Chandan Shetty : ಸುಕ್ಕ ಪಾರ್ಟಿಯಲ್ಲಿ ಮಿಂದೆದ್ದ ಚಂದನ್ ಶೆಟ್ಟಿ..! ವಾವ್ ಈ ಹೊಸ ಸ್ಟೈಲ್ ನೋಡಿ ಫಿದಾ ಆದ ಫ್ಯಾನ್ಸ್..!

By Infoflick Correspondent

Updated:Monday, July 25, 2022, 14:50[IST]

Chandan Shetty : ಸುಕ್ಕ ಪಾರ್ಟಿಯಲ್ಲಿ ಮಿಂದೆದ್ದ ಚಂದನ್ ಶೆಟ್ಟಿ..! ವಾವ್ ಈ ಹೊಸ ಸ್ಟೈಲ್ ನೋಡಿ ಫಿದಾ ಆದ ಫ್ಯಾನ್ಸ್..!

ಆಲ್ಬಮ್ ಸಾಂಗ್ ಗಳಲ್ಲಿ ಮತ್ತು ಇತ್ತೀಚಿನ ರ್ಯಾಪ್ ಲೋಕದಲ್ಲಿ ಚಂದನ್ ಶೆಟ್ಟಿಯವರು ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಆರಂಭದಿಂದಲೂ ಚಂದನ್ ಶೆಟ್ಟಿ ಅವರ ಎಲ್ಲಾ ಹಾಡುಗಳು ಹೆಚ್ಚು ವೈರಲ್ ಆಗಿದ್ದು ರ್ಯಾಪರ್ ಚಂದನ್ ಶೆಟ್ಟಿ ಎಂದೇ ಗುರುತಿಸಿಕೊಂಡಿದ್ದಾರೆ. ಅವರ ಹಾಡುಗಳ ಮೂಲಕ ಹೆಚ್ಚು ಅವರದ್ದೇ ಆದ ಮ್ಯೂಸಿಕ್ ಇರುತ್ತದೆ. ಲಿರಿಕ್ಸ್, ಸಾಂಗ್ ಕಾಂಪೋಸಿಂಗ್, ನಿರ್ದೇಶನ ಎಲ್ಲದರಲ್ಲೂ ಕೂಡ ಸೈ ಅನಿಸಿಕೊಂಡು ಹಾಡುಗಳಲ್ಲಿ ಅಭಿನಯ ಮಾಡಿ ಅವರ ಅಭಿಮಾನಿಗಳಿಗೆ ಸಂತಸ ನೀಡಿ ಉಣಬಡಿಸುತ್ತಾರೆ. ಮೂರೆ ಮೂರು ಪೆಗ್ಗಿಗೆ, ಟಕಿಲಾ, ಪಾರ್ಟಿ ಪ್ರೀಕ್, ಹಾಳಾಗೋದೇ ಇತ್ತೀಚಿನ ರಚ್ಚು ಅವರ ಲಕ ಲಕ ಲ್ಯಾಂಬೋರ್ಗಿನಿ ಹಾಡು ಕೂಡ ದೊಡ್ಡದಾಗಿಯೇ ಸದ್ದು ಮಾಡಿತ್ತು.  

ಚಂದನ್ ಶೆಟ್ಟಿ ಹಾಡುಗಳಲ್ಲಿ ಏನಾದರೂ ಒಂದು ಹೊಸತನ ಪ್ರತಿಭಾರಿ ಇದ್ದೇ ಇರುತ್ತದೆ. ಪ್ರತಿಬಾರಿಯೂ ಹಾಡುಗಳನ್ನು ಬಿಡುಗಡೆ ಮಾಡುವಾಗ ಅವರ ಹಾಡುಗಳು ಆಲ್ಬಮ್ ಹಾಡುಗಳಂತೆ ಇರುತ್ತವೆ. ಅವರ ಅಭಿಮಾನಿಗಳು ಕೂಡ ಪ್ರತಿಬಾರಿ ಅವರಿಂದ ಏನನ್ನಾದರೂ ಹೊಸತನವ ಅಪೇಕ್ಷೆ ಮಾಡುತ್ತಿದ್ದು ಅವರಿಗೆ ತಕ್ಕ ಹಾಗೆ ಇದೀಗ ಚಂದನ್ ಶೆಟ್ಟಿ ಹಾಡುಗಳನ್ನು ಬಿಡುತ್ತಿದ್ದಾರೆ. ಇದೀಗ ಸುಕ್ಕಾ ಪಾರ್ಟಿ ಎಂಬ ಹೊಸ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದು ಸಕ್ಕತ್ ಸ್ಟೆಪ್ ಹಾಕಿದ್ದಾರೆ ಚಂದನ್ ಶೆಟ್ಟಿ ಈ ಹಾಡಿನಲ್ಲಿ. ಹೌದು ಇದೊಂದು ರೆಟ್ರೋ ಸಾಂಗ್ ರೀತಿಯೇ ಮೂಡಿಬಂದಿದೆ. ಇದರಲಿ ಎಲ್ಲರೂ ಕೂಡ ಬೆಲ್ ಬಾಟಮ್ ಪ್ಯಾಂಟ್ ಧರಿಸಿ ಸಕತ್ ರೇಟ್ರೋ ಸ್ಟೈಲ್ ಅನ್ನೇ ಅನುಸರಿಸಿದ್ದಾರೆ. ಸಕ್ಕತ್ ಹೆಜ್ಜೆ ಸಹ ಹಾಕಿದ್ದಾರೆ.

ಸುಕ್ಕ ಪಾರ್ಟಿಯಲ್ಲಿ ಭಾರಿ ಮನರಂಜನೆ ನೀಡುವ ಲಿರಿಕ್ಸ್ ಗಳು ಕೂಡ ಇದ್ದು, ಚಂದನ್ ಶೆಟ್ಟಿ ಅವರೇ ಕಾಂಪೋಸ್ ಮಾಡಿ ಬರೆದು ಹಾಡಿರುವ ಮತ್ತು ನಿರ್ಮಾಣ ಮಾಡಿರುವ ಈ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ 5 ಲಕ್ಷ ಜನರಿಂದ ವೀಕ್ಷಣೆ ಪಡೆದಿದೆ. ಈ ಹಾಡು ಇದೀಗ ಎಲ್ಲೆಡೆ ವೈರಲಾಗುತ್ತಿರುವುದು ಕಂಡು ಕುಡುಕರಿಗೆ ಹೆಚ್ಚು ಸಂತಸ ತಂದಿದೆ ಎಂದು ಹೇಳಬಹುದು. ಇಲ್ಲಿದೆ ನೋಡಿ ಸುಕ್ಕಾ ಪಾರ್ಟಿ ಚಂದನ್ ಶೆಟ್ಟಿ ಅವರ ಈ ಹೊಸತನದ ಹಾಡು. ಈ ಹಾಡನ್ನು ಒಮ್ಮೆ ನೋಡಿ. ಹಾಗೆ ಈ ಹಾಡಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ ಧನ್ಯವಾದಗಳು...