Rakshit Shetty : ಒಟಿಟಿಯಲ್ಲಿ ಚಾರ್ಲಿ777 ಯಾವಾಗ ಎಲ್ಲಿ ?

By Infoflick Correspondent

Updated:Monday, July 11, 2022, 10:32[IST]

Rakshit Shetty :   ಒಟಿಟಿಯಲ್ಲಿ ಚಾರ್ಲಿ777 ಯಾವಾಗ ಎಲ್ಲಿ ?

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್‌ ಕೊಳ್ಳೆ ಹೊಡಿದಿದೆ. 

ಒಂದು ಸಿನಿಮಾ ಹಿಟ್‌ ಆಗುತ್ತಿದ್ದಂತೆ, ಆ ಚಿತ್ರದ ಡಿಜಿಟಲ್‌ ಪ್ರಿಮೀಯರ್ ಯಾವಾಗ ಎಂಬ ವಿಚಾರವೂ ಮುನ್ನೆಲೆಗೆ ಬರುವುದು ಸಹಜ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿರುವವರು ಇದೀಗ ಒಟಿಟಿಯಲ್ಲಿ ಚಿತ್ರ ವೀಕ್ಷಣೆಗೆ ಕಾಯುತ್ತಿದ್ದಾರೆ.

ನಟ ಹಾಗೂ ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿ ಸದ್ಯದಲ್ಲಿಯೇ ಓಟಿಟಿಗೆ ಸಿನಿಮಾ ಬರಲಿದೆ ಎಂದು ತಿಳಿಸಿದ್ದರು. ಇದೀಗ ಅದರ ಓಟಿಟಿ ರಿಲೀಸ್​ ಡೇಟ್​ ಅನೌನ್ಸ್ ಆಗಿದೆ.  

ಒಟಿಟಿ ಪ್ರೇಕ್ಷಕರ ಮುಂದೆ ಚಾರ್ಲಿ ಜುಲೈ 29ರಂದು ಬರುತ್ತಿದೆ. ಈಗಾಗಲೇ ಸಿನಿಮಾತಂಡ ಒಟಿಟಿ ಹಕ್ಕನ್ನು ವೂಟ್ ಸೆಲೆಕ್ಟ್2ಗೆ ಮಾರಾಟ ಮಾಡಿತ್ತು. ಅದರಂತೆ ಜುಲೈ 29ರಂದು 777 ಚಾರ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಬಹಳ ವಿಭಿನ್ನವಾಗಿದೆ. ಮನೆಯಲ್ಲಿ ತಮ್ಮ ನೆಚ್ಚಿನ ಸಾಕುಪ್ರಾಣಿಗಳ ಜೊತೆ ಕುಳಿತು ಇದೀಗ ಸಿನಿಮಾ ನೋಡಬಹುದು.