Chandan Shetty : ಚಂದನ್ ಶೆಟ್ಟಿ ಅವರ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಟೀಸರ್ ಮಿಸ್ ಮಾಡದೇ ನೋಡಿ..

By Infoflick Correspondent

Updated:Friday, June 3, 2022, 16:40[IST]

Chandan Shetty :  ಚಂದನ್ ಶೆಟ್ಟಿ ಅವರ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಟೀಸರ್ ಮಿಸ್ ಮಾಡದೇ ನೋಡಿ..

ಕನ್ನಡದಲ್ಲಿ ರ್ಯಾಪರ್ ಸಾಂಗ್ ಹಾಡಿ ಫೇಮಸ್ ಆಗಿರುವ ಚಂದನ್ ಶೆಟ್ಟಿ, ಗೀತ ರಚನೆಕಾರ, ಸಂಗೀತ ನಿರ್ದೇಶಕ, ಹಾಡುಗಾರ ಎಲ್ಲವೂ ಆಗಿದ್ದಾರೆ. ಕನ್ನಡದ ರ್ಯಾಪರ್ ಸಾಂಗ್ ಗಳ ಮೂಲಕ ಸಖತ್ ಫೇಮ್ಸ್ ಕೂಡ ಆದರು. ಈಗಾಗಲೇ ಹತ್ತು ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿದ್ದು, ಹಲವು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿದ್ದಾರೆ.

ಚಂದನ್ ಶೆಟ್ಟಿ 3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್ ಸೇರಿದಂತೆ ಹಲವು ಹಾಡುಗಳಿಂದ ಹೆ.ಸರುವಾಸಿಯಾಗಿದ್ದಾರೆ. ಅಲ್ಲದೇ, ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನಟನೆ, ನಿರ್ದೇಶನ, ಸಂಯೋಜನೆ ಮತ್ತು ಎಡಿಟಿಂಗ್ ಎಲ್ಲಾ ಕೆಲಸವನ್ನು ಚಂದನ್ ಅವರೇ ನಿರ್ವಹಿಸುತ್ತಾರೆ. ಅಲ್ಲದೇ, ಪೊಗರು ಚಿತ್ರದಲ್ಲಿ ಖರಾಬು ಹಿಟ್ ಸಾಂಗ್ ನೀಡಿದ ಚಂದನ್, ಸದ್ಯ ನಿರ್ದೇಶಕ ನಂದ ಕಿಶೋರ್ ಮತ್ತು ನಟ ಧೃವ ಸರ್ಜಾ ಅವರ ಪ್ರಾಜೆಕ್ಟ್ನಲ್ಲೂ ಕೆಲಸ ಮಾಡುತ್ತಿದ್ದಾರೆ. 

ಇದೀಗ ಚಂದನ್ ಶೆಟ್ಟಿ ಹೀರೋ ಆಗಿ ಪ್ರೇಕ್ಷರ ಮುಂದೆ ಬಂದಿದ್ದಾರೆ.  ಎಲ್ರ  ಕಾಲೆಳಿಯುತ್ತೆ ಕಾಲ ಎಂಬ ಚಿತ್ರದಲ್ಲಿ ಚಂದನ್ ಶೆಟ್ಟಿ ಅವರು ನಾಯಕನಾಗಿ ನಟಿಸಿದ್ದಾರೆ. ಚಿತ್ರವನ್ನು ನಟ ಸುಜಯ್ ಶಾಸ್ತ್ರಿ ನೊರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರ 1980 ರಿಂದ 90 ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಆಧರಿಸಿದೆ. ಚಿತ್ರಕಥೆ – ಸಂಭಾಷಣೆಯನ್ನು ರಾಜ್ ಗುರು ಬರೆದಿದ್ದಾರೆ. ಇನ್ನು ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರವೀಣ್ ಮತ್ತು ಪ್ರದೀಪ್ ಸಂಗೀತ ಸಂಯೋಜಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವನ್ನು ಮಾಡಿದ್ದಾರೆ. ಇನ್ನು ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಫುಲ್ ಎಂಟರ್ ಟೈನ್ಮೆಂಟ್ ಆಗಿರೋದ್ರಲ್ಲಿ ಡೌಟೇ ಇಲ್ಲ.