Chikkanna : ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಚಿಕ್ಕಣ್ಣ..! ಈ ಸ್ಕಿಟ್ ಕಣ್ಣೀರಿಗೆ ಕಾರಣವಾಯ್ತ

By Infoflick Correspondent

Updated:Monday, July 18, 2022, 23:07[IST]

Chikkanna : ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಚಿಕ್ಕಣ್ಣ..! ಈ ಸ್ಕಿಟ್ ಕಣ್ಣೀರಿಗೆ ಕಾರಣವಾಯ್ತ

ಹಾಸ್ಯ ಪಾತ್ರಗಳಲ್ಲಿ ಇದೀಗ ಹೆಚ್ಚು ಮಿಂಚುತ್ತಿರುವ ಕನ್ನಡ ಸಿನಿಮಾರಂಗದ ಯುವನಾಯಕ ಕಲಾವಿದ ಚಿಕ್ಕಣ್ಣ ಅವರು ಸದ್ಯ ಟಾಪ್ ಮೋಸ್ಟ್ ಕಾಮಿಡಿ ನಟ ಆಗಿ ಹೆಚ್ಚು ಚಿತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಿರುವ ನಟ ಚಿಕ್ಕಣ್ಣ ಅವರು ಮುಟ್ಟಿದ್ದೆಲ್ಲ ಚಿನ್ನ ಎಂಬುವಂತೆ ಎಲ್ಲಾ ಸಿನಿಮಾಗಳಲ್ಲೂ ಸಹ ಎಲ್ಲರನ್ನು ಹೆಚ್ಚು ನಗೆಯಲ್ಲಿ ತೇಲಾಡುವಂತೆ ನಟಿಸುತ್ತಾರೆಂದು ಹೇಳಬಹುದು. ಇತ್ತೀಚಿಗೆ ಇವರು ಗಿಚ್ಚಿ ಗಿಲಿ ಗಿಲಿ ಕಾಮಿಡಿ ರಿಯಾಲಿಟಿ ಶೋ ಗೆ ಬಂದಿದ್ದರು. ಇದು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿದೆ. ವೇದಿಕೆ ಮುಂಭಾಗದಲ್ಲಿ ಜಡ್ಜಸ್ ಸ್ಥಾನದಲ್ಲಿ ಕುಳಿತಿದ್ದ ಚಿಕ್ಕಣ್ಣ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಕಲಾವಿದರ ನಟನೆ ನೋಡಲು ಆಗಮಿಸಿದ್ದರಂತೆ. ಆಗ ಈ ಒಂದು ಸ್ಕಿಟ್ಟು ಗಿಚ್ಚಿ ಗಿಲಿ ಗಿಲಿ ವೇದಿಕೆಯಲ್ಲಿ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದು ನಿಜ. 

ಹೌದು ಒಬ್ಬ ತಂದೆ ಮಗನ ಬಾಂಧವ್ಯ ಹೇಗಿರುತ್ತದೆ, ತಂದೆ ಮಗನನ್ನು ಯಾವ ರೀತಿ ನೋಡುತ್ತಿರುತ್ತಾರೆ, ಹಾಗೆ ಯಾವ ರೀತಿ ಮಗನ ಜವಾಬ್ದಾರಿ ಹೊತ್ತು ಕಷ್ಟದಿಂದಲೇ ಅವನನ್ನು ಬೆಳೆಸಿ ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಬೇಕು ಎಂಬ ಮಹದಾಸೆಯಿಂದ ದುಡಿಯುತ್ತಲೇ ಇರುತ್ತಾರೆ. ಅದರಲ್ಲಿ ಕೋಪ ಕೂಡ ಹೆಚ್ಚು ಅಡಗಿದ್ದು, ಮಗನನ್ನು ಸರಿಯಾದ ದಾರಿಗೆ ತರಬೇಕು ಎಂದು ಮಗನ ಮೇಲೆ ಪ್ರೀತಿ ಇದ್ದರೂ ಕೋಪದಿಂದಲೇ ಕೆಲವರು ವರ್ತಿಸುತ್ತಿರುತ್ತಾರೆ. ಅದೇ ಸ್ಕಿಟ್ ಇದೀಗ ನಟ ಚಿಕ್ಕಣ್ಣನ ಕಣ್ಣಲ್ಲಿ ನೀರು ತರಿಸಿದ್ದು. ಒಬ್ಬ ತಂದೆ ಹೊರಗಿನಿಂದ ಎಷ್ಟೇ ಮಗನ ಮೇಲೆ ಕೋಪಗೊಂಡರೂ, ಒಳಗಿನಿಂದ ಆತನ ಮನಸ್ಸು ಮೃದುವಾಗಿ ಇರುತ್ತದೆ ಎಂದು ಈ ಒಂದು ಸಾರಾಂಶದಲ್ಲಿ ತೋರಿಸಲಾಗಿತ್ತು.  

