Nivedita Gowda : ನಿವೇದಿತಾ ಗೌಡ ಮೇಲೆ ಚಂದನ್ ಶೆಟ್ಟಿ ಕೋಪ ಮಾಡಿಕೊಂಡಿದ್ದೇಕೆ..?

By Infoflick Correspondent

Updated:Friday, September 23, 2022, 15:43[IST]

Nivedita Gowda : ನಿವೇದಿತಾ ಗೌಡ ಮೇಲೆ ಚಂದನ್ ಶೆಟ್ಟಿ ಕೋಪ ಮಾಡಿಕೊಂಡಿದ್ದೇಕೆ..?

ನಿವೇದಿತಾ ಗೌಡ ಅವರು ತಮ್ಮ ಮಗುವಿನ ಕಂಠದಿಂದಲೇ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿ ಕಾಮಿಡಿ ಮಾಡುತ್ತಾ, ಡ್ಯಾನ್ಸ್, ರೀಲ್ಸ್ ಮಾಡುತ್ತಾ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಇದೀಗ ಅವರದೇ ಒಂದು ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ಇದರಲ್ಲಿ ಕೆಲ ಪ್ರಾಡಕ್ಟ್ ಗಳ ಬಗ್ಗೆ ವಿವರಿಸುತ್ತಾ, ಪತಿ ಚಂದನ್ ಶೆಟ್ಟಿಗೆ ಕ್ಯಾರೆಟ್ ಹಲ್ವಾ ಮಾಡಿಕೊಡುವುದು, ಪ್ರ್ಯಾಂಕ್ ಮಾಡುವುದು ಹೀಗೆ ಒಂದಲ್ಲ ಒಂದು ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಈ ವೀಡಿಯೋಗಳಿಗೆ ಸಾವಿರಾರು ಲೈಕ್ ಹಾಗೂ ಕಮೆಂಟ್ ಕೂಡ ಬರುತ್ತದೆ. ಇನ್ನು ನಿವೇದಿತಾ ಗೌಡ ಅವರು ತಮ್ಮ ವೀಡಿಯೋಗಳಿಗೆ ಬಂದಿರುವ ಕಮೆಂಟ್ ಗಳಿಗೆ ಸರಿಯಾದ ಉತ್ತರ ಕೊಡುತ್ತಿರುತ್ತಾರೆ. 

ಕನ್ನಡದಲ್ಲಿ ರ್ಯಾಪರ್ ಸಾಂಗ್ ಹಾಡಿ ಫೇಮಸ್ ಆಗಿರುವ ಚಂದನ್ ಶೆಟ್ಟಿ, ಈಗ ಗೀತ ರಚನೆಕಾರ, ಸಂಗೀತ ನಿರ್ದೇಶಕ, ಹಾಡುಗಾರ ಎಲ್ಲವೂ ಆಗಿದ್ದಾರೆ. ಕನ್ನಡದ ರ್ಯಾಪರ್ ಸಾಂಗ್ ಗಳ ಮೂಲಕ ಸಖತ್ ಫೇಮ್ಸ್ ಕೂಡ ಆದರು. ಈಗಾಗಲೇ ಹತ್ತು ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿದ್ದು, ಹಲವು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿದ್ದಾರೆ. ನಟನೆ, ನಿರ್ದೇಶನ, ಸಂಯೋಜನೆ ಮತ್ತು ಎಡಿಟಿಂಗ್ ಎಲ್ಲಾ ಕೆಲಸವನ್ನು ಚಂದನ್ ಅವರೇ ನಿರ್ವಹಿಸುತ್ತಾರೆ. ಇನ್ನು ನಿವೇದಿತಾ ಗೌಡ ಹಾಗೂ ಚಂದನ್ ಅವರು ಆಗಾಗ ಒಟ್ಟಿಗೆ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಕೆಲ ರೀಲ್ಸ್ ಗಳು ಕಾಮಿಡಿಯಾಗಿ ಇರುತ್ತವೆ. 

ನಿವೇದಿತಾ ಗೌಡ ಅವರನ್ನು ಚಂದನ್ ಅವರು ಹೇಗೆ ಕೇರ್ ಮಾಡುತ್ತಾರೆ. ಆದರೆ ನಿವೇದಿತಾ ಚಂದನ್ ಅವರನ್ನ ಎಷ್ಟು ನೆಗಲೆಕ್ಟ್ ಮಾಡುತ್ತಾರೆ ಎಂಬ ಬಗ್ಗೆಯೂ ವೀಡಿಯೋ ಮಾಡುತ್ತಿರುತ್ತಾರೆ. ಇವರಿಬ್ಬರಿಗೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಫಾಲೋವರ್ಸ್ ಗಳಿದ್ದಾರೆ. ಇನ್ನು ಇತ್ತೀಚೆಗೆ ನಿವೇದಿತಾ ಗೌಡ ಅವರ ಬರ್ತಡೇ ಅನ್ನು ಚಂದನ್ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ. ಆದರೆ ಚಂದನ್ ಬರ್ತಡೇ ಅನ್ನು ನಿವೇದಿತಾ ಅವರು ಸಿಂಪಲ್ ಆಗಿ ಸೆಲಬ್ರೇಟ್ ಮಾಡಿದ್ದು, ಕೇಕ್ ಮೇಲೆ ಚಂದನ್ ಅವರ ಹೆಸರನ್ನು ಕೂಡ ಬರೆಸಿಲ್ಲ. ಇದರಿಂದ ಚಂದನ್ ಅವರಿಗೆ ನಿವೇದಿತಾ ಮೇಲೆ ಕೋಪ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವೀಡಿಯೋವನ್ನು ಇಬ್ಬರೂ ತಮಾಷೆಗಾಗಿ ಮಾಡಿದ್ದಾರೆ.