ಚಂದನ್ ನಿವೇದಿತಾ ಮನೆಗೆ ಹೊಸ ಅತಿಥಿ ಆಗಮನ; ಆದರೆ ಚಂದನ್ ಶೆಟ್ಟಿ ಆಸೆ ಏನು ?

By Infoflick Correspondent

Updated:Monday, April 4, 2022, 12:17[IST]

ಚಂದನ್ ನಿವೇದಿತಾ ಮನೆಗೆ ಹೊಸ ಅತಿಥಿ ಆಗಮನ; ಆದರೆ ಚಂದನ್ ಶೆಟ್ಟಿ ಆಸೆ ಏನು ?

 

2019ರ ದಸರಾ ಇವೆಂಟ್ ಒಂದರಲ್ಲಿ ರಾಪರ್ ಚಂದನ್ ಶೆಟ್ಟಿ ನಿವೇದಿತಾ ಗೌಡರವರಿಗೆ ಪ್ರಪೋಸ್ ಮಾಡಿ ಬಹಳ ವೈರಲ್ ಆಗಿದ್ದರು. ಇದಾದ ಕೆಲವೇ ಕೆಲವು ತಿಂಗಳೊಳಗೆ ಎಂಗೇಜ್ಮೆಂಟ್ ಮಾಡಿಕೊಂಡ ಈ ಜೋಡಿ ಆದಷ್ಟೂ ಬೇಗ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದನ್ ರ್ಯಾಪ್ ಸಾಂಗ್ ಮೂಲಕ ಪ್ರಸಿದ್ಧಿ ಗಳಿಸುತ್ತಿದ್ದರೆ. ನಿವೇದಿತಾ ಯೂಟ್ಯೂಬ್ ಚಾನಲ್ ಮೂಲಕ ಜನಮನ ಗೆದ್ದಿದ್ದಾರೆ. 

ಪ್ರೀತಿಯ ಹೆಂಡತಿಯೊಂದಿಗೆ ಸೇರಿ ಅತ್ಯದ್ಭುತವಾದ ಕಾಲ ಕಳೆಯುವುದರ ಜೊತೆಗೆ ವಿಡಿಯೋಗಳನ್ನು ಮಾಡುತ್ತಾ ಅಭಿಮಾನಿಗಳನ್ನು ಸದಾ ರಂಜಿಸುತ್ತಲೇ ಇರುವ ಈ ಜೋಡಿ  ಈಗ ಈ ಕ್ಯೂಟ್ ಕಪಲ್ ಸಿಹಿ ಸುದ್ದಿ ನೀಡಲಿದ್ದಾರೆ. ಬೇಬಿಯಂತೆ ಇರುವ ನಿವೇದಿತಾಗೆ ಬೇಬಿ ಬರುತ್ತಿದೆ. 

ಹೌದು ನಿವೇದಿತ ಗೌಡ ತಾಯಿಯಾಗುತ್ತಿರುವ ಸಂತೋಷದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತಾಗಿ ವೈರಲ್ ಆಗುತ್ತಿದೆ. ಚಂದನ್ ಶೆಟ್ಟಿಯವರಿಗೆ ಹೆಣ್ಣು ಮಗು ಎಂದರೆ ಪ್ರೀತಿಯಂತೆ. ನಿವೇದಿತಾ ಅಂತಹ ಹೆಣ್ಣು ಮಗು ಬೇಕು ಎಂದು ಚಂದನ್ ಹೇಳಿದ್ದಾರಂತೆ ಹಾಗಾಗಿ ಜನ ಹೆಣ್ಣುಮಗು ಆಗಲಿ ಎಂದು ಶುಭಕೊರುತ್ತಿದ್ದಾರೆ. 

ಅಧಿಕೃತವಾಗಿ ಇಬ್ಬರೂ ಕೂಡ ಸಧ್ಯದಲ್ಲಿಯೇ ಈ ವಿಚಾರವನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಟ್ರೋಲ್ ಆಗುವ ಹೆದರಿಕೆಯಿಂದ ಮಗು ಆಗಮಿಸುತ್ತಿರುವ ವಿಚಾರವನ್ನು ಈಗಲೇ ಹೇಳಿಕೊಂಡಿಲ್ಲ ಎನ್ನಲಾಗುತ್ತಿದೆ.