Charlie 777 : ಚಾರ್ಲಿ 777 ಸಿನಿಮಾ ಪ್ರಸಾರದ ಹಕ್ಕು ಭಾರಿ ಮೊತ್ತಕ್ಕೆ ಮಾರಾಟ, ಇಲ್ಲಿದೆ ಸಂಪೂರ್ಣ ವಿವರ

By Infoflick Correspondent

Updated:Friday, April 29, 2022, 09:26[IST]

Charlie 777 : ಚಾರ್ಲಿ 777 ಸಿನಿಮಾ ಪ್ರಸಾರದ ಹಕ್ಕು ಭಾರಿ ಮೊತ್ತಕ್ಕೆ ಮಾರಾಟ, ಇಲ್ಲಿದೆ ಸಂಪೂರ್ಣ ವಿವರ

ರಾಷ್ಟ್ರ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ '777 ಚಾರ್ಲಿ' ಜೂನ್‌ 10ರಂದು ಬಿಡುಗಡೆಯಾಗಲಿದೆ. ರಕ್ಷಿತ್‌ ಶೆಟ್ಟಿನಟಿಸಿರುವ, ಕಿರಣ್‌ರಾಜ್‌ ಕೆ ನಿರ್ದೇಶನದ ಈ ಚಿತ್ರ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಾಣುತ್ತಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾಯ ಭಾಷೆಯ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ.  

ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದ ಸ್ಯಾಟ್ ಲೈಟ್ ಮತ್ತು ಒಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ. ಕಲರ್ಸ್ ಕನ್ನಡ ವಾಹಿನಿ ಮತ್ತು ವೂಟ್ ಆಪ್ ಚಾರ್ಲಿ 777 ಸಿನಿಮಾದ ಡಿಜಿಟಲ್ ಹಕ್ಕು ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ. 

ಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರು.21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ.ಸ್ಯಾಟ್ ಲೈಟ್ ಹಕ್ಕು ಕಲರ್ಸ್ ವಾಹಿನಿಗೆ 9 ಕೋಟಿ ರೂ.ಗೆ ಮತ್ತು ಒಟಿಟಿ ಹಕ್ಕು ವೂಟ್ ಆಪ್ ಗೆ 12 ಕೋಟಿ ರೂ.ಗೆ ಸೇಲ್ ಆಗಿದೆ. ರಿಲಯನ್ಸ್‌, ಹಾಟ್‌ಸ್ಟಾರ್‌ ಸಂಸ್ಥೆಗಳು ಸಿನಿಮಾ ನೋಡುತ್ತಿದ್ದು, ಇನ್ನಷ್ಟೇ ಅಂತಿಮ ಘೋಷಣೆ ಹೊರಬೀಳಬೇಕಿದೆ.    

ಚಾರ್ಲಿ ಸಿನಿಮಾ ಕೊಟ್ಟಿದ್ದು ಒಂದು ಹಿತವಾದ ಅನುಭವ. ಮನಸ್ಸನ್ನು ತೀವ್ರವಾಗಿ ಅಲ್ಲಾಡಿಸುವ ಕತೆ ಇದರದು. ಕಿರಣ್‌ ರಾಜ್‌ ಎಂಬ ಕತೆಗಾರ, ನಿರ್ದೇಶಕ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಕೊಡಬಹುದು ಎಂಬ ಭರವಸೆ ಕೊಟ್ಟಿದ್ದು ಚಾರ್ಲಿ. ರಕ್ಷಿತ್‌ ಅಭಿನಯ ಮತ್ತು ಚಾರ್ಲಿ ಎಂಬ ನಾಯಿ ತಂದ ಜೀವಂತಿಕೆ ಜೊತೆ ಮನಸ್ಸು ತಟ್ಟುವ ಸಂಭಾಷಣೆ ಈ ಸಿನಿಮಾದ ಪ್ಲಸ್‌ ಪಾಯಿಂಟ್ಸ್‌. ಜಗತ್ತಿನಾದ್ಯಂತ ಕನ್ನಡ ಸಿನಿಮಾ ಸದ್ದು ಮಾಡುತ್ತಿರುವ ಹೆಮ್ಮೆಯ ಸಂದರ್ಭದಲ್ಲಿ ಪ್ರಾಮಾಣಿಕವಾದ ಕತೆಯಿಂದ ಚಾರ್ಲಿ ನಮ್ಮ ಸಂತೋಷ ಹೆಚ್ಚು ಮಾಡಲಿಕ್ಕಿದೆ. ಎಂದು ಪರಮೇಶ್ವರ ಗುಂಡ್ಕಲ್‌, ಕಲರ್ಸ್ ಕನ್ನಡ ಬ್ಯುಸಿನೆಸ್‌ ಹೆಡ್‌ ತಿಳಿಸಿದ್ದಾರೆ.