Charlie 777 : ಚಾರ್ಲಿ777 ಈವರೆಗಿನ ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಎಷ್ಟು ?
Updated:Wednesday, June 15, 2022, 14:35[IST]

ಈ ವಾರ ಬಿಡುಗಡೆಯಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ʼ777 ಚಾರ್ಲಿʼ ಸದ್ಯ ಚಂದವನದಲ್ಲಿ ಮಾತ್ರವಲ್ಲ, ಪ್ಯಾನ್ ಇಂಡಿಯಾ ಸಿನಿರಂಗದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ʼಕೆಜಿಎಫ್ -2ʼ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಬಳಿಕ, ಕನ್ನಡದ ಇನ್ನೊಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೊದಲ ದಿನ ಅಷ್ಟು ದೊಡ್ಡ ಮಟ್ಟದ ಓಪನಿಂಗ್ ಪಡೆದು ಕೊಳ್ಳದ '777 ಚಾರ್ಲಿ' ವಿಶ್ವದಾದ್ಯಂತ 6.7 ಕೋಟಿ ರೂ. ಗಳಿಸಿ ಸುಮ್ಮನಾಗಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. ಅದರಲ್ಲೂ ಶನಿವಾರದಂದು ಹೆಚ್ಚು ಗಳಿಕೆ ಕಂಡಿದೆ. ಮೂಲಗಳ ಪ್ರಕಾರ ಭಾನುವಾರದ ಗಳಿಕೆ ಕೊಂಚ ಹೆಚ್ಚಾಗಿದೆ.
ʼ777 ಚಾರ್ಲಿʼ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ಹೀಗಿದೆ. ಮೊದಲ ದಿನ ಚಿತ್ರ ಗಳಿಸಿದ್ದು 6.2 ಕೋಟಿ ರೂ., ಎರಡನೇ ದಿನವೂ ಕಲೆಕ್ಷನ್ ನಲ್ಲಿ ಹ 7.8 ಕೋಟಿ ರೂ. ಗಳಿಸಿದ್ದು, ಮೂರನೇ ದಿನ ಅಂದರೆ ಭಾನುವಾರ 9.50 ಕೋಟಿ ರೂ.ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಒಟ್ಟು ಮೂರೇ ದಿನದಲ್ಲಿ 777 ಚಾರ್ಲಿ 23.50 ಕೋಟಿ ರೂಪಾಯಿಯನ್ನು ಗಳಿಸಿದೆ. 777 ಚಾರ್ಲಿ' ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗಿದೆ. ಆದರೆ ಹಿಂದಿ ಗಳಿಕೆ ಪಕ್ಕಾ ಲೆಕ್ಕ ಇನ್ನು ಕುಡ ಹೊರ ಬಂದಿಲ್ಲ
ಚಾರ್ಲಿ ಸಿನಿಮಾ ಯಾವುದೇ ಟಿಕೆಟ್ ರೇಟ್ ಹೆಚ್ಚಿಸದೆಯೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಮೂರು ದಿನಗಳಲ್ಲಿ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಕಳೆದ ಮೂರು ದಿನಗಳಲ್ಲಿ ಚಾರ್ಲಿ ಗಳಿಕೆ ಹೇಗಿದೆ ಎನ್ನುವುದರ ಅಂದಾಜಿನ ಲೆಕ್ಕಾಚಾರ ಇಲ್ಲಿದೆ.
ದಿನ 1: ₹ 6.2 ಕೋಟಿ ರೂ.
ದಿನ 2: ₹ 7.8 ಕೋಟಿ ರೂ.
ದಿನ 3 :₹ 9.50 ಕೋಟಿ ರೂ.
ಒಟ್ಟಾರೆ: ₹ 23.50 ಕೊಟಿ ರೂ.