ದೊಡ್ಡಮನೆಗೆ ನಿರ್ದೇಶನ ಮಾಡೋದೆ ದೊಡ್ಡ ಪುಣ್ಯ..! ಯುವಗೆ ಚೇತನ್ ನಿರ್ದೇಶಕ ಆಗ್ತಾರಾ..? ಇಲ್ನೋಡಿ

By Infoflick Correspondent

Updated:Saturday, March 5, 2022, 15:17[IST]

ದೊಡ್ಡಮನೆಗೆ ನಿರ್ದೇಶನ ಮಾಡೋದೆ ದೊಡ್ಡ ಪುಣ್ಯ..! ಯುವಗೆ ಚೇತನ್ ನಿರ್ದೇಶಕ ಆಗ್ತಾರಾ..? ಇಲ್ನೋಡಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಕೊನೆಯ ಚಿತ್ರ ಜೇಮ್ಸ್ ಇದೇ ಮಾರ್ಚ್ 17 ನೇ ತಾರೀಕು ಅವರ ಹುಟ್ಟು ಹಬ್ಬದ ದಿವಸ ಇಡಿ ದೇಶಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಹೌದು ಅಪ್ಪು ನಟನೆಯ ಜೇಮ್ಸ್ ಚಿತ್ರ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಒಟ್ಟು ಐದು ಭಾಷೆಗಳಲ್ಲಿ ಅಪ್ಪು ಎಂಟ್ರಿ ನೀಡುತ್ತಿದ್ದಾರೆ. ಹೌದು ಇದೀಗ ಮಾದ್ಯಮದ ಜೊತೆ ಮಾತನಾಡಿದ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ (Chetan Kumar)  ಅವರು ದೊಡ್ಡಮನೆಯ ಬಗ್ಗೆ ಕೆಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಹೌದು ಮಾಧ್ಯಮದವರ ಪ್ರಶ್ನೆಗೆ ನಿರ್ದೇಶಕ ಚೇತನ್ ಕುಮಾರ್ ಈ ರೀತಿ ಉತ್ತರ ನೀಡಿದ್ದಾರೆ. ನಟ ಯುವ ರಾಜಕುಮಾರ್ (Yuva Raj Kumar) ಅವರಿಗೆ ನೀವು ನಿರ್ದೇಶನ ಮಾಡುತ್ತೀರಾ ಎಂದು ಕೇಳಿದಾಗ, ನಿರ್ದೇಶಕ ಚೇತನ್ ಕುಮಾರ್ ದೊಡ್ಡ ಮನೆಯವರಿಗೆ ನಿರ್ದೇಶನ ಮಾಡುವುದೇ ಒಂದು ದೊಡ್ಡ ಪುಣ್ಯ. 

ಅವರು ನೀಡುವ ಗೌರವ, ಅವರ ಮಾತುಗಳು, ಅವರ ಪ್ರೀತಿ ಸ್ನೇಹ ಅವರ ಜೊತೆ ಕೆಲಸ ಮಾಡುವ ಒಂದೊಂದು ಗಳಿಗೆ ನಿಜಕ್ಕೂ ಹೆಮ್ಮೆ ತರುತ್ತದೆ. ಹಾಗೆ ಅಷ್ಟು ಪ್ರೀತಿಯಿಂದ ಅವರು ಎಲ್ಲರೂಟ್ಟಿಗೆ ಇರುತ್ತಾರೆ. ಅಂತಹ ಮನೆ ನಾನು ಎಲ್ಲಿಯೂ ನೋಡಿಲ್ಲ, ನಾನು ಮುಂದೆ ಯಾರಿಗೆ ನಿರ್ದೇಶನ ಮಾಡುತ್ತೇನೆ, ಯಾವ ಚಿತ್ರ ಮಾಡುತ್ತಿದ್ದೇನೆ ಎಂಬುದಾಗಿ ಹೇಳಲಾಗುವುದಿಲ್ಲ. ಸದ್ಯಕ್ಕೆ ಅದ್ಯಾವ ಅಂಶಗಳೇ ನನ್ನ ತಲೆಯಲಿಲ್ಲ. ಸದ್ಯ ಜೇಮ್ಸ್ ಚಿತ್ರ ಅಷ್ಟೇ. ಅಪ್ಪು ನೆನಪು ಹೆಚ್ಚುತ್ತಿದೆ. ಅವರ ಹುಟ್ಟು ಹಬ್ಬದ ದಿವಸ ಅವರಿಷ್ಟದಂತೆ ಸಿನಿಮಾ ಬಿಡುಗಡೆಗಾಗಿ ತಯಾರಿ ನಡೆಸಿದ್ದೇವೆ. ಅಪ್ಪು ಅವರ ಅಭಿಮಾನಿಗಳ ಪ್ರೀತಿಗೆ ನಾನು ಕರಗು ಹೋಗಿದ್ದೇನೆ.   

ಸಿನಿಮಾ ತುಂಬಾನೇ ಅದ್ಭುತವಾಗಿ ಮೂಡಿ ಬರವಲ್ಲಿ, ನಾವು ಅದರಲ್ಲಿಯೇ ಕಾರ್ಯನಿರತವಾಗಿದ್ದೇವೆ. ಅಪ್ಪು ಅವರಿಲ್ಲ ಎಂಬುದು ತುಂಬಾ ನೋವಿನ ವಿಚಾರ. ಎಲ್ಲೋ ಒಂದು ಕಡೆ ದೂರದಲ್ಲಿ ನಿಂತು ಆಶೀರ್ವಾದ ಮಾಡುತ್ತಿದ್ದಾರೆ ಅಷ್ಟೇ. ಅಭಿಮಾನಿಗಳ ಮನಸ್ಸಿನಲ್ಲಿ ದೇವರಾಗಿದ್ದಾರೆ. ನಾನು ಆಕ್ಷನ್ ಹೇಳಿದ್ದು ಒಬ್ಬ ಹೀರೋಗೆ ಅಲ್ಲ, ದೇವರಿಗೆ ಎಂದು ಇದೀಗ ಗೊತ್ತಾಗುತ್ತಿದೆ ಎಂದು ಭಾವುಕರಾದರು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಕೂಡ ಮಾಡಿ ಧನ್ಯವಾದಗಳು..(video credit : media centre)