ಇಷ್ಟರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹಾಸ್ಯ ನಟ ಚಿಕ್ಕಣ್ಣ..! ಮನೆಯವರು ನೋಡಿದ ಆ ಹುಡುಗಿ ಯಾರು ?

By Infoflick Correspondent

Updated:Saturday, July 30, 2022, 12:20[IST]

ಇಷ್ಟರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹಾಸ್ಯ ನಟ ಚಿಕ್ಕಣ್ಣ..! ಮನೆಯವರು ನೋಡಿದ ಆ ಹುಡುಗಿ ಯಾರು ?

ಸ್ಯಾಂಡಲ್ವುಡ್ ನಲ್ಲಿ ಪ್ರೇಕ್ಷಕ ಪ್ರಭುಗಳನ್ನು ಹೆಚ್ಚು ನಗಿಸುತ್ತಲೆ ಬರುತ್ತಿರುವ ಕಾಮಿಡಿ ನಟ ಚಿಕ್ಕಣ್ಣ ಅವರು ಯಶ್ ಅವರ ಕಿರಾತಕ ಸಿನಿಮಾದಿಂದ ತುಂಬಾ ಪ್ರಖ್ಯಾತಿ ಪಡೆದವರು.  ಒಂದಾನೊಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಅವರು ಕೋವಿಡ್ ಸಂದರ್ಭದಲ್ಲಿ ಕೂಡ ಅವಕಾಶಗಳು ಕಡಿಮೆ ಆದಾಗ ಅದೇ ಕೆಲಸವನ್ನು ಮಾಡಿದ್ದರಂತೆ. ಹೀಗೆ ಸಂದರ್ಶನದಲ್ಲಿ ಹೇಳಿಕೊಂಡ ಅವರ ವಿಡಿಯೋಗಳು ಈಗಲೂ ಕೂಡ ಬಾರಿ ವೈರಲ್ ಆಗುತ್ತವೆ. ಚಿಕ್ಕಣ್ಣ ಅವರು ಕಿರಾತಕ ಸಿನಿಮಾ ಮುನ್ನ ಕೆಲ ಕಾಮಿಡಿ ರಿಯಾಲಿಟಿಗಳ ಶೋಗಳಲ್ಲಿಯೂ ಭಾಗವಹಿಸಿದ್ದರು. ಸಿನಿಮಾದಲ್ಲಿಯ ನಟನೆ ಅವಕಾಶಕ್ಕಾಗಿ ಹೆಚ್ಚಾಗಿಯೇ ಕಷ್ಟಪಟ್ಟಿದ್ದಾರೆ ಚಿಕ್ಕಣ್ಣ. ಹೌದು ನಟ ಚಿಕ್ಕಣ್ಣ ಅವರ ಕುಟುಂಬವನ್ನು ಸಾಗಿಸುವುದಕ್ಕೆ ಅವರ ಹೊಟ್ಟೆ ತುಂಬಿಸುವುದಕ್ಕೆ ಒಂದಾನೊಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದವರು.    

ಅದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ವ್ಯಕ್ತಿ ಎಂದು ಹೇಳಿದರೂ ತಪ್ಪಾಗಲಾರದು. ಆದರೆ ಇಂದು  ನಟ ಚಿಕ್ಕಣ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಹೆಚ್ಚು ಕಾಮಿಡಿಯಿಂದಲೇ ಫೇಮಸ್ ಆಗಿದ್ದಾರೆ. ಕಿರಾತಕ, ಅಧ್ಯಕ್ಷ, ರನ್ನ, ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಚಿಕ್ಕಣ್ಣ. ಹಾಗೆ ಯಾವ ಸ್ಟಾರ್ ನಟರಿಗೂ ಕೂಡ ಕಡಿಮೆ ಇಲ್ಲ ಎನ್ನಬಹುದು. ಇಂದೂ ನಟ ಚಿಕ್ಕಣ್ಣ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಅವರ ಮನೆ ಮುಂದೆ ಬರುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಇಷ್ಟು ಫೇಮಸ್ ಆಗಿರುವ ನಟ ಚಿಕ್ಕಣ್ಣ ಅವರ ಮದುವೆ ವಿಚಾರ ಆಗಾಗ ಸುದ್ದಿ ಆಗುತ್ತಲೆ ಇದೆ. ಆದರೆ ಅವೆಲ್ಲವೂ ಗಾಸಿಪ್ ಗಳಾಗಿಯೇ ಉಳಿದಿದ್ದು ಸದಾ ಈ ಪ್ರಶ್ನೆ ಮಾಡಿದಾಗ ಚಿಕ್ಕಣ್ಣ ಅವರು ಮುಖದ ಮೇಲೆ ನಗೆ ಬೇರೆ ಸುಮ್ಮನೆ ಆಗಿಬಿಡುತ್ತಿದ್ದರು.

ಆದರೆ ಈ ಬಾರಿ ಮದುವೆ ಆಗಲಿದ್ದಾರಂತೆ. ಹೀಗಂತ ಅವರ ಮನೆಯವರು ಹೇಳಿಕೊಂಡಿರುವ ವಿಷಯ ಬಯಲಾಗಿದೆ. ನಟ ಚಿಕ್ಕಣ್ಣ ಅವರ ಅಭಿನಯದ ಉಪಾಧ್ಯಕ್ಷ ಶೂಟಿಂಗ್ ಮುಗಿಯುತಿದ್ದಂತೆ ಚಿಕ್ಕಣ್ಣನವರಿಗೆ ಪಕ್ಕಾ ಮದುವೆಯನ್ನು ಮಾಡುತ್ತಾರಂತೆ. ಅಸಲಿಗೆ ಆ ಹುಡುಗಿ ಯಾರು? ಅಸಲಿಗೆ ಇದು ಪ್ರೇಮ ವಿವಾಹ? ಅಥವಾ ಅರೆಂಜ್ ಮ್ಯಾರೇಜ? ಎನ್ನುವ ಯಾವ ಮಾಹಿತಿ ತಿಳಿದು ಬಂದಿಲ್ಲ. ಆದರೆ ಚಿಕ್ಕಣ್ಣ ಅವರಿಗೆ ಅವರ ಮನೆಯವರು ಯಾವ ಹುಡುಗಿ ನೋಡಿ ಇಟ್ಟಿದ್ದಾರೆ ಎಂದು ಇಷ್ಟರಲ್ಲೇ ಗೊತ್ತಾಗಲಿದೆಯಂತೆ. ಅದು ಈಗಲೇ ಯಾವ ಮಾಹಿತಿ ಕೂಡ ಬಹಿರಂಗವಾಗಿ ತಿಳಿದು ಬಂದಿಲ್ಲ. ಆದರೆ ಉಪಾಧ್ಯಕ್ಷ ಸಿನಿಮಾ ಮುಗಿಯುತ್ತಿದ್ದಂತೆ ಚಿಕ್ಕಣ್ಣ ಅವರಿಗೆ ಮದುವೆ ಮಾಡುವುದು ಕನ್ಫರ್ಮ್ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಚಿಕ್ಕಣ್ಣ ಅವರ ಮುಂದಿನ ದಾಂಪತ್ಯ ಜೀವನಕ್ಕೆ ಶುಭ ಕೋರಿ ಧನ್ಯವಾದಗಳು...