ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಾರಣವೇನು ಇಲ್ಲಿದೆ ಕೊಲೆಯ ರಹಸ್ಯ ವಿವರ

By Infoflick Correspondent

Updated:Tuesday, July 5, 2022, 18:40[IST]

ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಾರಣವೇನು ಇಲ್ಲಿದೆ ಕೊಲೆಯ ರಹಸ್ಯ ವಿವರ

ಹುಬ್ಬಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಭೀಕರವಾಗಿ ಹತ್ಯೆಯಾಗಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪ್ರಸಿಡೆಂಟ್​ ಹೋಟೆಲ್​ನ ರಿಸೆಪ್ಶನ್​ನಲ್ಲಿ ಭಕ್ತರ ಸೋಗಿನಲ್ಲಿ ಕುಳಿತಿದ್ದ ಯುವಕರಿಬ್ಬರು, ಚಂದ್ರಶೇಖರ ಗುರೂಜಿ ಅವರು ಆಗಮಿಸುತ್ತಿದ್ದಂತೆ ಎದ್ದು ನಿಂತರು. ಗುರೂಜಿ ಅವರು ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಇಬ್ಬರೂ ಸಮೀಪಕ್ಕೆ ಆಗಮಿಸಿ, ಒಬ್ಬ ಗುರೂಜಿ ಅವರ ಕಾಲು ಮುಟ್ಟಿ ನಮಸ್ಕರಿಸುವಂತೆ ನಟಿಸಿದ್ದು, ನೋಡನೋಡುತ್ತಿದಂತೆ ಪಕ್ಕದಲ್ಲೇ ಇದ್ದ ಮತ್ತೊಬ್ಬ ಗುರೂಜಿಗೆ ಚಾಕುವಿನಿಂದ ಹಿರಿದಿದ್ದಾನೆ. ಏನಾಗ್ತಿದೆ ಎಂದು ಅರಿಯುವಷ್ಟರಲ್ಲಿ ಇಬ್ಬರೂ ಗುರೂಜಿಯನ್ನ ರಿಸೆಪ್ಶನ್​ನಲ್ಲೇ ಅಟ್ಟಾಡಿಸಿಕೊಂಡು 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಹಿರಿದು ಕೊಂದಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ಭಯಾನಕ ದೃಶ್ಯ ನೋಡಿದರೆ ಗುರೂಜಿಯ ಪರಿಚಿತರಿಂದಲೇ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೊಲೆ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೆವಾಡ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೊಲೆಗೆ ಏನು ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸರಳ ವಾಸ್ತು' ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿಯನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಚಂದ್ರಶೇಖರ ಗುರೂಜಿ ಅವರನ್ನು ಕೊಂದ ಕೊಲೆ ಆರೋಪಿಗಳಿಬ್ಬರ ಪೈಕಿ ಒಬ್ಬನ ಪತ್ನಿ ಈ ವನಜಾಕ್ಷಿ!

ಕೊಲೆ ಆರೋಪಿ ಮಹಾಂತೇಶ ಶಿರೂರ ಮತ್ತು ಈತನ ಪತ್ನಿ ವನಜಾಕ್ಷಿ ಇಬ್ಬರೂ ಚಂದ್ರಶೇಖರ ಗುರೂಜಿ ಅವರ 'ಸರಳ ವಾಸ್ತು' ಸಂಸ್ಥೆಯ ಮಾಜಿ ಎಂಪ್ಲಾಯಿಗಳು. ಸರಳ ವಾಸ್ತು ಸಂಸ್ಥೆಯಲ್ಲಿ 2019ರ ವರೆಗೆ ಕೆಲಸ ಮಾಡಿದ್ದಳು. ಈ ವೇಳೆ ಈಕೆಯ ಹೆಸರಿನಲ್ಲಿ ಚಂದ್ರಶೇಖರ ಗುರೂಜಿ ಅವರು ಕೆಲ ಆಸ್ತಿ ಖರೀದಿಸಿದ್ದರಂತೆ. ಗೋಕುಲ ರಸ್ತೆ ಬಳಿಯ ಅಪಾರ್ಟ್​ಮೆಂಟ್​ ಅನ್ನೂ ಈಕೆಯ ಹೆಸರಿಗೆ ಮಾಡಿದ್ದಾರೆ. ಆಸ್ತಿಯನ್ನು ವಾಪಸ್​ ಕೇಳಿದಾಗ ಗಲಾಟೆ ನಡೆದಿದೆ. ಆಸ್ತಿ ಜತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ಆಗುತ್ತಿತ್ತಂತೆ. ಇದೇ ವಿಚಾರಕ್ಕೆ ವನಜಾಕ್ಷಿ ಗಂಡ ಹಾಗೂ ಮತ್ತೊಬ್ಬ ಸೇರಿಕೊಂಡು ಗುರೂಜಿಯನ್ನ ಕೊಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಪೊಲೀಸ್​ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪದ ಮೇಲೆ ಇಬ್ಬರು ಪ್ರಮುಖ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.