ಆಗ ಚಿಕ್ಕಣ್ಣ ಅವರು ಅವರ ತಂದೆಯ ಒಡನಾಟವನ್ನು ಬಿಚ್ಚಿಟ್ಟಿದ್ದಾರೆ. ನನಗೆ ಏನೋ ಗೊತ್ತಿಲ್ಲ ಈ ಸ್ಕಿಟ್ ನೋಡಿದ ಮೇಲೆ ಇದು ನನ್ನ ಲೈಫಿನ ರಿಯಲ್ ಸ್ಕಿಟ್ ಎನಿಸಿತು. ನಮ್ಮ ತಂದೆಯ ಕ್ಯಾರೆಕ್ಟರ್ ಕೂಡ ಹೀಗೆ, ಕೋಪಗೊಳ್ಳುತ್ತಿದ್ದರು ಯಾವಾಗಲೂ ಹೊಡೆಯುತ್ತಿದ್ದರು, ನಾನು ಅವರನ್ನು ವಿಲ್ಲನ್ ಅಂತೆಯೇ ನೋಡಿದೆ. ಆದರೆ ನನ್ನ ಸಿನಿಮಾವನ್ನು ಅವರ ಗೆಳೆಯರೊಟ್ಟಿಗೆ ನೋಡಲು ಥೀಯೇಟರ್ ಗೆ ಬಂದು ಹೋಗುತ್ತಿದ್ದರು. ಅದು ನನಗೆ ಗೊತ್ತೇ ಆಗಲಿಲ್ಲ. ತದನಂತರ ಅವರು ಎಷ್ಟು ಪ್ರೀತಿ ಮಾಡುತ್ತಿದ್ದರು ನನ್ನ ಎಂಬುದು ತಿಳಿಯಿತು. ನನಗೆ ರಿಯಲೈಸ್ ಆದಾಗ ಅವರೇ ನನ್ನ ಜೊತೆ ಇರಲಿಲ್ಲ ಎಂದು ಚಿಕ್ಕಣ್ಣ ಕಣ್ಣೀರು ಹಾಕಿದರು. ಹಾಗೆ ಯಾರೇ ತಂದೆ ತಾಯಿಯಾಗಲಿ, ನೀವುಗಳು ಕೊಡುವ ಪ್ರೀತಿ, ನಿಮ್ಮ ಮಕ್ಕಳಿಗೆ ತಿಳಿಯಲಿ, ಆಗ ಅವರು ಕೂಡ ಖುಷಿಯಾಗಿ ನಿಮಗೆ ಪ್ರೀತಿ ಕೊಡುತ್ತಾರೆ. ಲೇಟ್ ಆದರೆ ನನಗೆ ಆದ ಹಾಗೇನೇ ಆಗುತ್ತದೆ. ಸ್ವಲ್ಪ ತಡ ಆದ್ರೂ ಆ ವೇಳೆ ಅವರೇ ಇರುವುದಿಲ್ಲ. ಉದಾಹರಣೆಗೆ ನನ್ನ ತಂದೆ ಬಗ್ಗೆ ತಿಳಿದುಕೊಂಡಾಗ ಅವರ ನನ್ನ ಜೊತೆಗೆ ಇರಲಿಲ್ಲ ಎಂದು ಕಣ್ಣೀರು ಹಾಕಿದರು ಚಿಕ್ಕಣ್ಣ. ಈ ದೃಶ್ಯ ನಿಜಕ್ಕೂ ಎಲ್ಲರ ಮನ ಹಿಂಡುವಂತೆ ಕಂಡು ಬಂದಿತು. ತಂದೆಯ ಪ್ರೀತಿ ಎಂದಿಗೂ ಅವರ ಮಕ್ಕಳ ಮೇಲೆ ಇದ್ದೇ ಇರುತ್ತದೆ. ಆದ್ರೆ ಆ ಮಕ್ಕಳುಗಳು ಅರ್ಥಮಾಡಿಕೊಳ್ಳಬೇಕು ಎಂಬುದಾಗಿ ಈ ಮೂಲಕ ಹೇಳಬಹುದು. ಧನ್ಯವಾದಗಳು ( video credit : colours kannada )...