ಚಂದನ್ ನಿವೇದಿತಾ ರೋಮ್ಯಾಂಟಿಕ್ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ

By Infoflick Correspondent

Updated:Wednesday, May 25, 2022, 21:52[IST]

ಚಂದನ್ ನಿವೇದಿತಾ  ರೋಮ್ಯಾಂಟಿಕ್ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ

ಚಂದನ್ ಮತ್ತು ನಿವೇದಿತಾ ಗೌಡ ಹೊಸ ಲುಕ್ ಹಾಗು ನೃತ್ಯದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಜೋಡಿಯ ರೋಮ್ಯಾಂಟಿಕ್ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಈ ಜೋಡಿ ಏನ್ ಮಾಡಿದ್ರು, ಸುದ್ದಿ ಎನ್ನುವಷ್ಟರ ಮಟ್ಟಿಗೆ ಫೇಮಸ್ ಆಗಿರುವ ಚಂದನ್, ನಿವೇದಿತಾಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವೇ ಇದೆ. 2020ರಲ್ಲಿ 26ರಂದು ಈ ಜೋಡಿ ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆಯಾದರು. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆಗೆ ಸಾಕ್ಷಿ ಆಗಿದ್ದರು. ಇದೀಗ ನಿವೇದಿತಾ ರಿಯಾಲಿಟಿ ಶೋನಲ್ಲಿ ತೊಡಗಿಕೊಂಡಿದ್ದಾರೆ. ಚಂದನ್ ಕೆಲವು ಸಿನಿಮಾಗಳಿಗೆ ಮ್ಯೂಸಿಕ್ ಮಾಡುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅದೆ ಮಧ್ಯೆ ಸಿನಿಮಾ ಒಂದರಲ್ಲಿ ಜೊಡಿಯಾಗಿ ನಟಿಸಲಿದ್ದಾರೆ. ಅದರ ಅನುಭದ ಬಗ್ಗೆ ನಿವೇದಿತಾ ಮತ್ತು ಚಂದನ್ ಮಾತನಾಡಿದ್ದಾರೆ. ಇಲ್ಲಿದೆ ನೋಡಿ    

ಕೆಲವು ತಿಂಗಳ ಹಿಂದೆ, ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು ಚಂದನ್ ಶೆಟ್ಟಿ. ಈ ಗೆಟಪ್ ಕುರಿತು ಚಂದನ್ ಹೀಗೆ ಮಾತನಾಡಿದ್ದಾರೆ, ‘ಕೆಲವು ದಿನಗಳಿಂದ ಸಾಕಷ್ಟು ಸಿನಿಮಾ ಕತೆ ಕೇಳೋದು, ನಿರ್ದೇಶಕರು ಬಂದು ಮಾತಾಡಿಸೋದು ನಡೆಯುತ್ತಲೇ ಇತ್ತು. ‘ರಾಜ ರಾಣಿ’ ರಿಯಾಲಿಟಿ ಶೋನಲ್ಲಿ ನಿರ್ದೇಶಕ ಸುಜಯ್ ಶಾಸ್ತ್ರಿ ನಾಲ್ಕು ಲೈನಲ್ಲಿ ಈ ಸಿನಿಮಾದ ಕತೆ ಹೇಳಿದರು. ಬಹಳ ಇಂಪ್ರೆಸ್ ಆದೆ. 70 80 ರ ಕಥೆ ಈ ಚಿತ್ರದ್ದು, ಈ ಸಿನಿಮಾಕ್ಕಾಗಿ ಸಂಪೂರ್ಣ ಗೆಟಪ್ ಚೇಂಜ್ ಮಾಡ್ಕೊಂಡಿದ್ದೀನಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಇದೇ ರೆಟೊರೀ ಸ್ಟೈಲ್‌ನಲ್ಲೇ ಕಾಣಿಸಿಕೊಳ್ಳುತ್ತೀನಿ. 

ಸ್ವತಃ ನನಗೇ ಇದೊಂದು ಹೊಸ ಅನುಭವ. ಕೆಲವೊಂದು ಜಾಗಗಳು ವಿಚಿತ್ರವಾಗಿರುತ್ತವೆ. ಆ ಜಾಗಗಳನ್ನು ಸೈಂಟಿಫಿಕ್ ಆಗಿ ನೋಡಿದ್ರೆ ಏನೂ ಗೊತ್ತಾಗಲ್ಲ. ಅಂಥಾ ಮಿಸ್ಟೀರಿಯಸ್ ಸಬ್ಜೆಕ್‌ಟ್ ಜೊತೆಗೆ ಫನ್ ಸಹ ಚಿತ್ರದಲ್ಲಿ ಅಡಕವಾಗಿದೆ. ಎಂದು ಸಿನಿಮಾ ಬಗ್ಗೆ ಚಂದನ್ ಹೇಳಿದ್ದಾರೆ.    

ಚಂದನ್ ಗೆಟಪ್ ನೋಡಿ  ಸಿನಿಮಾದ ಕಥೆ ಕೇಳಿ ತುಂಬಾನೇ ಖುಷಿ ಆಯ್ತು. ಡಿಫರೆಂಟ್ ಆಗಿದೆ, ಯುನಿಕ್ ಆಗಿದೆ ಅನ್ನಿಸಿತು. ಇನ್ನು ಚಂದನ್ ಮ್ಯೂಸಿಕ್, ಆಕ್ಟಿಂಗ್ ಹೀಗೆ ಮಲ್ಟಿಟ್ಯಾಲೆಂಟೆಡ್ ನೋಡಿ ಪ್ರೌಡ್ ಫೀಲ್ ಆಗುತ್ತೆ. ಚಂದನ ಹೊಸ ಲುಕ್ ನಲ್ಲಿ ಬಂದಾಗ, ಫಸ್ಟ್ ಟೂ ಡೇಸ್  ಬೇರೆಯವರ ಜೊತೆ ಇದ್ದಹಾಗೆ ಎನಿಸಿತು. ಆದ್ರೆ ಆಮೇಲೆ ಇಷ್ಟು ಡಿಫರೆಂಟ್ ಆಗಿ ಕಾಣಿಸ್ತಾ ಇದ್ದಾರೆ ಅಂದ್ರೆ, ಎಷ್ಟು ಇನ್ ವಾಲ್ ಆಗಿದ್ದಾರೆ ಕ್ಯಾರೆಕ್ಟರ್ ನಲ್ಲಿ ಅಂತ ಅನಿಸಿತು. ಈ ತರಹ ಲುಕ್ ಟೂ ಥ್ರೀ ಮಂತ್ ಇರ್ಲೇಬೇಕು ಆಗ್ತದೆ. ಈ ತರಹ ರೆಟ್ರೋ ಲುಕ್ ಕ್ಯಾಚ್ ಮಾಡೋದು ತುಂಬಾನೇ ಕಷ್ಟ ಆಗುತ್ತದೆ. ಎಂದು ಈ ಬಗ್ಗೆ ನಿವೇದಿತಾ ಗೌಡ ಮಾತನಾಡಿದ್ದಾರೆ.