ಅಪ್ಪು ಹುಟ್ದಬ್ಬಾ ಇದೆ ಎಂದು ಜೇಮ್ಸ್ ಸಿನಿಮಾ ರಿಲೀಸ್ ಮಾಡುತ್ತಿಲ್ಲವಂತೆ..! ಕಾರಣ ಬೇರೆಯೇ ಇದೆ ಎಂದ ಚೇತನ್

By Infoflick Correspondent

Updated:Wednesday, March 9, 2022, 14:39[IST]

ಅಪ್ಪು ಹುಟ್ದಬ್ಬಾ ಇದೆ ಎಂದು ಜೇಮ್ಸ್ ಸಿನಿಮಾ ರಿಲೀಸ್ ಮಾಡುತ್ತಿಲ್ಲವಂತೆ..! ಕಾರಣ ಬೇರೆಯೇ ಇದೆ ಎಂದ ಚೇತನ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್  (Puneeth Rajkumar) ಅವರ ಕೊನೆಯ ಚಿತ್ರ ಜೇಮ್ಸ್ ಇದೇ ಮಾರ್ಚ್ 17 ನೇ ಡೇಟ್ ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಹೌದು ಪುನೀತ್ ಅವರು ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಕೊನೆಯ ಸಿನಿಮಾ ಇದಾಗಿದ್ದು, ಅವರ ಅಭಿಮಾನಿಗಳು ಕಾತುರದಿಂದ ಜೇಮ್ಸ್ ಸಿನಿಮಾ  (James Movie) ವೀಕ್ಷಣೆ ಮಾಡಲು ಕಾದು ಕುಳಿತಿದ್ದಾರೆ. ಹಾಗೆ ಅವರ ಪ್ರೀತಿಯ ನಟನ ಕೊನೆ ಸಿನಿಮಾವನ್ನು ತೆರೆಯ ಮೇಲೆ ಕಾಣಲು ಹೆಚ್ಚು ಕಾತುರರಾಗಿದ್ದಾರೆ. ಹೌದು ಅಪ್ಪು ಅವರು ಕೇವಲ ತೆರೆಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಒಬ್ಬ ಆದರ್ಶದ ವ್ಯಕ್ತಿಯಾಗಿದ್ದರು. ಹಾಗೆ ಸಾಕಷ್ಟು ಜನರಿಗೆ ಸ್ಫೂರ್ತಿ ಕೂಡ. ಸದಾ ಒಳ್ಳೆ ಕೆಲಸಗಳನ್ನು ಮಾಡುವಂತೆ ಹೆಚ್ಚು ಜನರಿಗೆ ಪ್ರೇರಣೆಯಾಗಿದ್ದಂತವರು.

ಅಪ್ಪು ಅವರ ಅಗಲಿಕೆ ಎಂದಿಗೂ ಅರಗಿಸಿಕೊಳ್ಳಲಾಗದ ನೋವು. ಇಂದಿಗೂ ಕೂಡ ಅಪ್ಪು ನಮ್ಮ ಜೊತೆಗೆ ಇದ್ದಾರೆ, ಅವರೆಲ್ಲೂ ಹೋಗಿಲ್ಲ ಎಂದು ಪ್ರತಿಕ್ಷಣ ಭಾಸವಾಗುತ್ತದೆ.. ಆದರೆ ವಿಧಿ ಅವರ ಜೀವನದಲ್ಲಿ ತುಂಬಾ ಕೆಟ್ಟದಾದ ರೀತಿ ಆಟ ಆಡಿತು ಎಂದು ಹೇಳಬಹುದು. ನಟ ಪುನೀತ್ ಅವರ ಜೇಮ್ಸ್ ಚಿತ್ರವನ್ನು ಇದೇ ಮಾರ್ಚ್ 17 ನೇ ತಾರೀಕು ಜೇಮ್ಸ್ ಚಿತ್ರತಂಡ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಕೇವಲ ಅಪ್ಪು ಅವರ ಹುಟ್ಟುಹಬ್ಬದ ವಿಶೇಷವಾಗಿ ಅಲ್ಲ ಬದಲಿಗೆ ಇನ್ನೊಂದು ಕಾರಣ ಇದೆ ಎಂದು ಮಾಧ್ಯಮದ ಜೊತೆ ಮಾತನಾಡಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಹೌದು ಚೇತನ್ ಕುಮಾರ್ (Chetan Kumar ) ಅವರು ಹೇಳಿದ ಹಾಗೆ, ಕೇವಲ ಅಪ್ಪು ಹುಟ್ಟುಹಬ್ಬ ಇರುವುದಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ, ಬದಲಿಗೆ ಅವರು ಆರಂಭದಲ್ಲಿಯೇ ಜೇಮ್ಸ್ ಸಿನಿಮಾವನ್ನು ಮಾರ್ಚ್ 17 ನೇ ತಾರೀಕು ಬಿಡುಗಡೆ ಮಾಡಲು ಆದಷ್ಟು ಪ್ರಯತ್ನಿಸಿ ಎಂದಿದ್ದರು. 

ಅಪ್ಪು ಬಾಯಲ್ಲೆ ಈ ಮಾತು ಬಂದಿತ್ತು. ಅದೇಕೋ ಗೊತ್ತಿಲ್ಲ ಹೀಗೆ ಅಪ್ಪು ಮುಂಚೆಯೇ ಹೇಳಿದ್ದರು. ಆ ಕಾರಣಕ್ಕೆ ನಾವು ಪುನೀತ್ ಅವರ ಮಾತಿನಂತೆ ಈ ಮಾರ್ಚ್ 17 ನೇ ತಾರೀಕು ಜೇಮ್ಸ್ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಚೇತನ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ..ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...