಾಕೆರಿಸಿ ಉಗಿದ ನಟ ಚಂದನ್..! ಹೇಳಿದ್ದೇನು ಗೊತ್ತಾ..?

Updated: Tuesday, May 4, 2021, 10:07 [IST]

ಹೌದು ಸ್ನೇಹಿತರೆ ಕನ್ನಡದ ಕಿರುತೆರೆ ಸೀರಿಯಲ್ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಅವರು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಮೂಲಕ ಬಂದು, ಬಿಜೆಪಿ ಸರ್ಕಾರಕ್ಕೆ ಹಾಗೆಯೇ ಅಮಿತ್ ಶಾ, ಹಾಗೂ ನರೇಂದ್ರ ಮೋದಿಯವರಿಗೆ ತುಂಬಾ ಅವಾಚ್ಯ ಪದಗಳಿಂದ ಬೈದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿ ತಿಳಿದುಬಂದಿದೆ. ಈಗಾಗಲೇ ಈ ಕರೋನ ಎರಡನೇ ಅಲೆ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಂದನ್ ಕುಮಾರ್ ಕುಟುಂಬದಲ್ಲಿ ಏನೋ ಒಂದು ನಡೆದ ಕಾರಣದಿಂದಾಗಿಯೋ, ಅಥವಾ ಈ ರೀತಿ ಕೊರೊನಾಗೆ ಸಾವನ್ನಪ್ಪುತ್ತಿರುವ ಜನರ ನೋವನ್ನು ನೋಡಿಯೋ ಗೊತ್ತಿಲ್ಲ. 

ತಮ್ಮ ಆಕ್ರೋಶವನ್ನು ಚಂದನ್ ಕುಮಾರ್ ಅವರು ಬಿಜೆಪಿ ಸರ್ಕಾರಕ್ಕೆ ಮತ್ತು ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ತಮ್ಮ ಅಭಿಮಾನಿಗಳ ಬಳಿ ಇನ್ಸ್ಟಾಗ್ರಾಮ್ ನಲ್ಲಿ ಕೇವಲ ಧ್ವನಿಯ ಮೂಲಕ ಮಾತನಾಡಿದ್ದು, ಕೊರೋನಾ ದಿಂದ ಅದೆಷ್ಟು ಜನರು ಸಾವನಪ್ಪುತ್ತಿದ್ದಾರೆ, ಈ ಕೊರೋನಾ ಸೋಂಕು ಬಂದ ವ್ಯಕ್ತಿಗಳಿಗೆ ಹಾಗೇ ಕೊರೋನ ವೈರಸ್ ಪಾಸಿಟಿವ್ ಬಂದ ಜನರಿಗೆ ಸರಿಯಾದ ರೀತಿ ಚಿಕಿತ್ಸೆ ಕೊಡುತ್ತಿಲ್ಲ, ಆಕ್ಸಿಜನ್ ನೀಡುತ್ತಿಲ್ಲ, ಅವರ ಪ್ರಾಣದ ಜೊತೆ ಆಟ ಆಡುತ್ತಿದೆ ನಿಮ್ಮ ಬಿಜೆಪಿ ಸರ್ಕಾರ ಎಂದು ಹೇಳಿದರು.

ಹೌದು ಈ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಮಾತು ಆರಂಭಿಸುವ ಮೊದಲೇ, ಉಪ್ಪಿ ಅವರ ಪ್ರಜಾಕೀಯದ ಬಗ್ಗೆ ಮಾತನಾಡಿ, ನಮ್ಮ ಕರ್ನಾಟಕದಲ್ಲಿ ಪ್ರಜಾಕೀಯ ಬರಬೇಕು, ಈ ರಾಜಕೀಯದಲಿ ಯಾರು ಸರಿಯಿಲ್ಲ ಎಂದು ಹೇಳಿ, ತುಂಬಾ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ತಪ್ಪದೇ ಈ ಮಾಹಿತಿಯನ್ನು ಶೇರ್ ಸಹ ಮಾಡಿ ಧನ್ಯವಾದಗಳು...